ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರು ಕಾಶ್ಮೀರ ವಿಷಯದ ಕುರಿತು ತಮ್ಮ ಅಳಲು ತೋಡಿಕೊಂಡಿದ್ದು, ಅಮೇರಿಕಾ ಕಾಶ್ಮೀರ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದರು. 


COMMERCIAL BREAK
SCROLL TO CONTINUE READING

ಡೊನಾಲ್ಡ್ ಟ್ರಂಪ್ ಜೊತೆಗೆ ಸುಮಾರು 12 ನಿಮಿಷಗಳ ಕಾಲ ಫೋನ್‌ನಲ್ಲಿ ಸಂವಹನ ನಡೆಸಿರುವ ಇಮ್ರಾನ್ ಖಾನ್, ಕಾಶ್ಮೀರ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
 
ಮೋದಿಯವರಿಗೆ 'ಟ್ರಂಪ್ ಕರೆ', ಪಾಕಿಸ್ತಾನದಲ್ಲಿ ಕೋಲಾಹಲ!
ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿ ಬದಲಾವಣೆಯ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಉಭಯ ನಾಯಕರ ನಡುವೆ ಸಂಭಾಷಣೆ ನಡೆದಿದೆ ಎಂದು ಹೇಳಲಾಗುತ್ತಿದೆ. ಭಯೋತ್ಪಾದನೆ ಮತ್ತು ಗಡಿ ಭದ್ರತೆ ಕುರಿತು ಪಿಎಂ ಮೋದಿ ಅವರು ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಯೋತ್ಪಾದನೆಯನ್ನು ಗಡಿಯುದ್ದಕ್ಕೂ ತಡೆಯುವುದು ಅವಶ್ಯಕ. ಮಾತುಕತೆ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಆಧರಿಸಿದೆ. ಕೆಲವು ನಾಯಕರ ಹೇಳಿಕೆಗಳು ಶಾಂತಿಗೆ ಧಕ್ಕೆ ತರುತ್ತದೆ ಎಂದು ಪಿಎಂ ಮೋದಿ ಅವರು ಹೆಸರು ಹೇಳದೆಯೇ ಇಮ್ರಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಭಾರತದ ನಿಲುವಿನಿಂದ ಪಾಕಿಸ್ತಾನ ಭಯಭೀತ:
ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರದ ಕಠಿಣ ನಿಲುವು ಮತ್ತು 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಪಾಕಿಸ್ತಾನವು ಆಕ್ರೋಶದಿಂದ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಮ್ರಾನ್ ಖಾನ್ ಅವರ ಸರ್ಕಾರವು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರ ಅಧಿಕಾರಾವಧಿಯನ್ನು ಮುಂದಿನ 3 ವರ್ಷಗಳವರೆಗೆ ವಿಸ್ತರಿಸಿದೆ. ಜಾವೇದ್ ಬಜ್ವಾ ನಿವೃತ್ತಿಯಾಗಲು ಕೇವಲ ಮೂರು ತಿಂಗಳ ಮೊದಲು ಸೇವಾ ವಿಸ್ತರಣೆ ಆದೇಶ ನೀಡಲಾಗಿದೆ. ದೇಶದಲ್ಲಿ ಶಾಂತಿಗಾಗಿ ಇಮ್ರಾನ್ ಖಾನ್ ಬಜ್ವಾ ಅವರ ಅವಧಿಯನ್ನು ವಿಸ್ತರಿಸಿದ್ದಾರೆ ಎಂದು ಪಾಕ್ ಪ್ರಧಾನಿ ಕಚೇರಿ ತಿಳಿಸಿದೆ. ಈ ಮಾಹಿತಿಯನ್ನು ಪಾಕ್ ಮಾಧ್ಯಮಗಳು ನೀಡಿದೆ.