ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ವಿಶೇಷ ಮಿಲಿಟರಿ ಕಾರ್ಯಾಚರಣೆಯ ಉದ್ದೇಶವು ರಷ್ಯಾವನ್ನು ರಕ್ಷಿಸುವುದು ಮತ್ತು ಉಕ್ರೇನ್ ಅನ್ನು ಸಶಸ್ತ್ರೀಕರಣಗೊಳಿಸುವುದು ಎಂದು ಹೇಳಿದ್ದಾದರೂ ಕೂಡ ಅವರ ಮುಖ್ಯ ಉದ್ದೇಶ, ಈಗ ಈ ಹಿಂದಿನ ಯುಎಸ್ಎಸ್ಆರ್ ಪ್ರದೇಶದ ಮೇಲೆ ಪ್ರಾಬಲ್ಯವನ್ನು ಸಾಧಿಸುವುದಾಗಿದೆ.ಈ ಹಿನ್ನಲೆಯಲ್ಲಿ ಈಗ ಒಟ್ಟಾರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಹಾದಿಯನ್ನು ಏಳು ಪ್ರಶ್ನೆಗಳ ಮೂಲಕ ಇಲ್ಲಿ ಉತ್ತರಿಸುವ ಪ್ರಯತ್ನವನ್ನು ಮಾಡಲಾಗಿದೆ.


COMMERCIAL BREAK
SCROLL TO CONTINUE READING

ರಷ್ಯಾ ಉಕ್ರೇನ್ ನ್ನು ದ್ವೇಷಿಸುತ್ತಿರುವುದೇಕೆ?


ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಒಮ್ಮೆ ರಷ್ಯಾದ (Russia-Ukraine Crisis) ಸಾಮ್ರಾಜ್ಯ ಮತ್ತು ಯುಎಸ್ಎಸ್ಆರ್ (ಸೋವಿಯತ್ ಒಕ್ಕೂಟ) ಭಾಗವಾಗಿದ್ದ ಉಕ್ರೇನ್ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.ಯುಎಸ್ಎಸ್ಆರ್ ಪತನದ ನಂತರ, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಶಕ್ತಿಗಳ ಮಿತ್ರರಾಷ್ಟ್ರಗಳಾದ ಹಂಗೇರಿ, ಪೋಲೆಂಡ್, ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ ಮತ್ತು ಜೆಕ್ ರಿಪಬ್ಲಿಕ್ ನ್ಯಾಟೋ ಮಿಲಿಟರಿ ಪಡೆ ಜೊತೆ ಕೈ ಜೋಡಿಸಿದವು.2008 ರಲ್ಲಿ, ನ್ಯಾಟೋ ಹಿಂದಿನ ಸೋವಿಯತ್ ರಾಜ್ಯಗಳಾದ ಉಕ್ರೇನ್ ಮತ್ತು ಜಾರ್ಜಿಯಾ ಕೂಡ ತನ್ನ ಜೊತೆ ಸೇರಬಹುದು ಎಂದು ಹೇಳಿತು.ಈ ನಡೆ ಏಕಾಏಕಿ ರಷ್ಯಾ ದೇಶವನ್ನು ಕೆರಳಿಸುವಂತೆ ಮಾಡಿತು. 


ಇದನ್ನೂ ಓದಿ: Russia-Ukraine conflict: ಉಕ್ರೇನ್ ಮೇಲೆ ರಷ್ಯಾ ದಾಳಿ, ತುರ್ತು ಸಭೆ ಕರೆದ ನ್ಯಾಟೋ


ಇತ್ತೀಚಿನ ಉಕ್ರೇನ್-ರಷ್ಯಾ ಸಂಘರ್ಷ ಪ್ರಾರಂಭವಾಗಿದ್ದು ಯಾವಾಗ ? 


ಇತ್ತೀಚಿನ ಸಂಘರ್ಷವು ಫೆಬ್ರವರಿ 2014 ರಲ್ಲಿ ಸಂಭವಿಸಿದ ಮೈದಾನ್ ಕಾಂತ್ರಿಯಿಂದ ಪ್ರಾರಂಭವಾಗಿದೆ.ಆಗ ರಷ್ಯಾದ ಪರವಾದ ಒಲವನ್ನು ಹೊಂದಿದ್ದ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ವಿರುದ್ಧದ ಪ್ರತಿಭಟನೆಯಲ್ಲಿ ನೂರಾರು ಉಕ್ರೇನಿಯನ್ನರು ಸಾವನ್ನಪ್ಪಿದರು.ಇದರಿಂದಾಗಿ ತೀವ್ರ ಪ್ರತಿಭಟನೆಗಳು ಉಕ್ರೇನ್ ದುದ್ದಕ್ಕೂ ನಡೆದವು, ಕೊನೆಗೆ ಯಾನುಕೋವಿಚ್‌ ಪದಚ್ಯುತಿಗೊಳ್ಳಬೇಕಾಯಿತು. 


ಈ ಎಲ್ಲ ಪ್ರತಿಭಟನೆಗಳಿಗೆ ರಷ್ಯಾ ಪ್ರತಿಕ್ರಿಯಿಸಿದ್ದು ಹೇಗೆ ? 


ಮಾರ್ಚ್‌ನಲ್ಲಿ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ರಷ್ಯಾ ಇದಕ್ಕೆ ಪ್ರತಿಕ್ರಿಯಿಸಿತು.ಏಪ್ರಿಲ್‌ನಲ್ಲಿ, ರಷ್ಯಾ ಬೆಂಬಲಿತ ಸೇನಾಪಡೆಗಳು ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್‌ನಲ್ಲಿರುವ ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡವು.ಈ ಗುಂಪುಗಳು ಮೇ, 2014 ರಲ್ಲಿ ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಎಂದು ಸ್ವಾತಂತ್ರ್ಯವನ್ನು ಘೋಷಿಸಿದವು.ಒಟ್ಟಾಗಿ, ಈ ಪ್ರದೇಶಗಳನ್ನು ಡಾನ್ಬಾಸ್ ಎಂದು ಕರೆಯಲಾಗುತ್ತದೆ. 


