ಲಾಹೋರ್: ರಾಜಕೀಯ ಸಂಘಟನೆಯಾದ ಮಿಲ್ಲಿ ಮುಸ್ಲಿಮ್ ಲೀಗ್ ಅನ್ನು ವಿದೇಶೀ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಿದ ಅಮೇರಿಕದ ನಿರ್ಧಾರವನ್ನು ಮುಂಬೈ ಭಯೋತ್ಪಾದಕ ದಾಳಿ ರೂವಾರಿ ಹಫೀಜ್ ಸಯೀದ್ ಟೀಕಿಸಿದ್ದಾರೆ. ಎಂಎಂಎಲ್ ಅನ್ನು ಉಗ್ರ ಸಂಘಟನೆ ಎಂದು ಮಂಗಳವಾರ ಅಮೇರಿಕಾ ಘೋಷಸಿರುವುದರಿಂದ, ತನ್ನ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಪಾಕಿಸ್ತಾನದ ಚುನಾವಣಾ ಆಯೋಗದಲ್ಲಿ ತಮ್ಮ ಪಕ್ಷವನ್ನು ನೊಂದಾಯಿಸಿಕೊಳ್ಳಬೇಕೆಂದಿದ್ದ ಹಫೀಜ್ ಸಯೀದ್'ಗೆ ಹಿನ್ನಡೆ ಉಂಟಾದಂತಾಗಿದೆ. ಅಲ್ಲದೆ, ಪಾಕಿಸ್ತಾನದಲ್ಲಿ ಈ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದೆ.


COMMERCIAL BREAK
SCROLL TO CONTINUE READING

ಕಾಶ್ಮೀರಕ್ಕೋಸ್ಕರ ಪಾಕಿಸ್ತಾನದ ಜನರನ್ನು ಸಜ್ಜುಗೊಳಿಸಲು ಏರ್ಪಡಿಸಲು ಆಯೋಜಿಸಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಯಿಸ್, "ಅಮೆರಿಕದಿಂದ ನಿಷೇಧಕ್ಕೊಳಗಾದ ನಮ್ಮ ಪಕ್ಷವು ಕೆಲವು ವಿಶ್ವಾಸಾರ್ಹ ಗುಣಗಳನ್ನು ಹೊಂದಿದೆ" ಎಂದು ಹೇಳಿದರು.


ಮುಂದುವರೆದು, ಅಮೆರಿಕನ್ನು ಈ ರಾಜಕೀಯ ಪಕ್ಷ ತನ್ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಅರಿತಿದ್ದಾರೆ ಎಂದರು. ಅಲ್ಲದೆ, ಕಾಶ್ಮೀರ ಬಿಕ್ಕಟ್ಟು ಬಗೆಹರಿಸಲು ಹೆಚ್ಚು ಒತ್ತು ನೀಡುವಂತೆ  ಪ್ರಧಾನ ಮಂತ್ರಿ ಶಾಹಿದ್ ಖಾಕನ್ ಅಬ್ಬಾಸಿ ಅವರಿಗೆ ಮನವಿ ಮಾಡಿದರು. 


ರ್ಯಾಲಿಯಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಯಿತು. ಕಾಶ್ಮೀರ ಬಂದರು ನಗರ ಕರಾಚಿ ಮತ್ತು ಭಾಗಗಳಲ್ಲಿ ಕಾಶ್ಮೀರ ಐಕಮತ್ಯದ ದಿನವನ್ನು ಆಚರಿಸಲು ಇಸ್ಲಾಮಾಬಾದ್ನಲ್ಲಿ ರ್ಯಾಲಿಗಳನ್ನು ನಡೆಸಲಾಯಿತು.