ಇಲ್ಲಿ ನೆಲೆಸಿದರೆ ಮನೆ, ಕಾರು ಸೇರಿ 15 ಲಕ್ಷ ರೂ. ಉಚಿತ..! ಆ ಗ್ರಾಮ ಯಾವುದು ಗೊತ್ತಾ..?
World Interesting Facts: ಜಗತ್ತಿನಲ್ಲಿ ನಮಗೆ ತಿಳಿಯದೇ ಅನೇಕ ಹಳ್ಳಿಗಳಿವೆ, ಜನರು ಅವುಗಳ ಬಗ್ಗೆ ಕೇಳಿದರೆ ಆಶ್ಚರ್ಯ ಪಡುತ್ತಾರೆ. ಆದರೆ ಇದೊಂದು ಗ್ರಾಮ ಇನ್ನೂ ವಿಶಿಷ್ಟವಾಗಿದೆ. ಈ ಗ್ರಾಮದಲ್ಲಿ ನೆಲೆಸಿದರೆ ಮನೆ, ಕಾರು ಸೇರಿ ಕೊತೆಗೆ 15 ಲಕ್ಷ ಉಚಿತವಾಗಿ ನೀಡುತ್ತಾರೆ. ಆಶ್ಚರ್ಯವೆಂದರು ಇದು ಸತ್ಯ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಗ್ರಾಮ ಯಾವುದು ಇದೆಲ್ಲಿದೆ ಎಲ್ಲವೂ ಇಲ್ಲಿ ತಿಳಿಯೋಣ..
World Interesting Facts: ಶ್ರೀಮಂತ ಹಳ್ಳಿಗಳ ಬಗ್ಗೆ ನಾವು ನೀವು ಸಾಕಷ್ಟು ಕೇಳಿರಬಹುದು. ಆದರೆ ಜಗತ್ತಿನಲ್ಲಿ ಪ್ರತಿಯೊಬ್ಬರ ಬಳಿಯೂ ಖಾಸಗಿ ವಿಲ್ಲಾ, ಕಾರು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಕನಿಷ್ಠ 15 ಲಕ್ಷ ರೂ. ಇದ್ದೆ ಇರುತ್ತದೆ. ಇಲ್ಲಿ ವಾಸಿಸುವ ಅವಕಾಶ ಸಿಕ್ಕರೆ ಯಾರು ಎರಡೆರಡು ಬಾರಿ ಯೋಚಿಸುತ್ತಾರೆ ಹೇಳಿ, ಹೌದು ಅಂತಹದೊಂದು ಗ್ರಾಮದ ಬಗ್ಗೆ ನಾವೀಂದು ಚರ್ಚಿಸಲಿದ್ದೇವೆ.
ಹೌದು ಈ ಗ್ರಾಮ ಇರುವುದು ಚೀನಾದ ಜಿಯಾಂಗ್ಸು ಪ್ರಾಂತ್ಯದ ಜಿಯಾಂಗ್ಯಿನ್ ಕೌಂಟಿಯಲ್ಲಿ. ಇದರ ಹೆಸರು ಹುವಾಕ್ಸಿ ಗ್ರಾಮ, ಇದನ್ನು ಚೀನಾದ ಅತ್ಯಂತ ಶ್ರೀಮಂತ ಗ್ರಾಮವೆಂದು ಪರಿಗಣಿಸಲಾಗಿದೆ. 2009 ರ ಹೊತ್ತಿಗೆ, ಈ ಗ್ರಾಮದ ಪ್ರತಿ ಕುಟುಂಬವು ಮನೆ ಮತ್ತು ಕನಿಷ್ಠ ಒಂದು ಕಾರನ್ನು ಹೊಂದಿದೆ. ಅಲ್ಲದೇ ಗ್ರಾಮ ಪಂಚಾಯಿತಿ ಎಲ್ಲರಿಗೂ 1.24 ಕೋಟಿ ರೂ. ಅಷ್ಟು ಹಣವನ್ನು ನೀಡುತ್ತದೆ.
ಇದನ್ನೂ ಓದಿ: Most Dangerous Dogs: ಜಗತ್ತಿನ ಅತ್ಯಂತ ಅಪಾಯಕಾರಿ ಸಾಕು ನಾಯಿಗಳ ಬಗ್ಗೆ ನಿಮಗೆ ತಿಳಿದಿದೆಯೇ..!
ಈ ಹಳ್ಳಿಯು ನೋಡಲು ಬಹಳ ಸುಂದರವಾಗಿರುವುದರ ಜೊತೆಗೆ ಬೆಲೆಬಾಳುವ ಹಣ್ಣುಗಳನ್ನು ನೀಡುವ ಸಸ್ಯಗಳಿಂದ ಆವೃತವಾಗಿದೆ. ಮಧ್ಯದಲ್ಲಿ ಆಕರ್ಷಕ ಲಾನ್ ಇದೆ. ಪ್ರತಿ ಮನೆಯಲ್ಲೂ 2 ಕಾರುಗಳಿಗೆ ಗ್ಯಾರೇಜ್ ಸಿಗುತ್ತದೆ. ಪ್ರತಿ ವಿಲ್ಲಾದ ಮೇಲ್ಛಾವಣಿಯು ಆಕರ್ಷಕವಾದ ಕೆಂಪು ಬಣ್ಣದಿಂದ ಮುಚ್ಚಲ್ಪಟ್ಟಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ಹುವಾಕ್ಸಿ ಒಂದು ಮಾದರಿ ಸಮಾಜವಾದಿ ಗ್ರಾಮವಾಗಿದೆ. ಇದನ್ನು 1961 ರಲ್ಲಿ ಸ್ಥಳೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ವೂ ರೆನ್ಬಾವೊ ಸ್ಥಾಪಿಸಿದರು. ರೈತರು ಸಮೃದ್ಧವಾಗಿ ಬದುಕುವ ಗ್ರಾಮವನ್ನು ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಹಲವು ವಿಧಾನಗಳನ್ನು ಅಳವಡಿಸಿ ರೈತರನ್ನು ನಿಜವಾಗಿಯೂ ಶ್ರೀಮಂತರನ್ನಾಗಿಸಿದರು.