ಮುಂದೆ ಆಗಿದ್ದೇನು?


ನಿರೀಕ್ಷೆಯಂತೆ ಉಕ್ರೇನಿಯನ್ ಪಡೆಗಳು ಕಳೆದುಹೋದ ಪ್ರದೇಶವನ್ನು ಮರಳಿ ಪಡೆಯಲು ಪ್ರಯತ್ನಿಸಿದವು, ಆದರೆ ಅವರು ರಷ್ಯಾದ ಸವಾಲನ್ನು ಜಯಿಸಲು ಸಾಧ್ಯವಾಗಲಿಲ್ಲ.ಉಕ್ರೇನ್‌ನಲ್ಲಿ ಹೆಚ್ಚಿನ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದಾಗಿ ರಷ್ಯನ್ನರು ಬೆದರಿಕೆ ಹಾಕಿದರು.ರಷ್ಯಾ, ಉಕ್ರೇನ್ ಮತ್ತು ಪ್ರತ್ಯೇಕತಾವಾದಿಗಳ ನಡುವೆ ಶಾಂತಿ ಒಪ್ಪಂದವು ಸಹಜ ಸ್ಥಿತಿಗೆ ಮರಳಿತು.ಈ ಒಪ್ಪಂದವನ್ನು ಮಿನ್ಸ್ಕ್-1 ಎಂದು ಕರೆಯಲಾಗುತ್ತಿತ್ತು. 


ಮಿನ್ಸ್ಕ್ -1 ಶಾಂತಿ ಒಪ್ಪಂದದ ಭವಿಷ್ಯವೇನು?


ಮಿನ್ಸ್ಕ್-1 ಶಾಂತಿ ಒಪ್ಪಂದವು ಅಲ್ಪಕಾಲಿಕವಾಗಿತ್ತು. ಪೂರ್ಣ ಪ್ರಮಾಣದ ಹೋರಾಟವು ಜನವರಿ 2015 ರಲ್ಲಿ ಪ್ರಾರಂಭವಾಯಿತು.ವಿಶ್ವ ನಾಯಕರು ಮಿನ್ಸ್ಕ್-2 ಎಂದು ಕರೆಯಲ್ಪಡುವ ಮತ್ತೊಂದು ಶಾಂತಿ ಒಪ್ಪಂದದೊಂದಿಗೆ ಬಿಕ್ಕಟ್ಟನ್ನು ಪರಿಹರಿಸಿದರು.ಶಾಂತಿ ಒಪ್ಪಂದದ ನಂತರ ಪ್ರತ್ಯೇಕತಾವಾದಿಗಳು ಡೊನ್ಬಾಸ್ ನ ಬೃಹತ್ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಸಾಧಿಸಿದರು.


ಶಾಂತಿ ಒಪ್ಪಂದಗಳು ಪ್ರದೇಶಕ್ಕೆ ನಿಜವಾದ ಶಾಂತಿಯನ್ನು ತಂದಿದೆಯೇ?


ಎರಡು ಶಾಂತಿ ಒಪ್ಪಂದಗಳ ಹೊರತಾಗಿಯೂ ಪ್ರದೇಶವು ಉದ್ವಿಗ್ನತೆಯಲ್ಲಿಯೇ ಸಾಗಿತು.ಅಧಿಕೃತ ಮಾಹಿತಿಯ ಪ್ರಕಾರ, 2014 ರಿಂದ ಈ ಪ್ರದೇಶದಲ್ಲಿ 14,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನುವ ಸಂಗತಿ ಎರಡು ದೇಶಗಳ ನಡುವಿನ ಸಂಘರ್ಷದ ತೀವ್ರತೆಯನ್ನು ತಿಳಿಸುತ್ತದೆ.


ಪ್ರಸ್ತುತ ಬಿಕ್ಕಟ್ಟು ಉಲ್ಬಣಗೊಂಡಿದ್ದು ಹೇಗೆ? 


ಹೋರಾಟದ ವಯಸ್ಸಿನ ಪುರುಷರನ್ನು ಹಿಡಿದಿಟ್ಟುಕೊಂಡು ಬೇರ್ಪಟ್ಟ ಪ್ರದೇಶಗಳ ನಾಯಕರು ನಾಗರಿಕರನ್ನು ರಷ್ಯಾಕ್ಕೆ ಸ್ಥಳಾಂತರಿಸಿದರು.ಇತ್ತೀಚಿನ ವಾರಗಳಲ್ಲಿ ಪುಟಿನ್ ಉಕ್ರೇನ್‌ನ ಗಡಿಯಲ್ಲಿ 190,000 ಸೈನಿಕರನ್ನು ಒಟ್ಟುಗೂಡಿಸಿದರು.ಫೆಬ್ರವರಿ 21 ರಂದು, ಅವರು ಡೊನೆಟ್ಸ್ಕ್ ಮತ್ತು ಲುಹಾನ್ಸ್ ಅನ್ನು ಸ್ವತಂತ್ರ ರಾಜ್ಯಗಳಾಗಿ ಗುರುತಿಸಿದರು. ಇದಾದ ನಂತರ, ಅವರು ಡೊನ್ಬಾಸ್ ನ ಸಂಪೂರ್ಣ ಪ್ರತ್ಯೇಕತಾವಾದಿಗಳ ಹಕ್ಕುಗಳನ್ನು ಅನುಮೋದಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.