ಎಲ್ಲೆಡೆ ವಿಶ್ವ ಪರಿಸರ ದಿನವನ್ನು ಪ್ರತೀ ವರ್ಷ ಜೂನ್‌ 5ರಂದು ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಯನ್ನು ಉದ್ದೇಶವಾಗಿರಿಸಿಕೊಂಡು ಈ ದಿನವನ್ನು ಆಚರಿಸಲಾಗುತ್ತಿದೆ. ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುವ ಸಲುವಾಗಿ ವಿಶ್ವಸಂಸ್ಥೆ ಈ ದಿನವನ್ನು ಪ್ರಮುಖ ದಿನವೆಂದು ಘೋಷಿಸಿದೆ. 1974 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಣೆ ಮಾಡಲಾಗಿದೆ. ಇದು ಸಮುದ್ರ ಮಾಲಿನ್ಯ, ಜನಸಂಖ್ಯೆ ಹೆಚ್ಚಳ ನಿಯಂತ್ರಣ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಹೊರಹೊಮ್ಮುವ ಪರಿಸರ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳುವ, ವನ್ಯಜೀವಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿತ್ತು. 


COMMERCIAL BREAK
SCROLL TO CONTINUE READING

ವಾರ್ಷಿಕವಾಗಿ 143ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಯಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ, ವಿಶ್ವ ಪರಿಸರ ದಿನವು ಹೊಸ ಉದ್ದೇಶಗಳಿಂದ ಮುನ್ನೆಲೆಗೆ ಬರುತ್ತದೆ. 


ಇದನ್ನು ಓದಿ: ಹೊಸಪೇಟೆಯಲ್ಲಿ 7.04 ಅಡಿ ಎತ್ತರದ 'ಅಪ್ಪು' ಕಂಚಿನ ಪುತ್ಥಳಿ ಪ್ರತಿಷ್ಠಾಪನೆ!


ಮಾನವ ಪರಿಸರ ಕುರಿತ ಸ್ಟಾಕ್‌ಹೋಮ್ ಸಮ್ಮೇಳನದ ಮೊದಲ ದಿನದಂದು 1972 ರಲ್ಲಿ ವಿಶ್ವ ಪರಿಸರ ದಿನ ಆಚರಿಸುವ ಕುರಿತು ಪೀಠಿಕೆಯನ್ನು ವಿಶ್ವಸಂಸ್ಥೆ ಹಾಕಿತು. ಆ ಬಳಿಕ ಮಾನವ ಸಂವಹನ ಮತ್ತು ಪರಿಸರದ ಏಕೀಕರಣ ಕುರಿತು ಚರ್ಚೆಗಳು ನಡೆದವು. ಎರಡು ವರ್ಷಗಳ ನಂತರ ಅಂದರೆ 1974ರಲ್ಲಿ ಮೊದಲ ವಿಶ್ವ ಪರಿಸರ ದಿನವನ್ನು "ಕೇವಲ ಒಂದು ಭೂಮಿ" ಎಂಬ ವಿಷಯದೊಂದಿಗೆ ನಡೆಸಲಾಯಿತು. 1974 ರಿಂದ ವಾರ್ಷಿಕವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಗಿದ್ದರೂ, 1987 ರಲ್ಲಿ ವಿವಿಧ ಆತಿಥೇಯ ರಾಷ್ಟ್ರಗಳು ಒಗ್ಗೂಡಿ ಈ ದಿನವನ್ನು ಆಚರಿಸಲಾಗುತ್ತಿದೆ. 


2020 ರಲ್ಲಿ "ಪ್ರಕೃತಿಯ ಸಮಯ" ಎಂಬ ಧ್ಯೇಯ ವಾಕ್ಯದೊಂದಿಗೆ ಜರ್ಮನಿಯ ಸಹಭಾಗಿತ್ವದಲ್ಲಿ ಕೊಲಂಬಿಯಾದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊಲಂಬಿಯಾ ವಿಶ್ವದ ಅತಿದೊಡ್ಡ ಮೆಗಾಡೈವರ್ಸ್ ದೇಶಗಳಲ್ಲಿ ಒಂದಾಗಿದೆ. 


ಇನ್ನು 2019 ರಲ್ಲಿ "ಬೀಟ್ ವಾಯು ಮಾಲಿನ್ಯ" ಎಂಬ ನೀತಿಯೊಂದಿಗೆ ಆತಿಥೇಯ ರಾಷ್ಟ್ರ ಚೀನಾದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ವಾಯುಮಾಲಿನ್ಯದಿಂದ ವಾರ್ಷಿಕವಾಗಿ ಸುಮಾರು 7 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದರು. ಈ ಹಿನ್ನೆಲೆಯಲ್ಲಿ ವಾಯುಮಾಲಿತ್ಯ ತಡೆಯುವ ಉದ್ದೇಶದಿಂದ ಈ ನೀತಿಯನ್ನು ಆಯ್ಕೆ ಮಾಡಲಾಗಿತ್ತು. 


2018 ರಲ್ಲಿ ಥೀಮ್ "ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ ಮಾಡಿ" ಎಂದ ಧ್ಯೇಯ ವಾಕ್ಯವನ್ನು ಅನುಸರಿಸಲಾಗಿತ್ತು. ಅತಿಥೇಯ ರಾಷ್ಟ್ರ ಭಾರತದಲ್ಲಿ ಈ ಕಾರ್ಯಕ್ರಮ ಮಾಡಲಾಗಿದ್ದು, ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಅದರಿಂದ ಉಂಟಾಗುವ ಮಾಲಿನ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿತ್ತು.  


ಇದನ್ನು ಓದಿ: Zodiac signs: ಜಗಳವಾಡುವುದರಲ್ಲಿ ನಿಸ್ಸೀಮರು ಈ ರಾಶಿಯವರೇ.!


ಇನ್ನು ಈ ಬಾರಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಈ ದಿನ ಸಾಧಿಸಿದೆ. ವಿಶ್ವ ಪರಿಸರ ದಿನವನ್ನು ಆಚರಿಸಲು ಪ್ರಾರಂಭಿಸಿ ಇಂದಿಗೆ 50 ವರ್ಷಗಳು ಪೂರ್ಣಗೊಂಡಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.