World’s Heaviest Strawberry: ಹಲವು ಬಾರಿ ನಮ್ಮ ದೃಷ್ಟಿಗೆ ಬೀಳುವ ಹಲವು ಹಣ್ಣುಗಳು ಮತ್ತು ತರಕಾರಿಗಳು ಅವುಗಳನ್ನು ನಮಗೆ ಪದೇ ಪದೇ ನೋಡುವಂತೆ ಒತ್ತಾಯಿಸುತ್ತವೆ. ಅಂದರೆ ಅವುಗಳ ಗಾತ್ರ, ತೂಕ ಇತ್ಯಾದಿಗಳು ಸಾಮಾನ್ಯ ಗಾತ್ರ ಹಾಗೂ ತೂಕಕ್ಕಿಂತ ಹೆಚ್ಚು ಅಥವಾ ಕಡಿಮೆ ಇರುತ್ತದೆ. ಇಂತಹುದೇ ಒಂದು ರೋಚಕ ಪ್ರಕರಣ ಇಸ್ರೇಲ್ (Israel) ನಿಂದ ಹೊರಹೊಮ್ಮಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ವಿಶ್ವ ದಾಖಲೆ ಪುಸ್ತಕ ಸೇರಿದ ಸ್ಟ್ರಾಬೆರಿ
ವಿಶ್ವಾದ್ಯಂತ ಹಲವು ಬಾರಿ, ಕೆಲ ತರಕಾರಿಗಳು ಅಥವಾ ಹಣ್ಣುಗಳು ಭಾರಿ ಚರ್ಚೆಗೆ ಗ್ರಾಸವಾಗುತ್ತವೆ. ಅವುಗಳ  ಗಾತ್ರವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಅಥವಾ ಕಡಿಮೆಯಾಗಿರುತ್ತದೆ. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಹಣ್ಣು ವಿಶ್ವದಾಖಲೆ ಮಾಡಿದೆ. ಹೌದು, ನಾವು ಸ್ಟ್ರಾಬೆರಿಗಳ ಬಗ್ಗೆ ಮಾತನಾಡುತ್ತಿದ್ದೇವೆ.


ಇಡೀ ವಿಶ್ವಾದ್ಯಂತ ಈ ಸ್ಟ್ರಾಬೆರಿ ಚರ್ಚೆಯಾಗುತ್ತಿದೆ
ಸ್ಟ್ರಾಬೆರಿಗಳ (Giant Strawberry) ಬಗ್ಗೆ ಎಲ್ಲರಿಗೂ ತಿಳಿದಿದೆ, ಇದು ತುಂಬಾ ಚಿಕ್ಕದಾದ ಮತ್ತು ಕೆಂಪು ಬಣ್ಣದ ಮುದ್ದಾದ ಹಣ್ಣು. ‘ದಿ ಮಿರರ್’ ವರದಿ ಪ್ರಕಾರ ಇಸ್ರೇಲ್ ನಲ್ಲಿ ನೆಲೆಸಿರುವ ಏರಿಯಲ್ ಚಾಹಿ ಎಂಬ ರೈತನ ಜಮೀನಿನಲ್ಲಿ ಪತ್ತೆಯಾಗಿರುವ ಸ್ಟ್ರಾಬೆರಿ ಇಡೀ ವಿಶ್ವದ ಗಮನ ಸೆಳೆದಿದೆ. ಈ ಸ್ಟ್ರಾಬೆರಿ ಗಾತ್ರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿದೆ ಮತ್ತು ಭಾರವಾಗಿದೆ.


ಈ ಸ್ಟ್ರಾಬೆರಿ ತೂಕ 289 ಗ್ರಾಂ
ಏರಿಯಲ್ ಚಾಹಿ (Ariel Chahi) ವಿಶ್ವದ ಅತಿ ದೊಡ್ಡ ಸ್ಟ್ರಾಬೆರಿಯನ್ನು ಬೆಳೆದಿದ್ದಾರೆ. ಇದರಿಂದಾಗಿ ಈ ಸ್ಟ್ರಾಬೆರಿ ಹೆಸರು ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕ (Guinnes World Records) ಸೇರಿದೆ. ವಿಶ್ವದ ಅತಿದೊಡ್ಡ ಸ್ಟ್ರಾಬೆರಿ 289 ಗ್ರಾಂ ತೂಗುತ್ತದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಇಲಾನ್ ತಳಿಯ ಈ ಸ್ಟ್ರಾಬೆರಿಯನ್ನು 'ಸ್ಟ್ರಾಬೆರಿ ಇನ್ ದಿ ಫೀಲ್ಡ್' ಮೂಲಕ ಬೆಳೆಸಲಾಗಿದೆ.


ಇದನ್ನೂ ಓದಿ-Russia-Ukraine Crisis: ಉಕ್ರೇನ್ ವಿರುದ್ಧ ರಷ್ಯಾದ 'ರಾಸಾಯನಿಕ ಸಂಚು'? ವಿಶ್ವದ ದೊಡ್ಡಣ್ಣ ಹೇಳಿದ್ದೇನು?


ಇಲ್ಲಿದೆ ಸ್ಟ್ರಾಬೆರಿ ವಿಡಿಯೋ
ಸ್ಟ್ರಾಬೆರಿ ಬೆಳೆಸುವುದು ನಮ್ಮ ಕೌಟುಂಬಿಕ ವ್ಯವಹಾರ ಎಂದು ಈ ಸ್ಟ್ರಾಬೆರಿಯನ್ನು ಬೆಳೆದ ರೈತ ಏರಿಯಲ್ ಚಾಹಿ ಹೇಳುತ್ತಾರೆ. ಈ ಸ್ಟ್ರಾಬೆರಿಯ ವೀಡಿಯೊವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸಹ ಹಂಚಿಕೊಳ್ಳಲಾಗಿದೆ, ಇದರಲ್ಲಿ ಸ್ಟ್ರಾಬೆರಿಗಳನ್ನು ತೂಗುವುದನ್ನು ತೋರಿಸಲಾಗಿದೆ.



ಇದನ್ನೂ ಓದಿ-ಸೈನ್ಸ್ ಲ್ಯಾಬ್ ನಲ್ಲಿತ್ತು ಭಾರೀ ಗಾತ್ರದ ಹೆಬ್ಬಾವು.. ಬೆಚ್ಚಿಬಿದ್ದ ಪ್ರಯೋಗಾಲಯದ ಒಳಗೆ ಬಂದ ಟೀಚರ್!


ಅನುಭವ ಹಂಚಿಕೊಂಡ ರೈತ
ಸ್ಟ್ರಾಬೆರಿಗಳ ಕುರಿತಾದ ಇಂತಹ ದಾಖಲೆ ಈ ಮೊದಲು 2015 ರಲ್ಲಿ ಪ್ರಕಟವಾಗಿತ್ತು. 2015 ರಲ್ಲಿ, ಜಪಾನ್‌ನ ಫುಕುವೊಕಾದಲ್ಲಿ 250 ಗ್ರಾಂ ಸ್ಟ್ರಾಬೆರಿ ಕಂಡುಬಂದಿತ್ತು. ಏರಿಯಲ್ ಚಾಹಿಗೆ ಈ ವಿಷಯ ತಿಳಿದಾಗ, ಅವರು ನಗುತ್ತಾ ಹಾಡಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ಓಮಿಕ್ರಾನ್ ಪ್ರಕರಣಗಳ ಇಳಿಕೆಯ ನಡುವೆಯೇ ಹೊಸ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