ನವದೆಹಲಿ: ಪುಲ್ವಾಮಾ ಉಗ್ರರ ದಾಳಿಯ ವಿಚಾರವಾಗಿ ಕೊನೆಗೂ ಮೌನ ಮುರಿದಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಘಟನೆಯ ಹಿಂದೆ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇದೇ ವೇಳೆ ಭಾರತವು ಒಂದು ವೇಳೆ ದಾಳಿ ಮಾಡುವ ