ನವದೆಹಲಿ: ಜಮ್ಮು ಮತ್ತು ಕಾಶ್ಮೀರದ LoC ನಲ್ಲಿ ಸೇನಾ ಕಾರ್ಯಾಚರಣೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದ ಪಾಕಿಸ್ತಾನಕ್ಕೆ ಭಾರತ ಕೂಡ ತಕ್ಕ ಪ್ರತಿಕ್ರಿಯೆ ನೀಡಿತ್ತು .ಇದಾದ ಬೆನ್ನಲ್ಲೇ ಈಗ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಭಯೋತ್ಪಾಧನೆ ಬಗ್ಗೆ ಪ್ರಸ್ತಾವಿಸದೆ ಮಾತುಕತೆಗೆ ಕರೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಭಾರತವು ಪಾಕ್ ಆಕ್ರಮಿತ ಪ್ರದೇಶಗಳಾದ ಮುಜಾಫರ್ ಬಾದ್  ಹಾಗೂ ಬಾಲಾಕೋಟ್ ನಲ್ಲಿರುವ  ಉಗ್ರರ ನೆಲೆಗಳ ಮೇಲೆ ವಾಯುಸೇನೆಯಿಂದ ದಾಳಿ ನಡೆಸಿತ್ತು.ಇದಾದ ಬೆನ್ನಲ್ಲೇ ಪಾಕ್ ಕೂಡ ಮರುದಾಳಿ ಮಾಡಿತ್ತು.ಇದಕ್ಕೆ ತಕ್ಕ ಉತ್ತರವನ್ನು ಭಾರತ ನೀಡಿತ್ತು.


ಈಗ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಇಮ್ರಾನ್ ಖಾನ್ ತಮ್ಮ ಮಾತುಕತೆಯಲ್ಲಿ ಭಯೋತ್ಪಾಧನೆಯನ್ನು ಅಥವಾ ಉಗ್ರರನ್ನು ಖಂಡಿಸುವ ಕೆಲಸವನ್ನು ಮಾಡದೆ ಭಾರತಕ್ಕೆ ಮಾತುಕತೆಯ ಆಹ್ವಾನವನ್ನು ಇಟ್ಟಿದ್ದಾರೆ.


" ನಮ್ಮ ಇಂದಿನ ಕಾರ್ಯಾಚರಣೆ ನೀವು ಗಡಿರೇಖೆಯನ್ನು ದಾಟಬಹುದಾದರೆ ನಮಗೂ ಕೂಡ ಸಾಧ್ಯ ಎನ್ನುವುದನ್ನು ಸ್ಪಷ್ಟಪಡಿಸುವುದಕ್ಕಾಗಿ.ಒಂದು ವೇಳೆ ಪರಿಸ್ಥಿತಿ ಹದಗೆಟ್ಟರೆ ಇದು ನನ್ನ ನಿಯಂತ್ರಣದಲ್ಲಿಯೂ ಇಲ್ಲ ಅಥವಾ ನರೇಂದ್ರ ಮೋದಿ ನಿಯಂತ್ರಣದಲ್ಲಿಯೂ ಕೂಡ ಇಲ್ಲ.ಆದ್ದರಿಂದ ಇದನ್ನು ಮಾತುಕತೆಯ ಮೂಲಕ ಬಗೆ ಹರಿಸಬೇಕು" ಎಂದು ತಿಳಿಸಿದರು.


ಇದೇ ವೇಳೆ ಇಮ್ರಾನ್ ಖಾನ್ ಮಂಗಳವಾರದಂದು ಎರಡು ಭಾರತದ ವಾಯುಸೇನೆಯ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದರು. ಇದಕ್ಕೂ ಮೊದಲು ಭಾರತದ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ ಮೂಲಕ ಮಿಗ್-21 ವಿಮಾನ ಪತನಗೊಂಡಿದೆ ಎಂದು ತಿಳಿಸಿತ್ತು.