ಇದನ್ನೂ ಓದಿ: Indian Driving License: ಈ ಆರು ದೇಶಗಳಲ್ಲಿ ಭಾರತೀಯ ಡ್ರೈವಿಂಗ್ ಲೈಸ್ಸನ್ಸ್‌ಗೆ ಅವಕಾಶವಿದೆ..!
ರೈನ್‌ಬಾವೊ ಇಲ್ಲಿ ಅನೇಕ ಕೃಷಿ ಆಧಾರಿತ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿದ್ದರು. ಈ ಗ್ರಾಮವು ಚೀನಾದ ಆರ್ಥಿಕತೆಗೆ ಸಾಕಷ್ಟು ಹಣವನ್ನು ನೀಡುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅಲ್ಲದೇ ಈ ಗ್ರಾಮವು ತನ್ನ ಐಷಾರಾಮಿಗೆ ಪ್ರಸಿದ್ಧವಾಗಿದೆ, ಆದರೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಲಿಸಿದರೆ ಇದು ಶ್ರೀಮಂತ ಗ್ರಾಮವಾಗಿದೆ. 400 ಕುಟುಂಬಗಳಿರುವ ಈ ಗ್ರಾಮದಲ್ಲಿ ಯಾರಾದರೂ ಬಂದು ನೆಲೆಸಲು ಬಯಸಿದರೆ, ಅವರು ಯುರೋಪಿಯನ್ ಶೈಲಿಯ ವಿಲ್ಲಾಗಳು, ಕಾರುಗಳು ಮತ್ತು ಉದ್ಯೋಗಗಳನ್ನು ಉಚಿತವಾಗಿ ಪಡೆಯುತ್ತಾರೆ. ಇದಲ್ಲದೇ ಅಭಿವೃದ್ಧಿ ಹೊಂದಿದ ದೇಶಗಳಂತೆ ಇಲ್ಲಿ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳು, ಆರೋಗ್ಯ ಸೌಲಭ್ಯಗಳು ಮತ್ತು ಸಾರಿಗೆಯೂ ಉಚಿತವಾಗಿದೆ.
ಇದರೊಂದಿಗೆ, ಥೀಮ್ ಪಾರ್ಕ್, ಸ್ಟಾರ್ ಹೋಟೆಲ್, ಹೆಲಿಕಾಪ್ಟರ್ ಟ್ಯಾಕ್ಸಿ ಮುಂತಾದ ಎಲ್ಲಾ ಸೌಕರ್ಯಗಳು ಗ್ರಾಮದಲ್ಲಿ ಲಭ್ಯವಿದೆ. ಇಷ್ಟೇ ಅಲ್ಲ, ಗೋಲ್ಡನ್ ಬಾಲ್ ರಚನೆಯೊಂದಿಗೆ 74 ಅಂತಸ್ತಿನ ಕಟ್ಟಡವು ಸಿಡ್ನಿ ಒಪೇರಾ ಹೌಸ್, ಗ್ರೇಟ್ ವಾಲ್ ಆಫ್ ನಾನ್ಚಾಂಗ್ ಮತ್ತು ಅಮೆರಿಕದ ಲಿಬರ್ಟಿ ಪ್ರತಿಮೆಗಳಂತಹ ವಿಶ್ವ ಪ್ರಸಿದ್ಧ ರಚನೆಗಳ ಪ್ರತಿಕೃತಿಗಳನ್ನು ಹೊಂದಿದೆ.
ಇದನ್ನೂ ಓದಿ: Border Bridges: ಎರಡು ದೇಶವನ್ನು ಸಂಪರ್ಕಿಸುವ ಇಂಟರ್‌ನ್ಯಾಶನಲ್ ಬ್ರಿಡ್ಜ್‌ಗಳ ಬಗ್ಗೆ ತಿಳಿದಿದೆಯೇ
ಆದರೆ, ಈ ಗ್ರಾಮದಲ್ಲಿ ನೆಲೆಸುವುದು ಅಷ್ಟು ಸುಲಭವಲ್ಲ. ಈ ಎಲ್ಲಾ ಸೌಲಭ್ಯಗಳನ್ನು ನೀವು ಗ್ರಾಮದಲ್ಲಿ ವಾಸಿಸುವವರೆಗೆ ಮಾತ್ರ ಇದನ್ನು ಆನಂದಿಸಬಹುದು. ಒಂದು ವೇಳೆ ಈ ಗ್ರಾಮವನ್ನು ಬಿಟ್ಟರೆ, ಅದನ್ನೆಲ್ಲ ಆ ಗ್ರಾಮದ ಆಡಳಿತ ಬಳಿ ಬಿಟ್ಟು ಹೋಗಬೇಕಾಗುತ್ತದೆ.
(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.