Russia-Ukraine War Impact: 2023 ರ ವರ್ಷ ಇಡೀ ವಿಶ್ವದ ಆರ್ಥಿಕತೆಗಳಿಗೆ ತುಂಬಾ ಸವಾಲನ್ನು ತಂದೊಡ್ಡಲಿದೆ. ಜಾಗತಿಕ ಆರ್ಥಿಕತೆಯು ರಷ್ಯಾ-ಉಕ್ರೇನ್ ಯುದ್ಧದ ದೊಡ್ಡ ಹಾನಿಯನ್ನೇ ಭರಿಸಬೇಕಾದ ಕಾಲ ಬರಲಿದೆ. ಒಇಸಿಡಿ ತನ್ನ ವರದಿಯಲ್ಲಿ 2023 ರಲ್ಲಿ, ಇಡೀ ವಿಶ್ವದ ಆರ್ಥಿಕತೆಯು ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದ ಪರಿಣಾಮಗಳ ಬಗ್ಗೆ ಊಹಿಸಿದ್ದಕ್ಕಿಂತ ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಪ್ಯಾರಿಸ್ ಮೂಲದ ಸಂಸ್ಥೆ OECD (ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಅಂಡ್ ಡೆವಲಪ್‌ಮೆಂಟ್) 'ಪೇಯಿಂಗ್ ದಿ ಪ್ರೈಸ್ ಆಫ್ ವಾರ್' ಎಂಬ ವರದಿಯನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಹೆಚ್ಚಿನ ಹಣದುಬ್ಬರದ ಹೊರೆಯ ಅಡಿ ಜನರು ಈಗಾಗಲೇ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಹಣದುಬ್ಬರ ಹೊರೆ ಕಡಿಮೆಯಾಗುವ ಬದಲು ಹೆಚ್ಚಾಗುತಲೇ ಇದೆ. ರಷ್ಯಾ-ಉಕ್ರೇನ್ ಯುದ್ಧವು ಈ ಹಣದುಬ್ಬರದ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ.


ಇದನ್ನೂ ಓದಿ-Russia: ಶಾಲೆಯೊಂದರಲ್ಲಿ ಹಠಾತ್ ಫೈರಿಂಗ್, 7 ವಿದ್ಯಾರ್ಥಿಗಳು ಸೇರಿದಂತೆ 13 ಮಂದಿ ಸಾವು


ಕೋವಿಡ್‌ನ ಇಂದಿಗೂ ಕೂಡ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಲೇ ಇದೆ ಎಂದು ಓಇಸಿಡಿ ಹೇಳಿದೆ, ಆದರೆ ಕೇಂದ್ರೀಯ ಬ್ಯಾಂಕುಗಳು ಹಣದುಬ್ಬರವನ್ನು ಹತ್ತಿಕ್ಕಲು ಪರದಾಡುತ್ತಿರುವಾಗ ಬಡ್ಡಿದರಗಳು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿವೆ. ಇದು ಮುಂಬರುವ ದಿನಗಳಲ್ಲಿ ಕೆಟ್ಟ ಸ್ವರೂಪವನ್ನು ಪಡೆದುಕೊಳ್ಳಲಿದೆ ಮತ್ತು ಜಾಗತಿಕ ಬೆಳವಣಿಗೆಯ ದೃಷ್ಟಿಕೋನದಲ್ಲಿನ ಈ ಬಿಕ್ಕಟ್ಟು ಆಳವಾಗಲಿದೆ ಎಂದು ವರದಿ ಹೇಳಿದೆ.


ಇದನ್ನೂ ಓದಿ-China: ಗೃಹಬಂಧನದಲ್ಲಿ ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್? ಸಾಮಾಜಿಕ ಮಾಧ್ಯಮಗಳಲ್ಲಿ ವೇಗ ಪಡೆದುಕೊಂಡ ಚರ್ಚೆಗಳು!


ವರದಿಯ ಪ್ರಕಾರ, ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಇಡೀ ವಿಶ್ವದ ಆರ್ಥಿಕತೆಯ ಬೆಳವಣಿಗೆ ದರವು ಕುಂಠಿತವಾಗಿದೆ ಮತ್ತು ಹಲವು ದೇಶಗಳ ಅಂಕಿಅಂಶಗಳು ಬೆಳವಣಿಗೆಯ ಈ ದರ ಕುಸಿತವು ದೀರ್ಘಕಾಲದವರೆಗೆ ಮುಂದುವರೆಯುವ ಸಾಧ್ಯತೆ ಇದೆ ಎಂಬುದನ್ನು ಸೂಚಿಸುತ್ತಿವೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.