ವಾಷಿಂಗ್ಟನ್: ಅಮೆರಿಕಾದ ಆಯೋವಾ ರಾಜ್ಯದ ಡೆಸ್ ಮೊಯಿನ್'ನಲ್ಲಿ ಭಾರತೀಯ ಇಬ್ಬರು ಬಾಲಕರೂ ಸೇರಿದಂತೆ ಭಾರತೀಯ ಮೂಲದ ಕುಟುಂಬದ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.  


COMMERCIAL BREAK
SCROLL TO CONTINUE READING

ಭಾರತೀಯ ಮೂಲದ ಐಟಿ ಉದ್ಯೋಗಿ ಮತ್ತವರ ಕುಟುಂಬದ ಸದಸ್ಯರು ತಮ್ಮ ನಿವಾಸದಲ್ಲಿ ಶನಿವಾರ ಮುಂಜಾನೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚಂದ್ರಶೇಖರ್ ಸುಂಕಾರಾ (44), ಅವರ ಪತ್ನಿ ಲಾವಣ್ಯ (41) 15 ಮತ್ತು 10 ವರ್ಷದ ಇಬ್ಬರು ಗಂಡು ಮಕ್ಕಳು ಮೃತ ದುರ್ದೈವಿಗಳಾಗಿದ್ದಾರೆ. 


ಚಂದ್ರಶೇಕರ್ ಸುಂಕಾರ ಅವರು ಪಬ್ಲಿಕ್ ಸೇಫ್ಟಿ ಟೆಕ್ನಾಲಜಿ ಸರ್ವಿಸ್ ಬ್ಯುರೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮತ್ತವರ ಪತ್ನಿ ಲಾವಣ್ಯಾ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.


ಮೃತರು ಆಂಧ್ರ ಪ್ರದೇಶ ಮೂಲದವರೆಂದು ತಿಳಿದು ಬಂದಿದ್ದು, ಅಮೆರಿಕದಲ್ಲಿರುವ ತೆಲುಗು ಅಸೋಸಿಯೇಶನ್ ಭಾರತೀಯ ರಾಯಭಾರಿ ಕಚೇರಿಯ ಸಂಪರ್ಕದಲ್ಲಿದೆ. ಸದ್ಯ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.