ನವದೆಹಲಿ: ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಜಿ೨೦ ಶೃಂಗಸಭೆಗೆ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಈಗ  ಪ್ರಧಾನಿ ಮೋದಿ ಭಾರತದ ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಗೆ ಹಸ್ತಾಂತರಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದೇ ವೇಳೆ ಹಿಂದಿಯಲ್ಲಿ ಮಾತನಾಡಿದ ಅವರು ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸುತ್ತಾ“ಒಂದು ಭೂಮಿ, ಒಂದು ಕುಟುಂಬ, ಮಾರ್ಗಸೂಚಿಯಾಗಲಿ, ಒಂದು ಭವಿಷ್ಯವು ಆಹ್ಲಾದಕರವಾಗಿರುತ್ತದೆ ಎಂದು ಅವರು ಹೇಳಿದರು. ಇನ್ನೂ ಮುಂದುವರೆದು '140 ಕೋಟಿ ಭಾರತೀಯರ ಪರವಾಗಿ ನಾನು ಪ್ರಪಂಚದಾದ್ಯಂತ ಭರವಸೆ ಮತ್ತು ಶಾಂತಿ ನೆಲೆಸಲಿ ಎಂದು ನಾನು ಬಯಸುತ್ತೇನೆ" ಎಂದು ಹೇಳಿದರು.


ಅವರು ಔಪಚಾರಿಕವಾಗಿ G-20 ಅಧ್ಯಕ್ಷತೆಯ ಬ್ಯಾಟನ್ ಅನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಹಸ್ತಾಂತರಿಸಿದರು. ಬ್ರೆಜಿಲ್ ಜಿ-20 ರ ಮುಂದಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿದೆ.ನವೆಂಬರ್ 24 ರಂದು ಬ್ರೆಜಿಲ್ ಭಾರತದಿಂದ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದೆ.


ಇದನ್ನೂ ಓದಿ-"ಬಿಜೆಪಿಗೆ ಭಾರತದ ಬಗ್ಗೆಯೂ ಗೌರವ ಇಲ್ಲ, ಇಂಡಿಯಾದ ಘನತೆಯೂ ಗೊತ್ತಿಲ್ಲ"


"ನಾನು ಬ್ರೆಜಿಲ್ ಅಧ್ಯಕ್ಷ ಮತ್ತು ನನ್ನ ಸ್ನೇಹಿತ ಲುಲಾ ಡಾ ಸಿಲ್ವಾ ಅವರನ್ನು ಅಭಿನಂದಿಸುತ್ತೇನೆ ಮತ್ತು ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸುತ್ತೇನೆ" ಎಂದು ನವದೆಹಲಿ ಜಿ 20 ಶೃಂಗಸಭೆ ಮುಕ್ತಾಯಗೊಳ್ಳುವ ನಿಮಿಷಗಳ ಮೊದಲು ಪಿಎಂ ಮೋದಿ ಹೇಳಿದರು.ಜಿ 20 ಶೃಂಗಸಭೆಯ 3 ನೇ ಅಧಿವೇಶನಕ್ಕೆ ಮುಂಚಿತವಾಗಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಮತ್ತು ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಸಿಗಳನ್ನು ಹಸ್ತಾಂತರಿಸಿದರು.


ಆಫ್ರಿಕನ್ ಯೂನಿಯನ್ ಅನ್ನು ಜಿ 20 ನ ಖಾಯಂ ಸದಸ್ಯರನ್ನಾಗಿ ಸೇರಿಸಲು ಭಾರತವು ಶನಿವಾರ ಐತಿಹಾಸಿಕ ಉಪಕ್ರಮವನ್ನು ತೆಗೆದುಕೊಂಡಿದೆ ಎಂದು ಹೇಳಿದರು. ನಾವು ಬಹುಪಕ್ಷೀಯ ಬ್ಯಾಂಕ್‌ಗಳ ಆದೇಶವನ್ನು ವಿಸ್ತರಿಸಬೇಕಾಗುತ್ತದೆ. ಈ ದಿಕ್ಕಿನಲ್ಲಿ ನಾವು ತಕ್ಷಣದ ಮತ್ತು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.


