Holocaust On Earth - ನವದೆಹಲಿ: ಭೂಮಿಯ ಮೇಲಾಗುವ ಸಂಭಾವ್ಯ ಪ್ರಳಯದ ಕುರಿತು ಆಲೋಚಿಸಿಕೆ ಹಲವರು ಆತಂಕಕ್ಕೊಳಗಾಗುತ್ತಾರೆ. ಚಲನಚಿತ್ರಗಳಲ್ಲಿ ಹಾಗೂ ಕಥೆಗಳಲ್ಲಿ ನಾವು ಪ್ರಳಯದ ಕುರಿತು ಸಾಕಷ್ಟು ಸಂಗತಿಗಳನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ, ಇದು ನಿಜ ಎಂದು ಸಾಬೀತಾದರೆ ಹೇಗಿರಲಿದೆ. ಈ ಕುರಿತು ಹೇಳಿಕೆ ನೀಡಿರುವ ವಿಜ್ಞಾನಿಗಳು, ವಿಜ್ಞಾನದ ಆದಾರದ ಮೇಲೆ ಪ್ರಳಯದ ಸರಿಯಾದ ಸಮಯವನ್ನು ಅಂದಾಜಿಸಬಹುದು ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಭೂಮಿಯ ಮೇಲೆ ಪ್ರಳಯ ಒಂದು ಸಾಮಾನ್ಯ ಪ್ರಕ್ರಿಯೆ
ಇದಕ್ಕೆ ಸಂಬಂಧಿಸಿದಂತೆ ಹೇಳುವ ತಜ್ಞರು, ಭೂಮಿಯ ಮೇಲೆ ಪ್ರತಿ 2.7 ಕೋಟಿ ವರ್ಷಗಳ ಬಳಿಕ ಜಾಗತಿಕವಾಗಿ ಭೀಕರ ಹಾಗೂ ವಿನಾಶಕ ಘಟನೆಗಳು ನಡೆಯುತ್ತವೆ. ಈ ಹಿಂದೆ ಸುಮಾರು 6.6 ವರ್ಷಗಳ ಹಿಂದೆ ಇಂತಹ ಒಂದು ಘಟನೆ ನಡೆದಿತ್ತು. ಆ ವೇಳೆ ಒಂದು ಭಾರಿ ಗಾತ್ರದ ಉಲ್ಕಾ ಶಿಲೆ ಅಥವಾ ಧೂಮಕೇತು ಭೂಮಿಗಪ್ಪಳಿಸಿದ ಕಾರಣ ಡೈನೋಸಾರ್ ಸಂತತಿ ನಸಿಶಿಹೋಗಿತ್ತು ಎಂದು ಅವರು ಹೇಳಿದ್ದಾರೆ.


ಭೂಮಿಯ ಮೇಲೆ ಆಸಿಡ್ ರೇನ್ 
ವಿಜ್ಞಾನಿಗಳ ಪ್ರಕಾರ ಪ್ರಳಯ ಇನ್ನೂ 3 ಕೋಟಿ ವರ್ಷಗಳು ದೂರದಲ್ಲಿದೆ. ನೂತನವಾಗಿ ಪ್ರಕಟಗೊಂಡ ಅಂಕಿ-ಅಂಶಗಳ ಪ್ರಕಾರ, ಭೂಮಿಯನ್ನು ಸರ್ವನಾಶ ಮಾಡುವ ಆಮ್ಲಮಳೆ ಅಥವಾ ಧೂಮಕೇತು ಪ್ರತಿ 2.6 ರಿಂದ 3 ಕೋಟಿ ವರ್ಷಗಳಿಗೊಮ್ಮೆ ಕುಸಿಯುತ್ತದೆ ಎಂದು ಅಮೆರಿಕಾದ ವಿಜ್ಞಾನಿಗಳು ಹೇಳಿದ್ದಾರೆ. ಈ ವೇಳೆ ಅವು ನಮ್ಮ ಆಕಾಶಗಂಗೆಯ ಮೂಲಕ ಹಾದುಹೋಗುತ್ತವೆ.


