Gaza :  ಗಾಜಾಪಟ್ಟಿಯ ಯುದ್ಧ ಪೀಡಿತ ಪ್ರದೇಶಗಳಲ್ಲಿರು ನಿರಾಶ್ರಿತರಿಗೆ ವಿಮಾನದ ಮೂಲಕ ರವಾನಿಸಿದ ಆಹಾರ ಪದಾರ್ಥಗಳು  ಮೇಲೆ ಬಿದ್ದುಹಲವಾರು ಸಾವನ್ನಪ್ಪಿದ್ದಾರೆ. 


COMMERCIAL BREAK
SCROLL TO CONTINUE READING

ಅಹಾರ ಮತ್ತು ಇತರೆ ಅಗತ್ಯವಸ್ತುಗಳಿದ್ದ ಪಾರ್ಸೆಲ್ ನ ಪ್ಯಾರಾಚೂಟ್ ತೆರೆಯುವಲ್ಲಿ ವಿಫಲವಾಗಿದ್ದು, ಈ ವೇಳೆ ಅದು ನೇರವಾಗಿ ಜನ ವಸತಿ ಪ್ರದೇಶದ ಮೇಲೆ ಬಿದ್ದಿದೆ. ಗಾಜಾಪಟ್ಟಿಯ ನಿರಾಶ್ರಿತ ಮಹಿಳೆಯರು ಮತ್ತು ಪುರುಷರು ಅದರಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.


ಇದನ್ನು ಓದಿ : ICC World Test Championship: ಇಂಗ್ಲೆಂಡ್ ವಿರುದ್ಧ 4-1 ಅಂತರದಲ್ಲಿ ಗೆದ್ದು, ಅಗ್ರ ಸ್ಥಾನಕ್ಕೇರಿದ ಭಾರತ


ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒಳಗೊಂಡ ಪಾರ್ಸೆಲ್ ಅಲ್-ಶಾತಿ ನಿರಾಶ್ರಿತರ ಶಿಬಿರದ ಸಮೀಪವಿರುವ ಮನೆಯ ಛಾವಣಿಯ ಮೇಲೆ ರಾಕೆಟ್‌ನಂತೆ ಬಿದ್ದಿದೆ. ಈ ವೇಳೆ ಭಾರವಾದ ಈ ಪಾರ್ಸೆಲ್ ಅದರ ಕೆಳಗೆ ಇದ್ದ ಜನರ ಮೇಲೆ ಬಿದ್ದಿದ್ದು ಅದರ ಭಾರಕ್ಕೆ ಹಲವರು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಮಕ್ಕಳು ಸೇರಿದಂತೆ ಈ ದುರಂತದಲ್ಲಿ 5 ಮಂದಿ ಸಾವಿಗೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