CUT-COPY-PASTE ನೀವು ಮಾಡುತ್ತೀರಾ? ಈ ಟೆಕ್ನಿಕ್ ಕಂಡು ಹಿಡಿದಿದ್ದು ಯಾರು?
ಹೈ ಟೆಕ್ ತಂತ್ರಜ್ಞಾನದ ಈ ಯುಗದಲ್ಲಿ ಕಟ್-ಕಾಪಿ-ಪೇಸ್ಟ್ ಈ ಮೂರು ವಿಧಗಳು ಎಷ್ಟೊಂದು ಸಾಮಾನ್ಯವಾಗಿವೆ ಎಂದರೆ, ನಮ್ಮ-ನಿಮ್ಮ ಯಾವುದೇ ಕೆಲಸ ಇವುಗಳ ಹೊರತುಪಡಿಸಿ ಪೂರ್ಣಗೊಳ್ಳುವುದಿಲ್ಲ. ಈ ಮೂರು ಕಮಾಂಡ್ ಗಳನ್ನು ಹೊರತುಪಡಿಸಿ ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವುದು ತುಂಬಾ ಕಷ್ಟ ಸಾಧ್ಯದ ಕೆಲಸ. ಆದರೆ, ಈ ಕಟ್ ಕಾಪಿ ಪೇಸ್ಟ್ ಥಿಯರಿ ಕಂಡು ಹಿಡಿದಿದ್ದು ಯಾರು ನಿಮಗೆ ತಿಳಿದಿದೆಯೇ?
ನವದೆಹಲಿ:ಹೈ ಟೆಕ್ ತಂತ್ರಜ್ಞಾನದ ಈ ಯುಗದಲ್ಲಿ ಕಟ್-ಕಾಪಿ-ಪೇಸ್ಟ್ ಈ ಮೂರು ವಿಧಗಳು ಎಷ್ಟೊಂದು ಸಾಮಾನ್ಯವಾಗಿವೆ ಎಂದರೆ, ನಮ್ಮ-ನಿಮ್ಮ ಯಾವುದೇ ಕೆಲಸ ಇವುಗಳ ಹೊರತುಪಡಿಸಿ ಪೂರ್ಣಗೊಳ್ಳುವುದಿಲ್ಲ. ಈ ಮೂರು ಕಮಾಂಡ್ ಗಳನ್ನು ಹೊರತುಪಡಿಸಿ ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವುದು ತುಂಬಾ ಕಷ್ಟ ಸಾಧ್ಯದ ಕೆಲಸ. ಆದರೆ, ಈ ಕಟ್ ಕಾಪಿ ಪೇಸ್ಟ್ ಥಿಯರಿ ಕಂಡು ಹಿಡಿದಿದ್ದು ಯಾರು ನಿಮಗೆ ತಿಳಿದಿದೆಯೇ? ಇಲ್ಲ ಎಂದರೆ ಕೇಳಿ, ಕಟ್-ಕಾಪಿ-ಪೇಸ್ಟ್ ನ ಈ ಪರ್ಯಾಯ ನೀಡಿದ ವಿಜ್ಞಾನಿ ಹೆಸರು ಲ್ಯಾರಿ ಟೆಸ್ಲರ್. ಲ್ಯಾರಿ ಟೆಸ್ಲರ್ ಅವರು 17 ಫೆಬ್ರವರಿ 2020ಕ್ಕೆ ನಿಧನರಾಗಿದ್ದಾರೆ. ಹೀಗಾಗಿ ಇಂದು ನಾವು ನಿಮಗೆ ಅವರು ನೀಡಿರುವ ಈ ಅದ್ಭುತ ಥಿಯರಿ ಕುರಿತು ಮಾಹಿತಿ ನೀಡುತ್ತಿದ್ದೇವೆ.
74ರ ಇಳಿವಯಸ್ಸಿನಲ್ಲಿ ನಿಧನ
ಬಳಕೆದಾರರ ಸಂವಹನದ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಲ್ಯಾರಿ ಟೆಸ್ಲರ್ ಕಟ್-ಕಾಪಿ-ಪೇಸ್ಟ್ ಎಂಬ ಮೂರು ಥಿಯರಿಗಳನ್ನು ಪರಿಚಯಿಸಿದ್ದರು. 74ರ ಇಳಿವಯಸ್ಸಿನಲ್ಲಿ ಲ್ಯಾರಿ ಅವರ ನಿಧನರಾಗಿದ್ದಾರೆ. ನ್ಯೂಯಾರ್ಕ್ ನಲ್ಲಿ ಜನಿಸಿದ್ದ ಅವರು ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿಯಿಂದ ಕಂಪ್ಯೂಟರ್ ಸೈನ್ಸಸ್ ವ್ಯಾಸಂಗ ಪೂರ್ಣಗೊಳಿಸಿದ್ದರು. ಬಳಿಕ ಅವರು, 1973ರಲ್ಲಿ Xerox Palo Alto Research Center (PARC)ಗೆ ಸೇರಿಕೊಂಡಿದ್ದರು. ನಂತರ ಸ್ಟೀವ್ ಜಾಬ್ಸ್ ಅವರ ಕರೆ ಮೇರೆಗೆ ಆಪಲ್ ಕಂಪನಿಯನ್ನು ಸೇರಿಕೊಂಡ ಅವರು 17 ವರ್ಷಗಳ ಸೇವೆ ಸಲ್ಲಿಸಿ ಚೀಫ್ ಸೈಂಟಿಸ್ಟ್ ಹುದ್ದೆಗೆ ಬಡ್ತಿ ಪಡೆದಿದ್ದರು.
