Viral Video: ರಸ್ತೆಗಿಳಿದ ವಿಶ್ವದ ಅತಿ ದೊಡ್ಡ ಹಾವು ಅನಕೊಂಡ, ನೋಡಿ ಸ್ಥಭ್ದರಾದ ಜನ!
Huge Anaconda Crossing Road: ಮನುಷ್ಯರ ನಡುವೆ ಹಾವು ಕಂಡಾಕ್ಷಣ ಜನರು ಅದನ್ನು ಕಂಡು ಭಯಭೀತರಾಗುವ ಅಥವಾ ಸರ್ಪಮಿತ್ರರು ಬಂದು ಅದನ್ನು ಹಿಡಿದು ಕಾಡಿಗೆ ಪುನಃ ಬಿಡುವ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಇಂದು ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋದಲ್ಲಿ ವಿಶ್ವದ ದೈತ್ಯಾಕಾರದ ಹಾವು ಎಂದೇ ಪರಿಗಣಿಸಲ್ಪಡುವ ಅನಾಕೊಂಡಾ ಹಾವು ರೋಡಿಗಿಳಿದು ವಾಯುವಿಹಾರಕ್ಕೆ ಹೊರಟಂತಿದೆ ಏನೋ ಎಂಬಂತೆ ಗೋಚರಿಸುತ್ತಿದೆ.
Anakonda Trending Video: ವಿವಿಧ ರೀತಿಯ ಹಾವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುವುದನ್ನು ನೀವು ನೋಡಿರಬಹುದು. ಈ ವಿಡಿಯೋಗಳಲ್ಲಿ ಮನುಷ್ಯರ ನಡುವೆ ಹಾವು ಕಂಡ ತಕ್ಷಣ ಜನರು ಒಂದೆಡೆ ಭಯಭೀತರಾದರೆ, ಇನ್ನೊಂದೆಡೆ ಸರ್ಪಮಿತ್ರರು ಬಂದು ಆ ಹಾವನ್ನು ಹಿಡಿದು ಪುನಃ ನಾಡಿನಿಂದ ಕಾಡಿಗೆ ಬಿಡುವುದನ್ನು ನೀವು ನೋಡಿರಬಹುದು. ಆದರೆ ಇಂದು ನಾವು ನಿಮಗೆ ಒಂದು ವಿಡಿಯೋವನ್ನು ತೋರಿಸುತ್ತಿದ್ದು, ಇದರಲ್ಲಿ ವಿಶ್ವದ ಅತಿದೊಡ್ಡ ಹಾವು ಎಂದು ಪರಿಗಣಿಸಲ್ಪಟ್ಟ ಅನಕೊಂಡ ರಾಜಾರೋಷವಾಗಿ ರಸ್ತೆ ದಾಟುತ್ತಿರುವುದನ್ನು ಕಾಣಬಹುದು. ಇದು ಎಷ್ಟು ದೊಡ್ಡದಾಗಿದೆ ಎಂದರೆ ಇಡೀ ರಸ್ತೆಯನ್ನೇ ಅದರ ದೇಹ ಆವರಿಸಿದೆ.
ಇದ್ದಕ್ಕಿದ್ದಂತೆ ರಸ್ತೆಗೆ ಬಂದ ಅನಕೊಂಡ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ ಬೃಹತ್ ಅನಕೊಂಡ ಹಾವು ವೀಡಿಯೊ ಹೆದ್ದಾರಿಯಂತಹ ವಿಶಾಲವಾದ ರಸ್ತೆಯನ್ನು ದಾಟುತ್ತಿದೆ. ಈ ಅನಕೊಂಡ ಎಷ್ಟು ದೊಡ್ಡದಾಗಿದೆ ಎಂದರೆ ಅದನ್ನು ನೋಡಿ ಜನರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಈ ಒಂದು ಜೀವಿಯ ಕಾರಣ ಇಡೀ ಸಂಚಾರ ಸ್ಥಗಿತಗೊಂಡಂತಿದೆ. ಇದೇ ವೇಳೆ ಈ ಅನಕೊಂಡ ರಸ್ತೆಯ ಮಧ್ಯದಲ್ಲಿರುವ ವಿಭಜಕವನ್ನು ಸುಲಭವಾಗಿ ದಾಟುತ್ತಿರುವುದನ್ನು ನೀವು ಗಮನಿಸಬಹುದು.
ಈ ವೀಡಿಯೋ ನೋಡಿ-
ಈ ಕಾಯಿಲೆಯಿಂದ ಬಳಲುತ್ತಿರುವವರು ಬಾಳೆಹಣ್ಣನ್ನು ಮರೆತೂ ಸೇವಿಸಬಾರದು!
ಈ ವಿಡಿಯೋ ಎಲ್ಲಿಂದ ಹೊರಹೊಮ್ಮಿದೆ?
Snake.wild ಹೆಸರಿನ Instagram ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಕಾಮೆಂಟ್ ವಿಭಾಗದಲ್ಲಿ, ಜನರು ಈ ವಿಡಿಯೋ ಬ್ರೆಜಿಲ್ ನ ವಿಡಿಯೋವಾಗಿದೆ ಎನ್ನುತ್ತಿದ್ದಾರೆ. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ವೀಡಿಯೊ ಸುಮಾರು 2 ನಿಮಿಷಗಳದ್ದಾಗಿದ್ದು, ಹಾವು ಎಷ್ಟೊಂದು ವಿಶಾಲ ಕಾಯದ್ದಾಗಿದೆ ಎಂದರೆ ಡಿವೈಡರ್‌ನಿಂದ ಅರ್ಧ ರಸ್ತೆಯನ್ನು ದಾಟಲು ಇದು ತುಂಬಾ ಸಮಯ ತೆಗೆದುಕೊಂಡಿದೆ. ಅದು ರಸ್ತೆ ದಾಟುವಾಗ ಅದನ್ನು ಅಡ್ಡಿಪಡಿಸುವ ಧೈರ್ಯ ಯಾರು ಮಾಡಿಲ್ಲ.
ಇದನ್ನೂ ಓದಿ-ಕೊಂಬುಚಾ ಹೆಸರಿನ ಈ ಮ್ಯಾಜಿಕಲ್ ಡ್ರಿಂಕ್ ನೀವೆಂದಾದರೂ ಟ್ರೈ ಮಾಡಿದ್ದೀರಾ?
ಈ ವೈರಲ್ ವಿಡಿಯೋವನ್ನು ಇದುವರೆಗೆ 2 ಲಕ್ಷ 40 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವೀಡಿಯೊದ ಕಾಮೆಂಟ್ ವಿಭಾಗದಲ್ಲಿ, ಅನಕೊಂಡವನ್ನು ನೋಡಲು ಮತ್ತು ವೀಡಿಯೊ ಮಾಡಲು ತಮ್ಮ ಕಾರಿನಿಂದ ಹೊರಬಂದ ಜನರ ಧೈರ್ಯವನ್ನು ಜನರು ಶ್ಲಾಘಿಸುತ್ತಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.