ಖಗೋಳ ಭೌತಶಾಸ್ತ್ರದಲ್ಲಿ ಶೂನ್ಯಗಳಿಸಿದ ಮಹಿಳೆಗೆ ಗೂಗಲ್ ಮುಖ್ಯಸ್ಥರ ಮೆಚ್ಚುಗೆ..! ಕಾರಣವೇನು ಗೊತ್ತೇ
ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಖಗೋಳ ಭೌತಶಾಸ್ತ್ರದ ವಿದ್ಯಾರ್ಥಿಯೊಬ್ಬರು ಹಂಚಿಕೊಂಡ ಪೋಸ್ಟ್ ನ್ನು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ರಿಟ್ವೀಟ್ ಮಾಡಿದ್ದಾರೆ.
ನವದೆಹಲಿ: ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಖಗೋಳ ಭೌತಶಾಸ್ತ್ರದ ವಿದ್ಯಾರ್ಥಿಯೊಬ್ಬರು ಹಂಚಿಕೊಂಡ ಪೋಸ್ಟ್ ನ್ನು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ರಿಟ್ವೀಟ್ ಮಾಡಿದ್ದಾರೆ.
ಇದಕ್ಕೆ ಕಾರಣವೆಂದರೆ ನವೆಂಬರ್ 21 ರಂದು ನ್ಯಾನ್ಸ್ ನಾಲ್ಕು ವರ್ಷಗಳ ಹಿಂದೆ ತನ್ನ ಕ್ವಾಂಟಮ್ ಭೌತಶಾಸ್ತ್ರ ಪರೀಕ್ಷೆಯಲ್ಲಿ ಶೂನ್ಯ ಗಳಿಸಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದಾದ ನಂತರ ಅವರು ಭೌತಶಾಸ್ತ್ರವನ್ನು ತ್ಯಜಿಸಲು ನಿರ್ಧರಿಸಿದ್ದರು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಆದರೆ ಹಾಗೆ ಮಾಡದೆ ನಂತರ ಅಧ್ಯಯನ ಮುಂದುವರೆಸಿ ತಾವು ಮಾಡಿರುವ ಸಾಧನೆ ಬಗ್ಗೆ ವಿವರಿಸಿದ್ದಾರೆ.
ಅವರೇ ಹೇಳುವಂತೆ ಆ ಕೋರ್ಸ್ ನ್ನು ಕೈ ಬಿಡದೆ ಕಠಿಣ ಶ್ರಮದಿಂದಾಗಿ ಅಧ್ಯಯನ ಮಾಡಿದ್ದಾರೆ. ಅದರ ಪ್ರತಿಫಲವಾಗಿ ಅವರು ಮುಂದೆ ಖಗೋಳ ಭೌತಶಾಸ್ತ್ರದಲ್ಲಿ ಪಿಎಚ್ಡಿ ಅಧ್ಯಯನ ಮಾಡುತ್ತಿರುವುದಲ್ಲದೆ ಇದುವರೆಗೆ ಎರಡು ಪೇಪರ್ ಗಳನ್ನು ಪ್ರಕಟಿಸಿರುವುದಾಗಿ ಹೇಳಿದ್ದಾರೆ.
ಈ ಟ್ವೀಟ್ ನ್ನು ರಿಟ್ವೀಟ್ ಮಾಡಿ ಗೂಗಲ್ ಮುಖಸ್ಥ ಸುಂದರ್ ಪಿಚ್ಚೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.