ನವದೆಹಲಿ: 26/11 ರ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಕಾಶ್ಮೀರವನ್ನು ವಿಮೋಚನೆ ಗೊಳಿಸುವ ಮೂಲಕ ಈ ಹಿಂದಿನ 1971ರ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿನ  ಪಾಕಿಸ್ತಾನದ ಸೋಲಿಗೆ ಪ್ರತಿಕಾರವನ್ನು ತಿರಿಸಿಕೊಳ್ಳುತ್ತೇವೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ.


COMMERCIAL BREAK
SCROLL TO CONTINUE READING

ನಾವು ಕಾಶ್ಮೀರವನ್ನು ಮುಕ್ತಗೊಳಿಸುವುದರ ಮೂಲಕ ಬಾಂಗ್ಲಾದೇಶದ ಸೃಷ್ಟಿಗೆ  ಭಾರತಕ್ಕೆ ಪ್ರತೀಕಾರವನ್ನು ನೀಡುತ್ತೇವೆ" ಎಂದು ಈ ಭಯೋತ್ಪಾದಕ ಲಾಹೋರ್ನಲ್ಲಿ ಶನಿವಾರದಂದು ಮಾತನಾಡುತ್ತಾ ಹೇಳಿದರು.


ಭಾರತ ಮತ್ತು ಬಾಂಗ್ಲಾದೇಶ ಕ್ರಮವಾಗಿ ಡಿಸೆಂಬರ್ 16 ರಂದು 'ವಿಜಯ್ ದಿವಾಸ್' ಮತ್ತು 'ವಿಕ್ಟರಿ ಡೇ' ಎಂದು ಆಚರಿಸುತ್ತಿರುವ ಹಿನ್ನಲೆಯಲ್ಲಿ  ಸಯೀದ್ ಅವರ ಹೇಳಿಕೆ ಬಂದಿದೆ.


1971ರ ಬಾಂಗ್ಲಾ ವಿಮೋಚನೆ ಯುದ್ಧವು ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) ಪಾಕಿಸ್ತಾನದ ಪಡೆಗಳನ್ನು ಭಾರತ ಸೋಲಿಸುವುದರ ಮೂಲಕ ಕೊನೆಗೊಂಡಿತು ಅದರ ಫಲವಾಗಿ ಬಾಂಗ್ಲಾದೇಶವು ಪಾಕಿಸ್ತಾನದಿಂದ ವಿಮೋಚನೆಗೊಂಡು ಸ್ವತಂತ್ರ ದೇಶವಾಗಿ ಪರಿವರ್ತನೆಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು.