Global Hunger Index - ವಿಶ್ವಾದ್ಯಂತ ಪ್ರತಿ ನಿಮಿಷಕ್ಕೆ 11 ಜನರು ಹಸಿವಿನಿಂದ ಸಾವನ್ನಪ್ಪುತ್ತಿದ್ದಾರೆ ಎಂದು 'ಆಕ್ಸಫೇಮ್' (Oxfam) ಹೇಳಿದೆ. ಇದಲ್ಲದೆ ವಿಶ್ವಾದ್ಯಂತ ಬರಗಾಲದ ಪರಿಸ್ಥಿತಿ ಎದುರಿಸುತ್ತಿರುವವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇ.6 ರಷ್ಟು ಹೆಚ್ಚಾಗಿದೆ ಎಂದಿದೆ. 'ದಿ ಹಂಗರ್ ವೈರಸ್ ಮಲ್ಟಿಪ್ಲೈಸ್' ಶೀರ್ಷಿಕೆಯಡಿ ಪ್ರಕಟಗೊಂಡ ವರದಿಯ ಪ್ರಕಾರ, ಬರಗಾಲದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೊವಿಡ್-19 ಸಾವಿನ ಸಂಖ್ಯೆಗಿಂತಲೂ ಹೆಚ್ಚಾಗಿದೆ. ಬರಗಾಲ ಪ್ರತಿ ನಿಮಿಷಕ್ಕೆ 7 ಜನರ ಪ್ರಾಣ ತೆಗೆಯುತ್ತಿದೆ ಎಂದು ವರದಿ ಹೇಳಿದೆ.


COMMERCIAL BREAK
SCROLL TO CONTINUE READING

ಪ್ರತಿ ನಿಮಿಷಕ್ಕೆ ಹಸಿವಿನಿಂದ 11 ಜನರು ಸಾವನ್ನಪ್ಪುತ್ತಿದ್ದಾರೆ
ಈ ಕುರಿತು ಮಾಹಿತಿ ನೀಡಿರುವ ಆಕ್ಸಫೇಮ್  ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಬಿ ಮ್ಯಾಕ್ಸ್ ಮನ್, "ಅಂಕಿ-ಅಂಶಗಳು ಬೆಚ್ಚಿಬೀಳಿಸುವಂತಿವೆ. ಆದರೆ ಈ ಸಂಖ್ಯೆ ಊಹಿಸಲಾಗದ ದುಃಖವನ್ನು ಸಹಿಸಿಕೊಂಡ ಜನರಿಂದ ನಿರ್ಮಾಣಗೊಂಡಿದೆ ಎಂಬುದನ್ನು ನಾವು ಮರೆಯಬಾರದು. ಇದರಲ್ಲಿ ಒಬ್ಬ ವ್ಯಕ್ತಿ ಅಂದರೂ ಕೂಡ ಅದು ಹೆಚ್ಚೇ" ಎಂದಿದ್ದಾರೆ.  ವಿಶ್ವಾದ್ಯಂತ ಸುಮಾರು 155 ಮಿಲಿಯನ್ ಜನರು ಇದೀಗ ಆಹಾರದ ಅಭದ್ರತೆಯ ಬಿಕ್ಕಟ್ಟಿನ (Food Insecurity Crisis) ಮಟ್ಟದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ, ಇದು 20 ಮಿಲಿಯನ್ ಗಳಷ್ಟು ಹೆಚ್ಚಾಗಿದೆ ಎಂದು ಬಡತನ ವಿರೋಧಿ ಸಂಘಟನೆ ವರದಿ ಮಾಡಿದೆ. ಇವರಲ್ಲಿ 2/3 ರಷ್ಟು ಜನರು ಹಸಿವನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಅವರ ದೇಶ ಮಿಲಿಟರಿ ಸಂಘರ್ಷವನ್ನು ಎದುರಿಸುವ ಸ್ಥಿತಿಯಲ್ಲಿದೆ.  "ಇಂದು, ಕೋವಿಡ್ -19 (Covid-19) ನಿಂದ ಆರ್ಥಿಕ ಕುಸಿತ ಮತ್ತು ಹದಗೆಡುತ್ತಿರುವ ಹವಾಮಾನ ಬಿಕ್ಕಟ್ಟಿನ  (Climate Crisis)ವಿರುದ್ಧದ  ನಿರಂತರ ಹೋರಾಟವು 5 ಲಕ್ಷ 20 ಸಾವಿರಕ್ಕೂ ಅಧಿಕ ಜನರನ್ನು ಹಸಿವಿನ ಅಂಚಿಗೆ ತಳ್ಳಿದೆ" ಎಂದು ಮ್ಯಾಕ್ಸ್ಮನ್ ಹೇಳಿದ್ದಾರೆ. 


