US Relations: ಈ ವರ್ಷ ಭಾರತೀಯರಿಗೆ ಒಂದು ಮಿಲಿಯನ್‌ಗೂ ಹೆಚ್ಚು ವೀಸಾಗಳನ್ನು ವಿತರಿಸಲು ಅಮೆರಿಕ ಮುಂದಾಗಿದೆ. ಈ ವರ್ಷ ಶರತ್ಕಾಲದಲ್ಲಿ ಶಾಲೆಯನ್ನು ಪ್ರವೇಶಿಸಲು ಬಯಸುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳಿಗೆ ವೀಸಾಗಳನ್ನು ಪ್ರಕ್ರಿಯೆಗೊಳಿಸಲು ಬೀಡೆನ್ ಆಡಳಿತ ಬದ್ಧವಾಗಿದೆ.


COMMERCIAL BREAK
SCROLL TO CONTINUE READING

ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಾರ H-1B ಮತ್ತು L ವೀಸಾಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ, ಇದು ಭಾರತದ ಐಟಿ ವೃತ್ತಿಪರರಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ.


H-1B ವೀಸಾ ಬಹಳ ಮುಖ್ಯ
H-1B ವೀಸಾವು ವಲಸೆರಹಿತ ವೀಸಾ ಆಗಿದ್ದು, ಇದು US ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದರ ಮೇಲೆ ಅವಲಂಭಿತವಾಗಿವೆ. 


"ನಾವು ಈ ವರ್ಷ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀಸಾಗಳನ್ನು ನೀಡುವ ಪ್ರಕ್ರಿಯೆಯಲ್ಲಿ ಮುಂದಕ್ಕೆ ಸಾಗಿದ್ದೇವೆ" ಎಂದು ಲು ಹೇಳಿದ್ದಾರೆ. 'ಇದು ನಮಗೆ ದಾಖಲೆಯ ಸಂಖ್ಯೆಯಾಗಿದೆ, ಜೊತೆಗೆ ದಾಖಲೆ ಸಂಖ್ಯೆಯ ವಿದ್ಯಾರ್ಥಿ ವೀಸಾಗಳು ಮತ್ತು ವಲಸೆ ವೀಸಾಗಳು.' ಈ ಶರತ್ಕಾಲದಲ್ಲಿ ಪ್ರಾರಂಭವಾಗುವ ಶಾಲೆಗಳ ಭಾರತದ ಎಲ್ಲಾ ವಿದ್ಯಾರ್ಥಿ ವೀಸಾಗಳನ್ನು ಪ್ರಕ್ರಿಯೆಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಯುಎಸ್ ಈ ಬೇಸಿಗೆಯಲ್ಲಿ ಬದ್ಧವಾಗಿದೆ ಎಂದು ಲು ಹೇಳಿದ್ದಾರೆ.


ಇದನ್ನೂ ಓದಿ-Most Precious Lizard: ಈ ಹಲ್ಲಿಯ ಬೆಲೆ ಒಂದು ಬಿಎಂಡಬ್ಲ್ಯೂಗೆ ಸಮಾನ ಎಂದ್ರೆ ನೀವು ನಂಬ್ತೀರಾ? 100% ನಿಜ!


ವೀಸಾ ಅರ್ಜಿದಾರರು ದೀರ್ಘ ಕಾಲ ಕಾಯಬೇಕಾಗಿಲ್ಲ
ಭಾರತದಲ್ಲಿ ಮೊದಲ ಬಾರಿಗೆ ವೀಸಾ ಅರ್ಜಿದಾರರಿಗೆ, ವಿಶೇಷವಾಗಿ B1 (ವ್ಯಾಪಾರ) ಮತ್ತು B2 (ಪ್ರವಾಸಿ) ವರ್ಗಗಳ ಅಡಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ದೀರ್ಘಾವಧಿಯ ವೇಟಿಂಗ್ ಪಿರಿಯಡ್ ಬಗ್ಗೆ ಹೆಚ್ಚಿನ ಕಾಳಜಿವಹಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್‌ಗೆ ಬರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವಿಷಯದಲ್ಲಿ ಭಾರತವು ಈಗ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ.


ಇದನ್ನೂ ಓದಿ-Be Alert! ರೈಲಿನಲ್ಲಿ ಪ್ರವಾಸ ಮಾಡುವಾಗ ಈ ಕೆಲ್ಸಾ ಮಾಡ್ಬೇಡಿ, ಇಲ್ದಿದ್ರೆ...?


"H-1B ಮತ್ತು L ವೀಸಾಗಳ ಜೊತೆಗೆ ನಾವು ಕೆಲಸದ ವೀಸಾಗಳಿಗೂ ಆದ್ಯತೆ ನೀಡುತ್ತಿದ್ದೇವೆ ಎಂದು ಲು ಹೇಳಿದ್ದಾರೆ. ಭಾರತದಲ್ಲಿನ ನಮ್ಮ ಕೆಲವು ಕಾನ್ಸುಲರ್ ವಿಭಾಗಗಳಲ್ಲಿ ಈ ವೀಸಾಗಳಿಗಾಗಿ ಕಾಯುವ ಸಮಯವು ಇದೀಗ 60 ದಿನಗಳಿಗಿಂತ ಕಡಿಮೆಯಾಗಿದೆ. ನಾವು ಕಾರ್ಮಿಕರಿಗೆ ವಿಸಾಗಳಿಗೆ ಆದ್ಯತೆ ನೀಡುತ್ತೇವೆ ಎಂಬುದನ್ನೂ  ಖಚಿತಪಡಿಸಿಕೊಳ್ಳುವುದನ್ನು ನಾವು ಮುಂದುವರೆಸುತ್ತಿದ್ದೇವೆ ಎಂದು ಲೂ ಹೇಳಿದ್ದಾರೆ, ಏಕೆಂದರೆ ಅವು US ಮತ್ತು ಭಾರತೀಯ ಆರ್ಥಿಕತೆಗಳೆರಡಕ್ಕೂ ಪ್ರಮುಖವಾಗಿವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.