China : ಅಮೆರಿಕಾದಿಂದ ನಿರ್ಬಂಧ ಹೇರಲ್ಪಟ್ಟ ಏರೋಸ್ಪೇಸ್ ತಜ್ಞ ಈಗ ಚೀನಾದ ನೂತನ ರಕ್ಷಣಾ ಮುಖ್ಯಸ್ಥ!
China’s Defence Minister : ಚೀನಾದ ಕಮ್ಯೂನಿಸ್ಟ್ ಸರ್ಕಾರ ಈ ಮೊದಲು ಅಮೇರಿಕಾದಿಂದ ನಿರ್ಬಂಧ ಹೇರಲ್ಪಟ್ಟಿದ್ದ ವ್ಯಕ್ತಿಯೊಬ್ಬರನ್ನು ತನ್ನ ನೂತನ ರಕ್ಷಣಾ ಸಚಿವರನ್ನಾಗಿ ನೇಮಿಸಿದೆ. ಒಂದು ವೇಳೆ ಆತ ಏನಾದರೂ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ಭೇಟಿ ಮಾಡುವ ಪರಿಸ್ಥಿತಿ ಎದುರಾದರೆ, ಇರುಸುಮುರುಸಾಗುವ ಸಾಧ್ಯತೆಗಳಿವೆ.
China’s New Defence Minister : ಚೀನಾದ ಕಮ್ಯೂನಿಸ್ಟ್ ಸರ್ಕಾರ ಈ ಮೊದಲು ಅಮೇರಿಕಾದಿಂದ ನಿರ್ಬಂಧ ಹೇರಲ್ಪಟ್ಟಿದ್ದ ವ್ಯಕ್ತಿಯೊಬ್ಬರನ್ನು ತನ್ನ ನೂತನ ರಕ್ಷಣಾ ಸಚಿವರನ್ನಾಗಿ ನೇಮಿಸಿದೆ. ಒಂದು ವೇಳೆ ಆತ ಏನಾದರೂ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರನ್ನು ಭೇಟಿ ಮಾಡುವ ಪರಿಸ್ಥಿತಿ ಎದುರಾದರೆ, ಇರುಸುಮುರುಸಾಗುವ ಸಾಧ್ಯತೆಗಳಿವೆ.
ಮಾರ್ಚ್ 12, ಭಾನುವಾರದಂದು ಬೀಜಿಂಗ್‌ನಲ್ಲಿ ನಡೆದ ನ್ಯಾಷನಲ್ ಕಾಂಗ್ರೆಸ್‌ನಲ್ಲಿ ಜನರಲ್ ಲಿ ಶಾಂಗ್‌ಫು ಅವರನ್ನು ರಾಷ್ಟ್ರೀಯ ರಕ್ಷಣೆಯ ಸಚಿವರನ್ನಾಗಿ ಮತ್ತು ಸ್ಟೇಟ್ ಕೌನ್ಸಿಲರ್ ಆಗಿ ನೇಮಕಗೊಳಿಸಲಾಯಿತು. ಈ ಆಯ್ಕೆ ಅವಿರೋಧವಾಗಿ ನೆರವೇರಿದ್ದು, ಶಾಂಗ್‌ಫು ಅವರಿಗೆ ಈಗ ಚೀನಾದ ಕ್ಯಾಬಿನೆಟ್ ಸಚಿವರಿಗೆ ಸಮಾನವಾದ ಸ್ಥಾನಮಾನ ನೀಡಲಾಗಿದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ : Weird News: 9 ತಿಂಗಳು ಅಲ್ಲ 9 ವರ್ಷಗಳವರೆಗೆ ಗರ್ಭ ಧರಿಸಿದ ಮಹಿಳೆ, ನಂತರ ಆಗಿದ್ದೇನು ನೀವೇ ಓದಿ!
65 ವರ್ಷದ ಲಿ ಶಾಂಗ್‌ಫು ಅವರು ವೇ ಫೆಂಘೆ ಅವರಿಂದ ನೂತನ ರಕ್ಷಣಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಕಾಂಗ್ರೆಸ್ ವೇಳೆ ವೇ ಅವರು ಸೆಂಟ್ರಲ್ ಮಿಲಿಟರಿ ಕಮಿಷನ್ ನಿಂದ ಹೊರ ನಡೆದದ್ದರಿಂದ ಅವರು ನಿವೃತ್ತಿ ಹೊಂದಬಹುದಾದ ಸಾಧ್ಯತೆಗಳನ್ನು ತೋರಿಸಿದ್ದವು.