ಈ ಕಂಪನಿಗಳ ಜೊತೆಗೂ ಕೂಡ ಕೆಲಸ ಮಾಡಿದ್ದರು
ಆಪಲ್ ಕಂಪನಿಗೆ ರಾಜೀನಾಮೆ ನೀಡಿದ ಬಳಿಕ ಅವರು ಶೈಕ್ಷಣಿಕ ಸ್ಟಾರ್ಟ್ ಆಪ್ ವೊಂದನ್ನು ಆರಂಭಿಸಿದ್ದರು. ಜೊತೆಗೆ ಅವರು ಅಮೆಜಾನ್ ಹಾಗೂ ಯಾಹೂ ಸಂಸ್ಥೆಗಳಲ್ಲಿಯೂ ಕೂಡ ಕಾರ್ಯನಿರ್ವಹಿಸಿದ್ದರು.
ಜನರ ಕೆಲಸ ಸುಲಭಗೊಳಿಸಿದರು
ಇಂದಿನ ಯುಗದಲ್ಲಿ ಕಂಪ್ಯೂಟರ್ ಮೇಲೆ ಕಾರ್ಯ ನಿರ್ವಹಿಸುವಾಗಿ ಕಟ್-ಕಾಪಿ-ಪೇಸ್ಟ್ ಈ ಕಮಾಂಡ್ ಗಳು ಎಷ್ಟು ಸಹಾಯಕಾರಿಯಾಗಿವೆ ಎಂಬುದು ನಮ್ಮ-ನಿಮ್ಮೆಲಾರಿಗೂ ಗೊತ್ತು. ಈ ಕಮಾಂಡ್ ಗಳನ್ನು ಹೊರತುಪಡಿಸಿ ಕಂಪ್ಯೂಟರ್ ಮೇಲೆ ಕಾರ್ಯನಿರ್ವಹಿಸುವುದು ಕಷ್ಟ ಸಾಧ್ಯದ ಕೆಲಸ. ಈ ಹೊಸ ಟೆಕ್ನಿಕ್ ಆವಿಷ್ಕಾರದಿಂದ ಜನರು ತಮ್ಮ ಪರ್ಸನಲ್ ಕಂಪ್ಯೂಟರ್ ಮೇಲೆ ಸುಲಭವಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಮೂರು ಕಮಾಂಡ್ ಗಳ ಜೊತೆಗೆ ಲ್ಯಾರಿ ಫೈಂಡ್ ಅಂಡ್ ರಿಪ್ಲೇಸ್ ಕಮಾಂಡ್ ಕೂಡ ಆವಿಷ್ಕರಿಸಿದ್ದರು. ಟೆಕ್ಸ್ಟ್ ಬರೆಯುವುದರಿಂದ ಹಿಡಿದು ಸಾಫ್ಟ್ ವೇರ್ ಡೆವಲಪ್ಮೆಂಟ್ ವರೆಗೆ ಈ ಕಮಾಂಡ್ ವ್ಯಾಪಕವಾಗಿ ಬಳಸಲ್ಪಡುತ್ತದೆ.
PARC ನಲ್ಲಿ ಇದನ್ನು ಅಭಿವೃದ್ಧಿಗೊಳಿಸಿದ್ದರು
ತಮ್ಮ CVಯಲ್ಲಿ ಲ್ಯಾರಿ ಟೆಸ್ಲರ್ ತಾವು ಮೋಡ್ ಲೆಸ್ ಎಡಿಟಿಂಗ್ ಹಾಗೂ ಕಟ್-ಕಾಪಿ-ಪೇಸ್ಟ್ ನ ಆರಂಭಿಕ ಅನ್ವೇಷಕರಾಗಿರುವುದಾಗಿ ಬರೆದುಕೊಂಡಿದ್ದರು. ಆದರೆ, ತಪ್ಪಾಗಿ ತಮ್ಮನ್ನು ಫಾದರ್ ಆಫ್ ಗ್ರಾಫಿಕಲ್ ಯುಸರ್ ಇಂಟರ್ಫೇಸ್ ಫಾರ್ ಮೆಕಿಂತಾಶ್ ಎಂದು ಸಂಬೋಧಿಸಲಾಗುತ್ತದೆ. ಆದರೆ ಅದು ತಪ್ಪಾಗಿದೆ ಎಂದೂ ಕೂಡ ಬರೆದುಕೊಂಡಿದ್ದರು. PARCನಲ್ಲಿ ಕಾರ್ಯನಿರ್ವಹಿಸುವಾಗಲೇ ಅವರು ಕಟ್-ಕಾಪಿ-ಪೇಸ್ಟ್ ಥಿಯರಿ ಕಂಡುಹಿಡಿದಿದ್ದರು. ಆದರೆ ನಂತರದ ದಿನಗಳಲ್ಲಿ ಈ ಕಟ್-ಕಾಪಿ-ಪೇಸ್ಟ್ ನ ಕಾಸೆಪ್ಟ್ ಕಂಪ್ಯೂಟರ್ ನ ಇಂಟರ್ಫೇಸ್ ಹಾಗೂ ಟೆಕ್ಸ್ಟ್ ಎಡಿಟರ್ಸ್ ಗಳ ಪಾಲಿಗೆ ವರದಾನವಾಯಿತು.