ಒಂದು ವೇಳೆ ಈ ಧೂಮಕೇತು ಭೂಮಿಗಪ್ಪಳಿಸಿದರೆ, ಭೂಮಿಯಲ್ಲಿ(Earth) ಕತ್ತಲೆ ಆವರಿಸಲಿದೆ, ಆಮ್ಲ ಮಳೆಯಾಗಲಿದೆ, ಕಾಡುಗಳು ಬೆಂಕಿ ಹೊತ್ತಿ ಉರಿಯಲಿವೆ. ಓಝೋನ್ ಪದರು ಸರ್ವನಾಶವಾಗಲಿದೆ. ಇದರಿಂದ ಭೂಮಿಯ ಮೇಲೆ ಅವಲಂಭಿಸಿರುವ ಜಲಚರ, ವಾಯುಚರ ಹಾಗೂ ಭೂಚರ ಪ್ರಾಣಿಗಳು ನಶಿಸಿಹೋಗಲಿವೆ ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ- Earth Rotation Video: ಭೂಮಿ ತಿರುಗುವಿಕೆಯನ್ನು ನೀವು ನೋಡಿದ್ದಿರಾ? ಇಲ್ಲಿದೆ ರೋಮಾಂಚಕ ವಿಡಿಯೋ


ಭೀಕರ ಉಲ್ಕಾಶಿಲೆಯ ಕುಸಿತದಿಂದ ಡೈನೋಸಾರ್ (Dinosaurs) ಸಂತತಿ ನಷ್ಟವಾಗಿತ್ತು
ಇದುವರೆಗೆ ಭೂಮಿಯ ಗರ್ಭದೊಳಗೆ ಕುದಿಯುತ್ತಿರುವ ಲಾವಾರಸ ಹೊರಬಂದಾಗ ಮಾತ್ರ ಭೂಮಿ ಹಾಗೂ ನೀರಿನ ಮೇಲೆ ವಿನಾಶ ಉಂಟಾಗಿತ್ತು. ನಮ್ಮ ಗ್ರಹ ಗ್ಯಾಲಕ್ಸಿಯಲ್ಲಿ ಸುತ್ತುವ ರೀತಿಯ ಅಪಾಯಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ಇದನ್ನು ಓದಿ- Antarctica Ice Bergs Melting - ಭೂಮಿಗೆ ಹಿಮಯುಗದ ಆಗಮನ! ಆತಂಕ ವ್ಯಕ್ತಪಡಿಸಿದ ವಿಜ್ಞಾನಿಗಳು


ಈ ಅಧ್ಯಯನದ ಬರಹಗಾರರಾಗಿರುವ ಹಾಗೂ ನ್ಯೂಯಾರ್ಕ್ ವಿವಿ ಪ್ರಾಧ್ಯಾಪಕ ಮೈಕಲ್ ರಾಂಪಿನೋ, 'ದೊಡ್ಡ ದೊಡ್ಡ ಆಬ್ಜೆಕ್ಟ್ ಹಾಗೂ ಭೂಮಿಯ ಒಳಗೆ ನಡೆಯುತ್ತಿರುವ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, 2.7 ಕೋಟಿ ವರ್ಷಗಳ ಅಂತರದಲ್ಲಿ ವಿನಾಶಕಾರಿ ಘಟನೆಗೆಳು ಎದುರಾಗಲಿವೆಯೇ ಎಂಬುದನ್ನು ತಿಳಿದುಕೊಳ್ಳಬಹುದು' ಎಂದಿದ್ದಾರೆ. ಅಷ್ಟೇ ಅಲ್ಲ ಇದಕ್ಕೂ ಮೊದಲು ಈ ರೀತಿಯ ಮೂರು ಘಟನೆಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ.


ಇದನ್ನು ಓದಿ- Solar Storm ಎಚ್ಚರ..! ಅಪ್ಪಳಿಸಲಿದೆ ಪ್ರಚಂಡ ವೇಗದ ಸೂರ್ಯ ಸುಂಟರಗಾಳಿ, ಭೂಮಿ ಕಥೆ ಏನು.?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.