ವಿಶ್ವಸಂಸ್ಥೆ ಬುಧವಾರ 'ಜಾಗತಿಕ ಸಂತೋಷ ವರದಿ' (ವರ್ಲ್ಡ್ ಹ್ಯಾಪಿನೆಸ್‌ ರಿಪೋರ್ಟ್‌) ಬಿಡುಗಡೆ ಮಾಡಿದ್ದು, ಅದರಲ್ಲಿ ಫಿನ್ಲೆಂಡ್‌ ಅತಿ ಸಂತೋಷಕರ ರಾಷ್ಟ್ರವಾಗಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಸತತ ಏಳನೇ ಬಾರಿಗೆ ಫಿನ್ಲೆಂಡ್‌ಗೆ ಈ ಶ್ರೇಯ ದಕ್ಕಿದೆ.


COMMERCIAL BREAK
SCROLL TO CONTINUE READING

ಪ್ರಸಕ್ತ ಸಾಲಿನ ಜಾಗತಿಕ ಸಂತೋಷ ಸೂಚ್ಯಂಕ ಬಿಡುಗಡೆಯಾಗಿದೆ. ಸತತ ಏಳನೇ ವರ್ಷವೂ ಫಿನ್ಲೆಂಡ್ ಮೊದಲ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನಗಳಲ್ಲಿ ಡೆನ್ಮಾರ್ಕ್, ಐಸ್‌ಲ್ಯಾಂಡ್ ದೇಶಗಳಿವೆ. ಸಂತಸಕರ ಜೀವನ ಒದಗಿಸುವಲ್ಲಿ ಚೀನಾ, ಪಾಕಿಸ್ತಾನ, ನೇಪಾಳ ಮುಂತಾದ ದೇಶಗಳು ಭಾರತಕ್ಕಿಂತಲೂ ಮುಂದೆ ಇವೆ.


ಫಿನ್ಲೆಂಡ್  ಸತತವಾಗಿ ಏಳನೇ ಬಾರಿಯೂ ಮೊದಲನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಅತೃಪ್ತಿಕರ ರಾಷ್ಟ್ರವೆಂದು ದಾಖಲಾಗಿದೆ. 143 ದೇಶಗಳ ಪಟ್ಟಿಯಲ್ಲಿ ಭಾರತ 126ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಭಾರತ ಸಹ ಇದೇ ಸ್ಥಾನದಲ್ಲಿತ್ತು. ವಿಶೇಷವೆಂದರೆ ಯುದ್ಧ ಪೀಡಿತ ಪ್ಯಾಲೆಸ್ಟೇನ್ 103ನೇ ಸ್ಥಾನ ಪಡೆದಿದೆ.


ಇದನ್ನು ಓದಿ : ‌Health Tips: ಲಟಿಕೆ ತೆಗೆಯುವ ಅಭ್ಯಾಸ ನಿಮ್ಮ ಜೀವಕ್ಕೆ ಕುತ್ತು ತರುತ್ತೆ ಹುಷಾರ್!


ಯುರೋಪಿಯನ್ ರಾಷ್ಟ್ರಗಳು ಸಂತೋಷ ಸೂಚ್ಯಂಕದಲ್ಲಿ ಅಗ್ರ ಸ್ಥಾನಗಳಲ್ಲಿ ಮುಂದುವರಿದಿವೆ. ಫಿನ್ಲೆಂಡ್ , ಡೆನ್ಮಾರ್ಕ್, ಐಸ್‌ಲ್ಯಾಂಡ್, ಸ್ವೀಡನ್ ಮತ್ತು ಇಸ್ರೇಲ್ ಅಗ್ರ 5 ಸ್ಥಾನ ಪಡೆದಿವೆ. 10 ವರ್ಷದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಮತ್ತು ಜರ್ಮನಿ ಅಗ್ರ 20ರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅಮೆರಿಕ 23 ಮತ್ತು ಜರ್ಮನಿ 24ನೇ ಸ್ಥಾನಕ್ಕೆ ಕುಸಿದಿದೆ.


ಪ್ರಸಕ್ತ ಸಾಲಿನ ಜಾಗತಿಕ ಸಂತೋಷ ಸೂಚ್ಯಂಕ ಬಿಡುಗಡೆಯಾಗಿದೆ.  ಸಂತಸಕರ ಜೀವನ ಒದಗಿಸುವಲ್ಲಿ ಚೀನಾ, ಪಾಕಿಸ್ತಾನ, ನೇಪಾಳ ಮುಂತಾದ ದೇಶಗಳು ಭಾರತಕ್ಕಿಂತಲೂ ಮುಂದೆ ಇವೆ.