ಅದೇ ಸಭೆಯಲ್ಲಿ ಲಿ ಕಮಿಷನ್‌ನ ಸದಸ್ಯರಾಗಿ ನೇಮಕಗೊಂಡರು. ಆ ಮೂಲಕ ಅವರು ಚೀನಾ ಸೇನೆಯ ಸ್ಟ್ರಾಟೆಜಿಕ್ ಸಪೋರ್ಟ್ ಫೋರ್ಸ್‌ನಿಂದ ನೇಮಕಗೊಂಡ ಮೊದಲ ಯೋಧ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಸೇನಾ ಅಂಗಸಂಸ್ಥೆಯನ್ನು 2015ರಲ್ಲಿ ಆರಂಭಿಸಲಾಗಿದ್ದು, ಮೂಲತಃ ಬಾಹ್ಯಾಕಾಶ, ಸೈಬರ್, ರಾಜಕೀಯ, ಮತ್ತು ಇಲೆಕ್ಟ್ರಾನಿಕ್ ವಾರ್‌ಫೇರ್ ಕಡೆಗೆ ಗಮನ ಹರಿಸುತ್ತಿತ್ತು.
ಚೀನಾ ಮತ್ತು ಅಮೆರಿಕಾದ ಸಂಬಂಧಗಳು ಈಗಾಗಲೇ ಹದಗೆಟ್ಟಿವೆ. ಅದಕ್ಕೆ ಪೂರಕವಾಗಿ, ಇತ್ತೀಚೆಗೆ ನಡೆದ ಘಟನೆಗಳಾದ ಅಮೆರಿಕಾದ ವಾಯುಪ್ರದೇಶದಲ್ಲಿ ಚೀನಾದ ಗುಪ್ತಚರ ಬಲೂನನ್ನು ಅಮೆರಿಕಾ ಹೊಡೆದುರುಳಿಸಿದ್ದು, ತೈವಾನ್ ವಿಚಾರದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಸೇರಿದಂತೆ ಇತರ ಬೆಳವಣಿಗೆಗಳಿಂದ ಚೀನಾ ಅಮೆರಿಕಾ ಸಂಬಂಧ ಇನ್ನಷ್ಟು ಹಾಳಾಗುವ ಸಾಧ್ಯತೆಗಳಿವೆ. ಅಮೆರಿಕಾ ಫೆಬ್ರವರಿ ತಿಂಗಳ ಆರಂಭದಲ್ಲಿ ಚೀನಾದೊಡನೆ ದೂರವಾಣಿ ಮೂಲಕ ಬಲೂನ್ ವಿಚಾರವನ್ನು ಪರಿಹರಿಸುವ ಪ್ರಯತ್ನ ನಡೆಸಿತ್ತು. ಆದರೆ ಚೀನಾ ಈ ಪ್ರಯತ್ನವನ್ನು ತಿರಸ್ಕರಿಸಿತು. ಅದರೊಡನೆ, ಎರಡೂ ರಾಷ್ಟ್ರಗಳ ಪ್ರಮುಖ ರಕ್ಷಣಾ ಅಧಿಕಾರಿಗಳು ನವೆಂವರ್ ಬಳಿಕ ಪರಸ್ಪರ ಸಂವಹನ ನಡೆಸಿಲ್ಲ ಎಂದು ಫೆಬ್ರವರಿ 28ರಂದು ಪೆಂಟಗನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2018ರಲ್ಲಿ ಲಿ ಚೀನಾದ ಡಿಫೆನ್ಸ್ ಟೆಕ್ನಾಲಜಿ ಕಮಿಷನ್‌ನ ಉಪಕರಣ ಅಭಿವೃದ್ಧಿ ವಿಭಾಗದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಅಮೆರಿಕಾದ ನಿರ್ಬಂಧಗಳನ್ನು ಮೀರಿದ್ದಾರೆ ಎಂದು ಅಮೆರಿಕಾ ಆರೋಪಿಸಿತ್ತು. ಲಿ ಶಾಂಗ್‌ಫು ರಷ್ಯಾದ ರೋಸೋಬೋರೋನ್ ಎಕ್ಸ್‌ಪೋರ್ಟ್ ಆಯುಧ ಮಾರಾಟಗಾರ ಸಂಸ್ಥೆಯಿಂದ ಸು-35 ಯುದ್ಧ ವಿಮಾನಗಳು ಮತ್ತು ಎಸ್-400 ಕ್ಷಿಪಣಿ ವ್ಯವಸ್ಥೆಗಳನ್ನು ಚೀನಾಗೆ ಸಾಗಾಟ ನಡೆಸಲು ಅನುವು ಮಾಡಿಕೊಡುವಲ್ಲಿ ಪಾತ್ರ ವಹಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ವಿಚಾರಕ್ಕೆ ಅಮೆರಿಕಾ ಲಿ ಅವರನ್ನು ಗುರಿಯಾಗಿಸಿತ್ತು.
ರಷ್ಯಾ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದ್ದು, ಪೂರ್ವ ಉಕ್ರೇನಿನಲ್ಲಿ ಕಾರ್ಯಾಚರಣೆ ನಡೆಸಿದ್ದು, ಹಾಗೂ ಇತರ ಚಟುವಟಿಕೆಗಳ ಕಾರಣದಿಂದ ಅಮೆರಿಕಾದ ಸ್ಟೇಟ್ ಇಲಾಖೆ ರಷ್ಯಾದ ಘಟಕಗಳ ಮೇಲೆ ನಿರ್ಬಂಧ ಹೇರಿತ್ತು. ಈ ಸಂದರ್ಭದಲ್ಲಿ ಲಿ ಹಾಗೂ ಅವರ ವಿಭಾಗದ ಮೇಲೂ ನಿರ್ಬಂಧ ಹೇರಲಾಗಿತ್ತು.
ಲಿ ಅವರಿಗೆ ಹಲವು ರೀತಿಯ ನಿಬಂಧನೆಗಳನ್ನು ಹಾಕಲಾಗಿತ್ತು. ಅವರಿಗೆ ಅಮೆರಿಕಾದ ವ್ಯಾಪ್ತಿಯಲ್ಲಿ ವಿದೇಶೀ ವಿನಿಮಯ ನಡೆಸಲು ಅನುಮತಿ ನಿರಾಕರಿಸಲಾಗಿತ್ತು. ಅದರೊಡನೆ, ಅವರಿಗೆ ಅಮೆರಿಕಾದ ಹಣಕಾಸು ವ್ಯವಸ್ಥೆಯಡಿ ವ್ಯವಹಾರ ನಡೆಸದಂತೆ ನಿರ್ಬಂಧಿಸಿ, ಅವರ ಅಮೆರಿಕಾದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಅವರಿಗೆ ವೀಸಾ ಪಡೆಯುವುದರಿಂದಲೂ ನಿರಾಕರಿಸಲಾಗಿತ್ತು.
ಈಗ ಲಿ ಶಾಂಗ್‌ಫು ಅವರನ್ನು ರಕ್ಷಣಾ ಮುಖ್ಯಸ್ಥರಾಗಿಸುವುದರ ಮೂಲಕ ಚೀನಾ ಏರೋಸ್ಪೇಸ್ ತಂತ್ರಜ್ಞಾನದ ಕಡೆ ಹೆಚ್ಚಿನ ಗಮನ ನೀಡುತ್ತಿದೆ ಎನ್ನಬಹುದು. ನ್ಯಾಷನಲ್ ಯುನಿವರ್ಸಿಟಿ ಆಫ್ ಡಿಫೆನ್ಸ್ ಟೆಕ್ನಾಲಜಿಯಲ್ಲಿ ವ್ಯಾಸಂಗ ನಡೆಸಿರುವ ಲಿ, ಈ ಮೊದಲು ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದ್ದರು. ಅಲ್ಲಿ ಅವರು ಚೀನಾದ ಮೊದಲ ಚಂದ್ರನ ಅಧ್ಯಯನ ಯೋಜನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಅದರೊಡನೆ, ಕೇಂದ್ರದಲ್ಲಿನ ತನ್ನ ಅವಧಿಯಲ್ಲಿ ಲಿ ಚೀನಾದ ಪ್ರಥಮ ಆ್ಯಂಟಿ ಸ್ಯಾಟಲೈಟ್ ಕ್ಷಿಪಣಿ ಉಡಾವಣೆಯನ್ನೂ ನಿರ್ವಹಿಸಿದ್ದರು.
