ಅಮೆರಿಕಾದ ಕ್ಯಾಲಿಫೋರ್ನಿಯದಲ್ಲಿ ಗುಂಡಿನ ದಾಳಿ; 12 ಮಂದಿ ದುರ್ಮರಣ
ಥೌಸಂಡ್ ಓಕ್ಸ್ ಪಟ್ಟಣದ ಬಾರ್ಡರ್ ಲೈನ್ ಬಾರ್ ಅಂಡ್ ಗ್ರಿಲ್ ನೈಟ್ ಕ್ಲಬ್ನಲ್ಲಿ ಬುಧವಾರ ರಾತ್ರಿ ಗುಂಡಿನ ದಾಳಿ ನಡೆದಿದೆ.
ಥೌಸಂಡ್ ಓಕ್ಸ್: ಅಮೇರಿಕಾದ ಲಾಸ್ ಎಂಜಲಿಸ್ ಬಳಿಯಿರುವ ನೈಟ್ ಕ್ಲಬ್ ನಲ್ಲಿ ನಡೆದ ಗೋಲಿಬಾರ್ ನಲ್ಲಿ ಗನ್ ಮ್ಯಾನ್ ಸೇರಿದಂತೆ 12 ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಬುಧವಾರ ರಾತ್ರಿ ನಡೆದಿದೆ.
ಥೌಸಂಡ್ ಓಕ್ಸ್ ಪಟ್ಟಣದ ಬಾರ್ಡರ್ ಲೈನ್ ಬಾರ್ ಅಂಡ್ ಗ್ರಿಲ್ ನೈಟ್ ಕ್ಲಬ್ನಲ್ಲಿ ಬುಧವಾರ ರಾತ್ರಿ ಕಾಲೇಜೊಂದರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ ಎನ್ನಲಾಗಿದು, ನೂರಾರು ಕಾಲೇಜು ವಿದ್ಯಾರ್ಥಿಗಳು ಸಿಲುಕಿರುವ ಸಾಧ್ಯತೆಯಿದೆ.
ಲಾಸ್ ಏಂಜಲಿಸ್ ಟೈಮ್ಸ್ ಪತ್ರಿಕೆ ಪ್ರಕಾರ, ಶಸ್ತ್ರಧಾರಿಯೊಬ್ಬ ರಾತ್ರಿ 11.30ರ ವೇಳೆಗೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.