Egypt Church Fire: ಈಜಿಪ್ಟ್ ಚರ್ಚ್‌ವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಬಳಿಕ ಕಾಲ್ತುಳಿತದ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ 41 ಮಂದಿ ಸಾವನ್ನಪ್ಪಿದ್ದಾರೆ. ಈಜಿಪ್ಟ್‌ನ ಕಾಪ್ಟಿಕ್ ಚರ್ಚ್‌ನ ಪ್ರಕಾರ ಕೈರೋದಲ್ಲಿನ ಚರ್ಚ್‌ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ ಮತ್ತು 14 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಅಧಿಕಾರಿಗಳನ್ನು ಉಲ್ಲೇಖಿಸಿ, ಇಂಬಾಬಾ, ಅಬು ಸಿಫೀನ್ ಚರ್ಚ್‌ನ ಜನನಿಬಿಡ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದಿದೆ.


COMMERCIAL BREAK
SCROLL TO CONTINUE READING

ಬೆಂಕಿ ಅವಘಡಕ್ಕೆ ಪ್ರಸ್ತುತ ಯಾವುದೇ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಸಭೆ ನಡೆಯುತ್ತಿರುವಾಗಲೇ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಬೆಂಕಿ ನಂದಿಸಲು ಹದಿನೈದು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗಳ ಮೂಲಕ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.


ಸಂತಾಪ ಸೂಚಿಸಿದ ರಾಷ್ಟ್ರಾಧ್ಯಕ್ಷ
ಘಟನೆಗೆ ಸಂಬಂಧಿಸಿದಂತೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು, ಕಾಪ್ಟಿಕ್ ಕ್ರಿಶ್ಚಿಯನ್ ಪೋಪ್ ತವಾಡ್ರೋಸ್ II ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಮತ್ತು ತಮ್ಮ ಸಂತಾಪಗಳನ್ನೂ ಸೂಚಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ. ಈ ಕುರಿತು ತಮ್ಮ ಫೇಸ್ ಬುಕ್ ನಲಿ ಬರೆದುಕೊಂಡಿರುವ ಅಲ್-ಸಿಸಿ, "ನಾನು ಈ ದುರ್ಘಟನೆಯ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇನೆ. ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಈ ಅಪಘಾತ ಮತ್ತು ಅದರ ಪರಿಣಾಮಗಳನ್ನು ತಕ್ಷಣವೇ ಎದುರಿಸಲು ನಾನು ಎಲ್ಲಾ ಸಂಬಂಧಿತ ರಾಜ್ಯ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದೇನೆ" ಎಂದಿದ್ದಾರೆ.


ಇದನ್ನೂ ಓದಿ-Viral News: ಪುಟ್ಟ ಬಾಲಕಿಯ ಕಡಿತದಿಂದ ಹಾವು ಸಾವು, ಬಾಲಕಿ ಸೇಫ್! ಎಂದಾದರೂ ಕೇಳಿದ್ದೀರಾ?


ಕಾಪ್ಟಿಕ್ ಕ್ರಿಶ್ಚಿಯನ್ನರು ಯಾರು?
ಕಾಪ್ಟಿಕ್ ಕ್ರಿಶ್ಚಿಯನ್ ಮಧ್ಯಪ್ರಾಚ್ಯದ ಅತಿದೊಡ್ಡ ಕ್ರಿಶ್ಚಿಯನ್ ಸಮುದಾಯವಾಗಿದ್ದು, ಈಜಿಪ್ಟ್‌ನ 103 ಮಿಲಿಯನ್ ಜನರಲ್ಲಿ ಕನಿಷ್ಠ 10 ಮಿಲಿಯನ್ ಜನರನ್ನು ಇದು ಹೊಂದಿದೆ. ಕಾಪ್ಟಿಕ್ ಕ್ರಿಶ್ಚಿಯನ್ನರು ಇಲ್ಲಿ ದಾಳಿಗಳನ್ನು ಎದುರಿಸುತ್ತಿದ್ದಾರೆ ಮತ್ತು ದೀರ್ಘಕಾಲದಿಂದ ಅವರು ಈ ಮುಸ್ಲಿಂ ಬಹುಸಂಖ್ಯಾತ ಉತ್ತರ ಆಫ್ರಿಕಾದ ದೇಶದಲ್ಲಿ ತಾರತಮ್ಯದ ಬಗ್ಗೆ ದೂರನ್ನು ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ-‘You Are Next’: ಸಲ್ಮಾನ್ ರಶ್ದಿ ಬಳಿಕ ಹ್ಯಾರಿ ಪಾಟರ್ ಲೇಖಕಿಗೆ ಬಂತು ಕೊಲೆ ಬೆದರಿಕೆ


ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್ ಅನೇಕ ಭೀಕರ ಅಗ್ನಿ ಅವಘಡಗಳನ್ನು ಎದುರಿಸಿದೆ. ಮಾರ್ಚ್ 2021 ರಲ್ಲಿ, ಕೈರೋದ ಪೂರ್ವ ಉಪನಗರದಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದರು. 2020 ರಲ್ಲಿ, ಎರಡು ಆಸ್ಪತ್ರೆಗಳಲ್ಲಿ ಕಾಣಿಸಿಕೊಂಡ ಬೆಂಕಿಯಲ್ಲಿ 14 ಕರೋನಾ ರೋಗಿಗಳು ಸಾವನ್ನಪ್ಪಿದರು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.