ಇದನ್ನೂ ಓದಿ-ಆಂಧ್ರ ಮಾಜಿ ಸಿಎಂ ಚಂದ್ರನಾಯ್ಡು ಬಂಧನ ಆಂಧ್ರ ಮಾಜಿ ಸಿಎಂ ಚಂದ್ರನಾಯ್ಡು ಬಂಧನ


ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಸುಸ್ಥಿರತೆ ಮತ್ತು ಸ್ಥಿರತೆ ಪರಿವರ್ತನೆಯಷ್ಟೇ ಮುಖ್ಯ.ಹಸಿರು ಅಭಿವೃದ್ಧಿ ಒಪ್ಪಂದ, ಎಸ್‌ಡಿಜಿಗಳ ಮೇಲಿನ ಕ್ರಿಯಾ ಯೋಜನೆ, ಭ್ರಷ್ಟಾಚಾರ-ವಿರೋಧಿ ಮೇಲಿನ ಉನ್ನತ ಮಟ್ಟದ ತತ್ವಗಳು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಎಂಡಿಬಿ ಸುಧಾರಣೆಗಳ ಕುರಿತು ನಮ್ಮ ಸಂಕಲ್ಪವನ್ನು ಕಾರ್ಯರೂಪಕ್ಕೆ ತರಲು ನಾವು ಪ್ರತಿಜ್ಞೆ ಮಾಡೋಣ ಎಂದು ಪ್ರಧಾನಿ ಮೋದಿ ಹೇಳಿದರು. 


ಇಂದು ಜಗತ್ತು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ ಮೋದಿ, ಇವು ರಾಷ್ಟ್ರಗಳ ವರ್ತಮಾನ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು. “ಸೈಬರ್ ಭದ್ರತೆ ಮತ್ತು ಕ್ರಿಪ್ಟೋ ಕರೆನ್ಸಿಯಿಂದ ಎದುರಾಗುವ ಸವಾಲುಗಳ ಬಗ್ಗೆ ನಮಗೆ ತಿಳಿದಿದೆ. ಕ್ರಿಪ್ಟೋ ಕರೆನ್ಸಿ, ಸಾಮಾಜಿಕ ಕ್ರಮ, ವಿತ್ತೀಯ ಮತ್ತು ಆರ್ಥಿಕ ಸ್ಥಿರತೆಯ ಸಮಸ್ಯೆಯು ಪ್ರತಿಯೊಬ್ಬರಿಗೂ ಹೊಸ ವಿಷಯವಾಗಿ ಹೊರಹೊಮ್ಮಿದೆ. ಆದ್ದರಿಂದ, ಕ್ರಿಪ್ಟೋ ಕರೆನ್ಸಿಗಳನ್ನು ನಿಯಂತ್ರಿಸಲು ನಾವು ಜಾಗತಿಕ ಮಾನದಂಡಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಸೈಬರ್ ಜಗತ್ತಿನಲ್ಲಿ ಭಯೋತ್ಪಾದನೆಯು ಹೊಸ ಮೂಲಗಳು ಮತ್ತು ನಿಧಿಯ ಮಾರ್ಗಗಳನ್ನು ಪಡೆಯುತ್ತಿದೆ. ಎಲ್ಲಾ ರಾಷ್ಟ್ರಗಳ ಭದ್ರತೆ ಮತ್ತು ಸಮೃದ್ಧಿಗೆ ಸಂಬಂಧಿಸಿದಂತೆ ಇದು ಬಹಳ ಮುಖ್ಯವಾದ ವಿಷಯವಾಗಿದೆ. ನಮ್ಮ ಭವಿಷ್ಯವನ್ನು ಸಶಕ್ತಗೊಳಿಸಲು, ನಾವು ಎಲ್ಲಾ ದೇಶಗಳ ಸುರಕ್ಷತೆಯ ಬಗ್ಗೆ ಸಹಾನುಭೂತಿ ಮತ್ತು ಗಮನ ಹರಿಸಬೇಕು ಎಂದರು.


ಇದನ್ನೂ ಓದಿ-"ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲ"


ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯದ ಪ್ರಯತ್ನಗಳ ಜೊತೆಗೆ ಜಿ 20 ಭರವಸೆಯ ಪ್ರಯತ್ನಗಳ ವೇದಿಕೆಯಾಗಿದೆ.ನಾವು ಜಾಗತಿಕ ಕುಟುಂಬದ ಪರಿಕಲ್ಪನೆಯನ್ನು ಮೀರಿ ಮತ್ತು ಜಾಗತಿಕ ಭವಿಷ್ಯವನ್ನು ರಿಯಾಲಿಟಿ ಮಾಡುವ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಹೇಳಿದರು.ನವದೆಹಲಿ ಜಿ-20 ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಪ್ರಗತಿಯನ್ನು ಪರಿಶೀಲಿಸಲು ನವೆಂಬರ್‌ನಲ್ಲಿ ಜಿ-20 ರ ವರ್ಚುವಲ್ ಸಭೆಯನ್ನು ಮೋದಿ ಪ್ರಸ್ತಾಪಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.