Tribe Wedding Ritual: ವೈವಿಧ್ಯತೆಯಿಂದ ತುಂಬಿರುವ ಜಗತ್ತಿನಲ್ಲಿ, ಕೆಲವು ವಿಶಿಷ್ಟವಾದ ಪದ್ಧತಿಗಳನ್ನು ನಾವು ಕಾಣಬಹುದು. ಜಗತ್ತಿನ ಪ್ರತೀ ಜನಾಂಗದಲ್ಲೂ ಒಂದೊಂದು ರೀತಿಯ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅವುಗಳನ್ನು ಕಾಣುವಾಗ ಇದೇನಪ್ಪಾ ವಿಚಿತ್ರ ಎಂದು ಭಾಸವಾಗುತ್ತದೆ. ಇದರಲ್ಲಿ ಕೆಲವು ಪದ್ಧತಿ, ಸಂಪ್ರದಾಯಗಳು ಮಾನವ ನಿರ್ಮಿತವಾದರೂ ಸಹ, ಇನ್ನೂ ಕೆಲವು ಪುರಾಣ ಇತಿಹಾಸಗಳನ್ನು ಅನುಸರಿಸಿರುವಂತಹದ್ದು, ಇಂದು ನಾವು ಹೇಳಹೊರಟಿರುವುದು ಒಂದು ವಿಚಿತ್ರವಾದ ಸಂಪ್ರದಾಯದ ಬಗ್ಗೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Lucky Plants : ಮನೆಯಲ್ಲಿ ಈ ಸಸ್ಯವನ್ನು ನೆಟ್ಟರೆ, ಹಣವನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ!


ಪ್ರತಿಯೊಂದು ಸಮಾಜವು ತನ್ನದೇ ಆದ ಸಂಸ್ಕೃತಿ, ಕೆಲವು ಸಂಪ್ರದಾಯಗಳು ಮತ್ತು ಕೆಲವು ನಂಬಿಕೆಗಳನ್ನು ಹೊಂದಿದೆ. ಆ ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಅದನ್ನು ಅನುಸರಿಸಬೇಕು. ಮದುವೆಯನ್ನು ಸಾಮಾನ್ಯವಾಗಿ ಎಲ್ಲಾ ಸಮಾಜದಲ್ಲಿ ಮಾಡಲಾಗುತ್ತದೆ. ಆದರೆ ಎಲ್ಲೆಡೆ ಮದುವೆಗೆ ವಿಭಿನ್ನ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಅವುಗಳಲ್ಲಿ ಕೆಲವು ತುಂಬಾ ವಿಚಿತ್ರವಾಗಿದ್ದು, ಅವುಗಳ ಬಗ್ಗೆ ಕೇಳಿದರೆ ನಿಮಗೆ ಶಾಕ್ ಆಗಬಹುದು.


ಮಸಾಯಿ ಬುಡಕಟ್ಟು ಎಂಬ ವಿಶೇಷ ಬುಡಕಟ್ಟು ಜನಾಂಗವು ಕೀನ್ಯಾ ಮತ್ತು ತಾಂಜಾನಿಯಾದ ಕೆಲವು ಭಾಗಗಳಲ್ಲಿ ನೆಲೆಸಿದೆ. ಇಲ್ಲಿ ಮದುವೆಯ ಸಮಯದಲ್ಲಿ ವಧುವಿನ ತಂದೆ ಮಗಳ ಎದೆ ಮತ್ತು ತಲೆಯ ಮೇಲೆ ಉಗುಳುವ ಮೂಲಕ ಆಶೀರ್ವದಿಸಿ ಕಳುಹಿಸುತ್ತಾರೆ. ಮಗಳು ಕೂಡ ಈ ತಂದೆಯ ಉಗುಳನ್ನು ತನ್ನ ಆಶೀರ್ವಾದ ಎಂದು ಪರಿಗಣಿಸುತ್ತಾಳೆ. ಈ ರೀತಿ ಮಾಡುವುದರಿಂದ ಮುಂದಿನ ಜೀವನದಲ್ಲಿ ಸಮೃದ್ಧಿ ಉಳಿಯುತ್ತದೆ. ಮಗಳ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ.


ಕೀನ್ಯಾದ ಬುಡಕಟ್ಟು ಜನರ ಪ್ರಕಾರ ಉಗುಳುವುದು ತುಂಬಾ ಮಂಗಳಕರವೆಂದು ಪರಿಗಣಿಸುತ್ತಾರೆ. ಇದು ಅವರ ಸಂಸ್ಕೃತಿ ಮತ್ತು ಸಮಾಜದ ಭಾಗವಾಗಿದೆ. ಇದಲ್ಲದೆ, ತಾಂಜಾನಿಯಾದ ಬುಡಕಟ್ಟುಗಳಲ್ಲಿಯೂ ಸಹ ಉಗುಳುವ ಸಂಪ್ರದಾಯವನ್ನು ಕಾಣಬಹುದು. ಇಲ್ಲಿನ ಜನರು ಅದನ್ನು ಗೌರವವಾಗಿ ಕಾಣುತ್ತಾರೆ.


ಮಸಾಯಿ ಬುಡಕಟ್ಟಿನಲ್ಲಿ, ಉಗುಳನ್ನು ಇತರ ವಿಧಾನಗಳಲ್ಲಿ ಪ್ರಯೋಗಿಸಲಾಗುತ್ತದೆ. ಉದಾಹರಣೆಗೆ ಯಾರನ್ನಾದರೂ ಸ್ವಾಗತಿಸುವಾಗ ಕೈಕುಲುಕುವ ಮೊದಲು ಅಂಗೈ ಮೇಲೆ ಉಗುಳುವುದು. ಮದುವೆಯ ಸಮಯದಲ್ಲಿ ಮನೆಯವರು ಮಗಳನ್ನು ಕಳುಹಿಸಿದಾಗ, ಮಗಳು ಹಿಂತಿರುಗಿ ನೋಡದಂತೆ ಆದೇಶಿಸಲಾಗುತ್ತದೆ.


ಇದನ್ನೂ ಓದಿ:hanakya Niti: ಜೀವನದ ಯಶಸ್ಸಿನ ಹಾದಿಗೆ ಮುಳ್ಳಾಗಲಿವೆ ನಿಮ್ಮ ಈ ಗುಣಗಳು


ಇದಲ್ಲದೇ ಮಸಾಯಿ ಬುಡಕಟ್ಟು ಜನಾಂಗದವರು ತಮ್ಮ ಉಡುಗೆ ತೊಡುಗೆಗಳಿಗೂ ಬಹಳ ಪ್ರಸಿದ್ಧರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