'ಆಕ್ಸಮನ್' ವರದಿ (Oxman Report)ಯಲ್ಲಿ ಮಹತ್ವದ ಅಂಶ ಬಹಿರಂಗ
ಕೊವಿಡ್ -19 ಮಹಾಮಾರಿಯ ವಿರುದ್ಧ ಹೋರಾಡುವ ಬದಲು ಯುದ್ಧ ನಿರತ ರಾಷ್ಟ್ರಗಳು ಪರಸ್ಪರ ಹೋರಾಟ ನಡೆಸುತ್ತಿವೆ ಎಂದು ವರದಿ ಹೇಳಿದೆ. ಮಹಾಮಾರಿಯ ಹೊರತಾಗಿಯೂ ಕೂಡ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಲಿಟರಿ ವೆಚ್ಚದಲ್ಲಿ 51 ಬಿಲಿಯನ್ ಡಾಲರ್ ಗಳಷ್ಟು ಏರಿಕೆಯಾಗಿದೆ ಎಂದು ಆಕ್ಸಮನ್ ವರದಿ ಹೇಳಿದೆ . ವರದಿಯಲ್ಲಿ ಅಫ್ಘಾನಿಸ್ತಾನ್, ಇಥೋಪಿಯಾ, ದಕ್ಷಿಣ ಸುಡಾನ್, ಸಿರಿಯಾ ಹಾಗೂ ಯಮೆನ್ ಸೇರಿದಂತೆ ಹಲವು ರಾಷ್ಟ್ರಗಳನ್ನು ಹಸಿವನ್ನು ಎದುರಿಸುತ್ತಿರುವ ಹಾಟ್ ಸ್ಪಾಟ್ ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಎಲ್ಲಾ ರಾಷ್ಟ್ರಗಳು ಸಂಘರ್ಷವನ್ನು ಎದುರಿಸುತ್ತಿವೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-Afghans ತಮ್ಮ ಭವಿಷ್ಯವನ್ನು ನಿರ್ಧರಿಸಬೇಕು: ಯುಎಸ್ ಅಧ್ಯಕ್ಷ ಬಿಡೆನ್


"ಹಸಿವನ್ನು (Hunger) ಶಸ್ತ್ರಾಸ್ತ್ರದ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಜನರನ್ನು ಊಟ ಮತ್ತು ನೀರಿನಿಂದ ವಂಚಿತರರನ್ನಾಗಿಸಲಾಗುತ್ತಿದೆ ಹಾಗೂ ಮಾನವೀಯ ಪರಿಹಾರಗಳಿಗೆ ಅಡೆತಡೆ ಉಂಟುಮಾಡಲಾಗುತ್ತಿದೆ. ಮಾರುಕಟ್ಟೆಗಳ ಮೇಲೆ ಬಾಂಬ್ ದಾಳಿ ನಡೆಸಲಾಗುತ್ತಿರುವ ಕಾರಣ ಜನರು ಭೀತಿಯ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ ಮತ್ತು ಊಟಕ್ಕಾಗಿ ಪರದಾಡುತ್ತಿದ್ದಾರೆ. ಬೆಳೆಗಳು ಹಾಗೂ ಪಶುಗಳು ನಷ್ಟವನ್ನು ಅನುಭವಿಸಿವೆ. ಈ ಹಿನ್ನೆಲೆ ಸಂಘರ್ಷವನ್ನು 'ವಿನಾಶಕಾರಿ ಹಸಿವನ್ನಾಗಿ' ಹುಟ್ಟುಹಾಕದಂತೆ ತಡೆಯಲು ಸಂಘಟನೆ ವಿವಿಧ ದೇಶಗಳ ಸರ್ಕಾರಗಳಿಗೆ ಮನವಿ ಮಾಡಿದೆ ಹಾಗೂ ಪರಿಹಾರ ಕಾರ್ಯಗಳನ್ನು ಖಾತರಿಪಡಿಸಬೇಕು ಎಂದು ಹೇಳಿದೆ.


