ಪುಣೆ: ಹೌದು, ಇನ್ನು ಮುಂದೆ ಐಎಎಸ್ ಪಾಸ್ ಮಾಡುವ ಅಧಿಕಾರಿಗಳು ತಮ್ಮ ತರಬೇತಿ ಅವಧಿಯಲ್ಲಿ  ಫಿಲಂಗೆ ಸಂಬಂಧಿಸಿದ ಕೋರ್ಸ್ ನ್ನು ಕಲಿಯಲಿದ್ದಾರೆ.


COMMERCIAL BREAK
SCROLL TO CONTINUE READING

ಈ ಕೋರ್ಸ್ ಪ್ರಮುಖವಾಗಿ ಸಮಗ್ರ ಅಭಿವೃದ್ದಿಯ ಮುನ್ನೋಟ ಹೊಂದಲು ಈ ಕೋರ್ಸ್ ನ್ನು ಪರಿಚಯಿಸಲಾಗುತ್ತದೆ ಎಂದು ತಿಳಿದುಬಂದಿದೆ. ಸುಮಾರು 175 ಐಎಎಸ್ ಅಧಿಕಾರಿಗಳು ಹಾಗೂ ರಾಯಲ್ ಭೂತಾನ್ ಸಿವಿಲ್ ಸರ್ವಿಸ್ ನ ಅಧಿಕಾರಿಗಳು ಪುಣೆಯಲ್ಲಿರುವ FTIIನಲ್ಲಿ  ಇದೇ ಜೂನ್ 21 ರಿಂದ ಜೂನ್ 23 ರವರೆಗೆ ಈ ಎಲ್ಲ ಅಧಿಕಾರಿಗಳಿಗೆ ಭಾರತೀಯ ಸಿನಿಮಾ ಕುರಿತಾಗಿ ತರಬೇತಿ ನೀಡಲಾಯಿತು.


ಈ ಸಂದರ್ಭದಲ್ಲಿ ಪ್ರಮುಖವಾಗಿ ಬಾಲಿವುಡ್ ನ ಹಿರಿಯ ನಟ ನಾಸಿರುದ್ದೀನ್ ಶಾ ಮತ್ತು  ರತ್ನಾ ಪಾಠಕ್ ಶಾ ಅವರು ತಮ್ಮ ಅನುಭವಗಳನ್ನು ಭಾರತೀಯ ಚಲನಚಿತ್ರಗಳು ಮತ್ತು ಸರ್ಕಾರಿ ಯೋಜನೆಗಳ ಕುರಿತಾಗಿ ಹಂಚಿಕೊಂಡರು.


ಇದೆ ಸಂದರ್ಭದಲ್ಲಿ  ಕೋರ್ಸ್ ನ ನಿರ್ದೇಶಕ ಸಂದೀಪ್ ಮೆಶ್ರಾಂ ಮಾತನಾಡಿ" ಪ್ರಮುಖವಾಗಿ ಅಕಾಡೆಮಿಯ ಅಧಿಕಾರಿಗಳನ್ನು ಇಲ್ಲಿಗೆ ಆಹ್ವಾನಿಸಿರುವುದು ಕಲೆ ಸಂಸ್ಕೃತಿ ಮತ್ತು ಸಿನಿಮಾ ಕುರಿತಾದ ಜ್ಞಾನವನ್ನು ಈ ಎಲ್ಲ ಅಧಿಕಾರಿಗಳು ತಿಳಿದುಕೊಳ್ಳಲು" ಎಂದು ವಿವರಿಸಿದರು.