ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವ್ಯಾಪಕ ಬದಲಾವಣೆ ಬಯಸಿರುವ ಜಿ-4 ರಾಷ್ಟ್ರಗಳು ಒಗ್ಗಟ್ಟನ್ನು ಪ್ರದರ್ಶಿಸಿವೆ. ಜೊತೆಗೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ರಾಷ್ಟ್ರವಾಗಿರುವ ಚೀನಾವನ್ನು ತೀವ್ರವಾಗಿ ಗುರಿಯಾಗಿಸಲಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ರಾಷ್ಟ್ರಗಳ ಸಂಖ್ಯೆ ಏರಿಕೆಯಾಗಬೇಕು ಎಂದು ಜಿ-4 ರಾಷ್ಟ್ರಗಳು ಬಯಸುತ್ತಿವೆ ಹಾಗೂ ಭಾರತ, ಜರ್ಮನಿ, ಜಪಾನ್ ಹಾಗೂ ಬ್ರೆಜಿಲ್ ರಾಷ್ಟ್ರಗಳಿಗೂ ಕೂಡ ಇದರಲ್ಲಿ ಸ್ಥಾನ ದೊರಕಬೇಕು ಎಂಬುದು ಅವುಗಳ ನಿಲುವಾಗಿದೆ.


COMMERCIAL BREAK
SCROLL TO CONTINUE READING

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಗೆ ಪತ್ರ ಬರೆದ ಜಿ-4 ರಾಷ್ಟ್ರಗಳು 
ಜಿ-4 ರಾಷ್ಟ್ರಗಳ ಪರವಾಗಿ ಬರೆದ ಪತ್ರವನ್ನು ಭಾರತದ ಖಾಯಂ ಉಪ ಪ್ರತಿನಿಧಿ ನಾಗರಾಜ್ ನಾಯ್ಡು ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ. ಪ್ರಸ್ತುತ, ಟಿಜ್ಜಾನಿ ಮುಹಮ್ಮದ್-ಬಂಡೆ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿದ್ದಾರೆ.


ಪತ್ರದಲ್ಲೆನಿದೆ?
ಈ ಪತ್ರದಲ್ಲಿ, ಚೀನಾ ದೇಶದ ಹೆಸರನ್ನು ಹೇಳದೆ ಅದರ ಮೇಲೆ  ನೇರವಾಗಿ ದಾಳಿ ಮಾಡಲಾಗಿದೆ. 'ಒಂದು ದಶಕದಿಂದ ಯುಎಸ್‌ಎಸಿಯನ್ನು ಬದಲಾಯಿಸುವ ಪ್ರಯತ್ನಗಳು ಕಾಗದದ ಮೇಲಿವೆ, ಆದರೆ ಇದಕ್ಕೆ ವಿರುದ್ಧವಾಗಿರುವ ಕೆಲವು ದೇಶಗಳು ಈ ಬದಲಾವಣೆಗಳನ್ನು ನೋಡಲು ಬಯಸುವುದಿಲ್ಲ' ವಿಸ್ತ್ರತವಾಗಿ ಈ ಕುರಿತು ಪತ್ರದಲ್ಲಿ ವಿವರಣೆ ನೀಡಿರುವ ರಾಸ್ಥ್ರಗಳು  'ಅಂತರ್-ಸರ್ಕಾರಿ ಮಾತುಕತೆಗಳು -ಐಜಿಎನ್ ಹೆಚ್ಚು ಕಾಲ ಸಿಲುಕಿಕೊಳ್ಳಬಾರದು ಎಂಬುದನ್ನು ನಿರ್ಧರಿಸಬೇಕು. ಏಕೆಂದರೆ ಯುಎನ್ ಸೆಕ್ಯುರಿಟಿ ಕೌನ್ಸಿಲ್ನಲ್ಲಿ ಮಾತುಕತೆಗಳು ಸಿಲುಕಿಕೊಳ್ಳಲು ಬಯಸುವವರು ಅದೇ ಕೆಲಸವನ್ನು ಮುಂದುವರಿಸಿದರೆ, UNSC ಯಲ್ಲಿ ಬದಲಾವಣೆ ತರಲು ನಾವು ಐಜಿಎನ್‌ನಿಂದ ವಿಭಿನ್ನ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದಿವೆ. ಭಾರತದೊಂದಿಗೆ ಜರ್ಮನಿ ಮತ್ತು ಜಪಾನ್ ಅನ್ನು ಭದ್ರತಾ ಮಂಡಳಿಯ ಖಾಯಂ ಸದಸ್ಯರನ್ನಾಗಿ ಮಾಡಲು ಚೀನಾ ವಿರೋಧಿಸುತ್ತದೆ. ಇದೆ ಕಾರಣದಿಂದ  ಯುಎನ್‌ಎಸ್‌ಸಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ವಿಷಯದಲ್ಲಿ ಅದು ಯಾವಾಗಲೂ ಸಹಕಾರ ನೀಡುವುದಿಲ್ಲ.