ಇದನ್ನೂ ಓದಿ-ಜುಲೈ19 ರಿಂದ ಅನ್ ಲಾಕ್ ಮಾಡಲು ಮುಂದಾದ ಬ್ರಿಟನ್, ಎಚ್ಚರಿಕೆ ನೀಡಿದ ವಿಜ್ಞಾನಿಗಳು


ಸಂಘರ್ಷಗಳಿಗೆ 'ವಿನಾಶಕಾರಿ ಹಸಿವನ್ನು' ಹುಟ್ಟುಹಾಕಲು ಬಿಡಬೇಡಿ ಹಾಗೂ ಪರಿಹಾರ ಒದಗಿಸುವ ಸಂಸ್ಥೆಗಳನ್ನು ಸಂಘರ್ಷಕ್ಕೆ ಒಳಗಾದ ಕ್ಷೇತ್ರಗಳಲ್ಲಿ ನೆಮ್ಮದಿಯಾಗಿ ಕೆಲಸ ಮಾಡಲು ಬಿಡಿ, ಈ ಸಂಸ್ಥೆಗಳಿಗೆ ಅಗತ್ಯವಿರುವವರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಅನುವು ಮಾಡಿ ಕೊಡಿ.  ಎಂದು ಸಂಘಟನೆ ಹೇಳಿದೆ. ಹಸಿವನ್ನು ಕಡಿಮೆ ಮಾಡುವ UN (United Nations) ಪ್ರಯತ್ನಗಳಿಗೆ "ತಕ್ಷಣ ಮತ್ತು ಸಂಪೂರ್ಣವಾಗಿ" ಧನಸಹಾಯ ಒದಗಿಸುವಂತೆ ದಾನಿ ದೇಶಗಳಿಗೆ ಸಂಘಟನೆ ಕರೆ ನೀಡಿದೆ. ಏತನ್ಮಧ್ಯೆ, ಜಾಗತಿಕ ತಾಪಮಾನ ಏರಿಕೆ ಮತ್ತು ಸಾಂಕ್ರಾಮಿಕ ರೋಗದ ಆರ್ಥಿಕ ಅಡ್ಡಪರಿಣಾಮಗಳು, ಜಾಗತಿಕ ಆಹಾರದ ಬೆಲೆಯನ್ನು ಶೇ. 40 ರಷ್ಟು ಹೆಚ್ಚಿಸಿವೆ, ಇದು ಕಳೆದ ಒಂದು ದಶಕದಲ್ಲಿ ಅತಿ ಹೆಚ್ಚಾಗಿದೆ. ವರದಿಯ ಪ್ರಕಾರ,  ಇದು ಲಕ್ಷಾಂತರ ಜನರನ್ನು ದೊಡ್ಡ ಪ್ರಮಾಣದಲ್ಲಿ ಹಸಿವಿನಿಂದ ಬಳಲುವಂತೆ ಮಾಡಿದೆ ಎಂದು ವರದಿ ಹೇಳಿದೆ.


ಇದನ್ನೂ ಓದಿ-"ಲಡಾಖ್ ವಿವಾದದಿಂದಾಗಿ ಭಾರತ ಮತ್ತು ಚೀನಾ ನಡುವಿನ ಸಂಬಂಧಕ್ಕೆ ತೊಂದರೆಯಾಗಿದೆ"


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.