ನವದೆಹಲಿ:  ಭಾರತ ಹಾಗೂ ಚೀನಾದ ವಿಚಾರ ಬಂದಾಗಲೆಲ್ಲಾ 'ಮುತ್ತುಗಳ ಸರಪಳಿ' (String Of Pearls) ನೀತಿಯು ಸಾಕಷ್ಟು ಚರ್ಚೆಗೆ ಒಳಗಾಗುತ್ತದೆ.ಈ ನೀತಿಯನ್ನು ಚೀನಾ ಅಧಿಕೃತವಾಗಿ ಕರೆಯದೇ ಇದ್ದರೂ ಕೂಡ ಮಾಧ್ಯಮಗಳಲ್ಲಿ ಈ ನೀತಿ ಆಗಾಗ ಸದ್ದು ಮಾಡುತ್ತದೆ. ಹಾಗಾಗಿ ಈಗ ಚೀನಾ ಭಾರತದ ಸುತ್ತ ಹೆಣೆದಿರುವ ಈ ಮುತ್ತುಗಳ ಸರಪಳಿಯನ್ನು ವಿಸ್ತೃತವಾಗಿ ತಿಳಿಯೋಣ ಬನ್ನಿ..


COMMERCIAL BREAK
SCROLL TO CONTINUE READING

String Of Pearls ಯೋಜನೆ ಎಂದರೇನು? : 


'String Of Pearls ಯೋಜನೆ' ಎಂಬುದು ಹಿಂದೂ ಮಹಾಸಾಗರದಲ್ಲಿನ ಚೀನೀ ಉದ್ದೇಶಗಳಿಗೆ (ಮಿಲಿಟರಿ, ವಾಣಿಜ್ಯ, ಸಮುದ್ರ ರೇಖೆಯ ಸಂವಹನ ಮತ್ತು ರಾಜತಾಂತ್ರಿಕ) ಸಂಬಂಧಿಸಿದ ಭೌಗೋಳಿಕ ಸಿದ್ಧಾಂತವಾಗಿದೆ. ಇದು ಬಾಂಗ್ಲಾದೇಶದ ಚಿತ್ತಗಾಂಗ್‌, ಪಾಕಿಸ್ತಾನದ ಕರಾಚಿ ಮತ್ತು ಗ್ವಾದರ್ ಮತ್ತು ಶ್ರೀಲಂಕಾದ ಕೊಲಂಬೊ, ಹಂಬಂಟೋಟಾ ಬಂದರಿನಲ್ಲಿರುವ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಪ್ರಮುಖವಾಗಿ ಚೀನಾದ ಮಿಲಿಟರಿ ಮತ್ತು ವಾಣಿಜ್ಯ ಸೌಲಭ್ಯಗಳ ಜಾಲವನ್ನು ಸೂಚಿಸುವುದರ ಜೊತೆಗೆ ಅದರ ಸಮುದ್ರ ಸಂವಹನ ಮಾರ್ಗಗಳ ಉದ್ದಕ್ಕೂ ಇರುವ ಸಂಬಂಧಗಳನ್ನು ಸೂಚಿಸುತ್ತದೆ, ಇದು ಚೀನಾದ ಮುಖ್ಯ ಭೂಭಾಗದಿಂದ ಆರಂಭವಾಗಿ ಸುಡಾನ್ ಬಂದರಿನವರೆಗೆ ವಿಸ್ತರಿಸುತ್ತದೆ.


ಜುಲೈ 12, 2017 ರಂದು, ಚೀನಾದ ಪಡೆಗಳು ಜಿಬೌಟಿಯಲ್ಲಿ (ಆಫ್ರಿಕಾ) ದೇಶದ ಮೊದಲ ಸಾಗರೋತ್ತರ ಮಿಲಿಟರಿ ನೆಲೆಯನ್ನು ಸ್ಥಾಪಿಸಲು ಪ್ರಯಾಣ ಬೆಳೆಸಿದವು.ಆ ಮೂಲಕ ಚೀನಾ ದೇಶವು ತನ್ನ ನೆರೆಯ ರಾಷ್ಟ್ರಗಳ ಸುತ್ತ ವಿಭಿನ್ನ ನೆಲೆಗಳ ಮೂಲಕ ಭಾರತವನ್ನು ಬಲೆಗೆ ಬೀಳಿಸಲು ಚೀನಾ ಮುಂದಾಯಿತು.ಇದರ ಭಾಗವಾಗಿ ಚೀನಾ ದೇಶವು ಭಾರತದ ಸುತ್ತಲೂ ಉಂಗುರವನ್ನು ರಚಿಸುತ್ತಿದೆ, ಇದನ್ನೇ ಈಗ ಮಾಧ್ಯಮಗಳು ಮುತ್ತುಗಳ ಸರಪಳಿ ಎಂದು ಕರೆಯುತ್ತಿವೆ.ಈಗ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಶ್ರೀಲಂಕಾದಲ್ಲಿನ ಮಿಲಿಟರಿ ಮೈತ್ರಿಗಳು ಮತ್ತು ಸ್ವತ್ತುಗಳ ಸಹಾಯದಿಂದ ಭಾರತೀಯ ಉಪಖಂಡವನ್ನು ಸುತ್ತುವರಿಯುವ ಚೀನಾದ ಕಾರ್ಯತಂತ್ರವು ಭಾರತದ ಕಳವಳವನ್ನು ಹೆಚ್ಚಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್