Google: 25 ವರ್ಷ ಪೂರೈಸಿದ ಗ್ಲೋಬಲ್ ಸರ್ಚ್ ಇಂಜಿನ್
25th Anniversary Of Google : ಇಂದಿಗೆ 25 ವರ್ಷಗಳ ಸಂಭ್ರಮಾಚರಣೆಯಲ್ಲಿದ್ದು, ಗ್ಯಾರೇಜ್ನಿಂದ ಹಿಡಿದು ದೈತ್ಯರೂಪದ ಜಾಗತಿಕ ಟೈಮಲೈನ್ ಆಗಿ ರೂಪಾಂತರಗೊಂಡ ಗೂಗಲ್ನ ಸಾಧನೆಯ ಮಾಹಿತಿ ಇಲ್ಲಿದೆ.
Timeline of Incredible Journey: ಸೆಪ್ಟೆಂಬರ್ 4, 1998 ರಲ್ಲಿ ಅಮೇರಿಕದ ಕಂಪ್ಯೂಟರ್ ವಿಜ್ಞಾನಿಗಳಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಪ್ರಾರಂಭಿಸಿದ ಗೂಗಲ್, ದಶಕಗಳಲ್ಲಿ ಗಮರ್ನಾಹವಾಗಿ ರೂಪಾಂತರಗೊಂಡಿದ್ದು, ಆಧುನಿಕ ಪ್ರಪಂಚದ ಒಂದು ಭಾಗವಾಗಿ ಹೊರಹೊಮ್ಮಿದೆ.
ಕ್ಯಾಲಿಪೋರ್ನಿಯಾದ ಸ್ಟ್ಯಾನ್‌ಪೋರ್ಡ್ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಇಬ್ಬರು ಸೇರಿ ಜನರಿಗೆ ಹೇಗೆ ಮಾಹಿತಿಯನ್ನು ದೊರಕಿಸಿಕೊಡಬಹುದು ಎಂಬ ನಿಟ್ಟಿನಲ್ಲಿ ಕ್ರಾಂತಿಕಾರಿ ಸರ್ಚ್‌ಎಂಜಿನ್‌ನ್ನು ಪ್ರಾರಂಭಿಸಿದರು.
ಇದನ್ನು ಓದಿ- ನಾಳೆ ಕಾಂಗ್ರೆಸ್ ಪಕ್ಷದ ತುರ್ತು ಸಂಸದೀಯ ಸಭೆ ಕರೆದ ಸೋನಿಯಾ ಗಾಂಧಿ
ಜನರಿಗೆ ಸರಿಯಾದ ರೀತಿಯಲ್ಲಿ ನಿರ್ದಿಷ್ಟವಾಗಿ ಮಾಹಿತಿಯನ್ನು ಕೊಡುವ ಉದ್ದೇಶದೊಂದಿಗೆ ಪ್ರಾರಂಭವಾದ ಗೂಗಲ್ ಕಾಲಕ್ರಮೇಣವಾಗಿ ಹೊಸ ಹೊಸ ಬದಲಾವಣೆಗಳೊಂದಿಗೆ ವೇಗವಾಗಿ ವಿಸ್ತರಿಸುತ್ತಾ, ಇಂದು ಜನರ ದೈನಂದಿನ ಜೀವನದಲ್ಲಿ ಮಾಹಿತಿ, ಉತ್ಪನ್ನಗಳು ಇನ್ನಿತರ ಸೇವೆಗಳನ್ನು ಒದಗಿಸಿಕೊಡುತ್ತದೆ. ಗೂಗಲ್ ಭಾಗವಾಗಿ Gmail, Google Maps, Google Cloud, Chrome, Youtube, Workspace, Android, Drive, Google Assistant ಹೀಗೆ ಇನ್ನಿತರ ಅಪ್ಲೀಕೇಶನ್‌ಗಳ ಮೂಲಕ ಜನರಿಗೆ ಸೇವೆಗಳನ್ನು ನೀಡುತ್ತದೆ.
ಅಲ್ಲದೇ 2015ರಲ್ಲಿ ಅಲ್ಪಾಬೆಟ್ ಸಂಸ್ಥೆಯ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಗೂಗಲ್ ಜನರೇಟಿವ್ AI ಜಗತ್ತಿನಲ್ಲಿ ಮುಳುಗಿದ್ದು, ಗೂಗಲ್ ಗೂಗಲ್ ಬಾರ್ಡ್ 9 ಭಾರತೀಯ ಭಾಷೆಗಳನ್ನು ಒಳಗೊಂಡಂತೆ 40 ಭಾಷೆಗಳಿಗೆ ಬೆಂಬಲವನ್ನು ನೀಡುತ್ತದೆ. 230ಕ್ಕೂ ಹೆಚ್ಚು ದೇಶ ಮತ್ತು ಪ್ರಾಂತ್ಯಗಳಿಗೆ ವಿಸ್ತರಿಸಿದೆ . ಗೂಗಲ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎರಡು ಹೆಚ್ಚುವರಿ ಡೇಟಾ ಕೇಂದ್ರಗಳನ್ನು ನಿರ್ಮಿಸುವ ಯೋಜನೆಯನ್ನು ಪ್ರಕಟಿಸಿದೆ ಮತ್ತು ಡೇಟಾ ಸಂಸ್ಕರಣೆ ಮತ್ತು AI ತಂತ್ರಜ್ಞಾನ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಕಾರ್ಯನಿರ್ವಹಿಸುತ್ತದೆ. ಹೊಸ ವೈಶಿಷ್ಟ್ಯಗಳೊಂದಿಗೆ ಇದು ಬಳಕೆದಾರರ ಅನುಭವವನ್ನು ಹೆಚ್ಚಿಸಲು ಗೂಗಲ್ ನಿರಂತರವಾಗಿ ಶ್ರಮಿಸುತ್ತಿದೆ. ಗೂಗಲ್ 25ನೇ ವರ್ಷದ ಸಂಭ್ರಮದಲ್ಲಿದ್ದು, ಇದು ಜನರ ಜೀವನದ ಅನಿವಾರ್ಯ ಭಾಗವಾಗಿದೆ. ಮತ್ತು ಇದು ಇಮೇಲ್ ಸಂವಹನ, ಗೂಗಲ್ ಮ್ಯಾಪ್, ಮೊಬೈಲ್ ಆಪರೇಟಿಂಗ್ ಸಿಸ್ಟಂಗಳಿಗೆ ಸಹಕಾರಿಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