ಚೀನಾದ ಅತ್ಯುನ್ನತ ಮಿಲಿಟರಿ ಅಧಿಕಾರದ ಉಪಾಧ್ಯಕ್ಷರಾಗಿರುವ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಡನೆ ಬಾಂಧವ್ಯ ಹೊಂದಿರುವ ಝಾಂಗ್ ಯೂಕ್ಸಿಯಾ ಅವರೊಡನೆ ಲಿ ವೃತ್ತಿಪರ ಸಂಬಂಧ ಹೊಂದಿದ್ದಾರೆ. ಲಿ ಅವರು ಚೀಫ್ ಆಫ್ ಸ್ಟಾಫ್ ಆಗಿ, ಅನಂತರ ಜನರಲ್ ಆರ್ಮಾಮೆಂಟ್ಸ್ ವಿಭಾಗದ ಉಪ ನಿರ್ದೇಶಕರಾಗಿ 2013ರಿಂದ 2015ರ ತನಕ ಕಾರ್ಯಾಚರಿಸಿದ್ದರು. ಆ ಅವಧಿಯಲ್ಲಿ ಝಾಂಗ್ ನಿರ್ದೇಶಕ ಸ್ಥಾನ ಹೊಂದಿದ್ದರು.
2017ರಲ್ಲಿ ಲಿ ಅವರು ಝಾಂಗ್ ಸ್ಥಾನವನ್ನು ಪಡೆದು, ಉಪಕರಣ ಅಭಿವೃದ್ಧಿ ವಿಭಾಗದ ನಾಯಕನಾಗಿ ನಾಗರಿಕ - ಮಿಲಿಟರಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಅದಕ್ಕೂ ಮೊದಲು, ಲಿ 2016ರಲ್ಲಿ ಸೇನೆಯ ಸ್ಟ್ರಾಟೆಜಿಕ್ ಸಪೋರ್ಟ್ ಫೋರ್ಸ್‌ನ ಪ್ರಥಮ ಚೀಫ್ ಆಫ್ ಸ್ಟಾಫ್ ಆಗಿ ಹಾಗೂ ಡೆಪ್ಯುಟಿ ಕಮಾಂಡರ್ ಆಗಿ ಕರ್ತವ್ಯ ನಿಭಾಯಿಸಿದ್ದರು.
ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನಲ್ಲಿ ಸರ್ಕಾರದ ಕಾರ್ಯ ವರದಿಯ ಕುರಿತು ನಡೆದ ಚರ್ಚೆಯ ವೇಳೆ ಲಿ ಅವರು ಚೀನಾದ ರಾಷ್ಟ್ರೀಯ ಕಾರ್ಯತಂತ್ರಗಳು ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದ್ದರು. ಇದು ನಾಗರಿಕ ಮತ್ತು ಮಿಲಿಟರಿ ಸಹಯೋಗದ ಕುರಿತು ಆಡಿದ ಮಾತುಗಳಾಗಿದ್ದವು. ಈ ಯೋಜನೆಯನ್ನು ಚೀನಾ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಯೋಜನೆ ಉದ್ಯಮಗಳು ಮತ್ತು ಸೇನಾಪಡೆಗಳ ಸಹಯೋಗವನ್ನು ಹೊಂದಿದೆ.
ಇದನ್ನೂ ಓದಿ : Viral Video : ವಧು ಮಾಡಿದ ಕೆಲಸಕ್ಕೆ ಬಟ್ಟೆ ಇಲ್ಲದೇ ಓಡಿಹೋದ ವರ
ಮಾರ್ಚ್ 6ರಂದು, ಲಿ ಚೀನಾ ಸೇನೆ ರಾಜಕೀಯ ರಾಜತಾಂತ್ರಿಕ ಕ್ರಮಗಳಿಗೆ ಸಹಕಾರಿಯಾದ ಮಿಲಿಟರಿ ರಾಜತಾಂತ್ರಿಕ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯತೆಗಳಿಗೆ ಒತ್ತು ನೀಡಿದ್ದರು. ಇದು ಒಟ್ಟಾರೆ ಕಾರ್ಯತಂತ್ರದ ಗುರಿಗಳನ್ನು ಸಾಧಿಸಲು ಅನುಕೂಲವಾಗಲಿದೆ ಎಂದಿದ್ದರು.
ಚೀನಾದ ವಾರ್ಷಿಕ ಸಂಸತ್ತಿನ ಅಧಿವೇಶನ ಮಾರ್ಚ್ 5ರಂದು ಬೀಜಿಂಗ್ ನಗರದಲ್ಲಿ ಆರಂಭಗೊಂಡಿದ್ದು, ಮಾರ್ಚ್ 13ರ ಸೋಮವಾರ ಕೊನೆಗೊಳ್ಳಲಿದೆ. ಇತ್ತೀಚೆಗೆ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಎನ್‌ಪಿಸಿ) ಸದಸ್ಯರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಅಭೂತಪೂರ್ವ ಮೂರನೇ ಅವಧಿಗೆ ಒಪ್ಪಿಗೆ ಸೂಚಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.