ಏರ್ ಪೋರ್ಟ್ ನಲ್ಲಿ ಬ್ಯಾಗ್ ತೂಕ ತಗ್ಗಿಸಲು ಈ ಮಹಿಳೆ ಮಾಡಿದ ಅದ್ಬುತ ಪ್ಲಾನ್ ಆದ್ರೂ ಏನು ಗೊತ್ತೇ ?
ಇತ್ತೀಚಿಗೆ ಪ್ರಯಾಣಿಕರೊಬ್ಬರು ತಮ್ಮ ಹೆಚ್ಚುವರಿ ಸಾಮಾನು ಸರಂಜಾಮುಗಳಿಗಾಗಿ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಸೂಟ್ ಕೇಸ್ ನಲ್ಲಿರುವ ಬಹುತೇಕ ಬಟ್ಟೆಗಳನ್ನು ಧರಿಸಿದ ಘಟನೆ ನಡೆದಿದೆ.
ನವದೆಹಲಿ: ಇತ್ತೀಚಿಗೆ ಪ್ರಯಾಣಿಕರೊಬ್ಬರು ತಮ್ಮ ಹೆಚ್ಚುವರಿ ಸಾಮಾನು ಸರಂಜಾಮುಗಳಿಗಾಗಿ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಸೂಟ್ ಕೇಸ್ ನಲ್ಲಿರುವ ಬಹುತೇಕ ಬಟ್ಟೆಗಳನ್ನು ಧರಿಸಿದ ಘಟನೆ ನಡೆದಿದೆ.
ಅಕ್ಟೋಬರ್ 2 ರಂದು ಫಿಲಿಪೈನ್ಸ್‌ನ ಜೆಲ್ ರೊಡ್ರಿಗಸ್ ಎನ್ನುವವರು ತಮ್ಮ ಫೇಸ್‌ಬುಕ್ ಪೋಸ್ಟ್ ನಲ್ಲಿ ವಿವರಿಸಿದ್ದು, ಆಕೆಯ ಕ್ಯಾರಿ-ಆನ್ ಲಗೇಜ್ ಗರಿಷ್ಠ 7 ಕಿಲೋಗ್ರಾಂಗಳಷ್ಟು ತೂಕವನ್ನು ಮೀರಿದೆ ಎಂದು ವಿಮಾನಯಾನ ಸಿಬ್ಬಂದಿ ತಿಳಿಸಿದ್ದಾರೆ. ಇದರ ತೂಕ 9.5 ಕಿಲೋಗ್ರಾಂಗಳು ಎನ್ನಲಾಗಿದೆ. ತಕ್ಷಣ ಅವರು ಹೆಚ್ಚುವರಿ ಸಾಮಾನು ಶುಲ್ಕವನ್ನು ಪಾವತಿಸಲು ನಿರಾಕರಿಸಿದರು.
ಇದರ ಬದಲಾಗಿ ಅವರು ಈ ಹಿಂದೆ ಹಲವರು ಬಳಸಿದ ಟ್ರಿಕ್ಸ್ ನಂತೆ ಸುಮಾರು 2.5 ಕಿಲೋ ಬಟ್ಟೆಯನ್ನು ಧರಿಸುವ ಮೂಲಕ ಬ್ಯಾಗಿನ ಭಾರವನ್ನು ಕೇವಲ 6.5 ಕಿ.ಗ್ರಾಂಗೆ ಇಳಿಸುವ ಮೂಲಕ ಅಲ್ಲಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಈಗ ಈ ಫೋಟೋವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಈ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರಲ್ಲಿ ಅವರು ಐದು ಜೋಡಿ ಪ್ಯಾಂಟ್‌ಗಳು ಮತ್ತು ಅನೇಕ ಟೀ ಶರ್ಟ್‌ಗಳು ಮತ್ತು ಜಾಕೆಟ್‌ಗಳನ್ನು ಧರಿಸಿರುವುದನ್ನು ತೋರಿಸುತ್ತದೆ.
ತಮ್ಮ ಪೋಸ್ಟ್ ನಲ್ಲಿ ಅವರು 9 ಕೆಜಿಯಿಂದ 6.5 ಕೆಜಿ ಬ್ಯಾಗೇಜ್ # ಎಕ್ಸೆಸ್ ಬ್ಯಾಗೇಜ್ ಚಾಲೆಂಜ್ ಸ್ವೀಕರಿಸಲಾಗಿದೆ' ಎಂದು ಅವರು ಬರೆದಿದ್ದಾರೆ. ಈ ಪೋಸ್ಟ್ ಈಗ 20,000 ಕ್ಕೂ ಹೆಚ್ಚು 'ಶೇರ್ ಗಳು ' ಮತ್ತು 33,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳೊಂದಿಗೆ ಚಿತ್ರ ವೈರಲ್ ಆಗಿದೆ.