ಪೂರ್ವ ಯುರೋಪಿಯನ್ ದೇಶಗಳಾದ ಸರ್ಬಿಯಾ, ಬಲ್ಗೇರಿಯಾ ದೇಶಗಳು ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡರೆ ಅಫ್ಘಾನಿಸ್ತಾನ, ಲೆಬನಾನ್ ಮತ್ತು ಜೋರ್ಡಾನ್ ದೇಶಗಳ ಶ್ರೇಯಾಂಕ ತೀವ್ರ ಕುಸಿದಿದೆ


ಜಿಡಿಪಿ, ಸಾಮಾಜಿಕ ವ್ಯವಸ್ಥೆ, ಆರೋಗ್ಯಕರ ಜೀವಿತಾವಧಿ, ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ, ಸಮುದಾಯಗಳ ನಡುವಿನ ಪರಸ್ಪರ ಉದಾರತೆ ಮತ್ತು ಕಡಿಮೆ ಭ್ರಷ್ಟಾಚಾರ ಇತ್ಯಾದಿ ಸಂಗತಿಗಳೇ ಇಲ್ಲಿ ಮಾನದಂಡಗಳಾಗಿರುತ್ತವೆ. 


ಟಾಪ್‌ 10 ಸಂತೋಷಕರ ರಾಷ್ಟ್ರಗಳು
1. ಫಿನ್ಲೆಂಡ್‌
2. ಡೆನ್ಮಾರ್ಕ್
3. ಐಸ್‌ಲ್ಯಾಂಡ್‌
4. ಸ್ವೀಡನ್‌
5. ಇಸ್ರೇಲ್‌
6. ನೆದರ್ಲೆಂಡ್‌
7. ನಾರ್ವೆ
8. ಲಕ್ಸಂಬರ್ಗ್‌
9. ಸ್ವಿಡ್ಜರ್ಲೆಂಡ್‌
10. ಆಸ್ಪ್ರೇಲಿಯಾ


ಇದನ್ನು ಓದಿ : ಬಿಎ ಓದುವ ವಿಚಾರದಲ್ಲಿ ಗಂಡನೊಂದಿಗೆ ಜಗಳ; ನೇಣಿಗೆ ಶರಣಾದ ಗರ್ಭಿಣಿ!


ಚೀನಾ 60, ನೇಪಾಳ 93, ಪಾಕಿಸ್ತಾನ 108, ಮ್ಯಾನ್ಮಾರ್‌ 118, ಶ್ರೀಲಂಕಾ 128, ಬಾಂಗ್ಲಾದೇಶ 129ನೇ ಸ್ಥಾನದಲ್ಲಿವೆ. ಅಫಘಾನಿಸ್ತಾನ 148ನೇ ಶ್ರೇಯದೊಂದಿಗೆ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಇನ್ನು ಯುದ್ಧದಿಂದ ಕಂಗೆಟ್ಟಿರುವ ಉಕ್ರೇನ್‌ 105 ಹಾಗೂ ರಷ್ಯಾ 72ನೇ ಸ್ಥಾನ ಪಡೆದುಕೊಂಡಿವೆ. ಭಾರತದ ನಂತರದ ಸ್ಥಾನಗಳಲ್ಲಿ ಲಿಬಿಯಾ, ಇರಾಕ್, ಪ್ಯಾಲೆಸ್ತೀನ್,ನೈಗೆರ್ ದೇಶಗಳಿವೆ.


ಆಡಳಿತ ವ್ಯವಸ್ಥೆಯಲ್ಲಿ ಲೋಪದೋಷಗಳು, ಲಂಗು ಲಗಾಮಿಲ್ಲದೇ ಬೆಳೆಯುವ ನಗರಗಳು, ಅತಿಯಾದ ವಾಹನ ದಟ್ಟಣೆ, ಅಧಿಕ ಆರೋಗ್ಯ ವೆಚ್ಚ, ಅಪರಾಧಗಳ ಹೆಚ್ಚಳ, ಬಡತನ, ಸಮುದಾಯಗಳ ನಡುವಿನ ಅಸಮಾಧಾನ ಇತ್ಯಾದಿ ಸಂಗತಿಗಳು ಅಸಂತೋಷಕ್ಕೆ ಕಾರಣಗಳಾಗಿವೆ.


ಆದಾಯ, ಭ್ರಷ್ಟಾಚಾರದ ಮಟ್ಟ, ವೈಯಕ್ತಿಕ ಸ್ವಾತಂತ್ರ್ಯ, ಆರೋಗ್ಯಕರ ಜೀವನ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ). ಸಾಮಾಜಿಕ ಬೆಂಬಲ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಂಕ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಜನರ ಬದುಕಿನ ಮೇಲೆ ಆಗಿರುವ ಪರಿಣಾಮ, ಮಾನಸಿಕ ಸ್ಥಿತಿಯನ್ನು ಪರಿಗಣಿಸಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.