ಗ್ರೇಟಾ ಥನ್‌ಬರ್ಗ್ ಗೆ `ಪರ್ಯಾಯ ನೊಬೆಲ್` ರೈಟ್ ಲೈವ್ಲಿ ಹುಡ್ ಪ್ರಶಸ್ತಿ
ಸ್ವೀಡನ್ ಮೂಲಕದ ಹದಿಹರೆಯದ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅವರಿಗೆ ಸ್ವೀಡನ್ನಿನ ಪರ್ಯಾಯ ನೊಬೆಲ್ ಎಂದು ಕರೆಯಲಾಗುವ ರೈಲ್ ಲೈವ್ಲಿ ಹುಡ್ ಪ್ರಶಸ್ತಿ ದೊರೆತಿದೆ.
ನವದೆಹಲಿ: ಸ್ವೀಡನ್ ಮೂಲಕದ ಹದಿಹರೆಯದ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅವರಿಗೆ ಸ್ವೀಡನ್ನಿನ ಪರ್ಯಾಯ ನೊಬೆಲ್ ಎಂದು ಕರೆಯಲಾಗುವ ರೈಲ್ ಲೈವ್ಲಿ ಹುಡ್ ಪ್ರಶಸ್ತಿ ದೊರೆತಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ರಾಜಕೀಯ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಗ್ರೇಟಾ ಥನ್‌ಬರ್ಗ್ ಧ್ವನಿ ಎತ್ತಿದ್ದಕ್ಕೆ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರೈಟ್ ಲೈವ್ಲಿಹುಡ್ ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಯಾರ್ಕ್‌ನ ವಿಶ್ವಸಂಸ್ಥೆಯಲ್ಲಿ ನಡೆದ ಹವಾಮಾನ ಶೃಂಗಸಭೆಯ ಆರಂಭದ ಭಾಷಣವೊಂದರಲ್ಲಿ ಗ್ರೇಟಾ ಥನ್‌ಬರ್ಗ್ ಹವಾಮಾನ ಬದಲಾವಣೆಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಕ್ಕಾಗಿ ಜಾಗತಿಕ ನಾಯಕರನ್ನು ಅವರು ಖಂಡಿಸಿದ್ದರು. ಒಂದು ವರ್ಷದ ಹಿಂದೆ ಸ್ವೀಡಿಷ್ ಸಂಸತ್ತಿನ ಹೊರಗೆ ಏಕಾಂತ ಸಾಪ್ತಾಹಿಕ ಪ್ರತಿಭಟನೆಗಳನ್ನು ಪ್ರಾರಂಭಿಸಿದರು. ಅವಳಿಂದ ಪ್ರೇರಿತರಾದ ಲಕ್ಷಾಂತರ ಯುವಕರು ವಿಶ್ವದಾದ್ಯಂತ ಬೀದಿಗಳಲ್ಲಿ ಜಾಗತಿಕ ಹವಾಮಾನ ಬದಲಾವಣೆಗಾಗಿ ಪ್ರತಿಭಟನೆ ನಡೆಸಿದ್ದರು.
ಈಗ ಥನಬರ್ಗ್ ಅವರೊಂದಿಗೆ ಈ ಪ್ರಶಸ್ತಿಯನ್ನು ಯಾನೊಮಾಮಿ ಜನರ ಬ್ರೆಜಿಲ್ ನ ಸ್ಥಳೀಯ ನಾಯಕಿ ಡೇವಿ ಕೊಪೆನಾವಾ, ಚೀನಾದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಗುವೊ ಜಿಯಾನ್ಮಿ ಮತ್ತು ಪಶ್ಚಿಮ ಸಹಾರಾ ಮಾನವ ಹಕ್ಕುಗಳ ಹೋರಾಟಗಾರ್ತಿ ಅಮಿನಾಟೌ ಹೈದರ್ ಅವರೊಂದಿಗೆ ಹಂಚಿಕೊಂಡಿದ್ದಾರೆ.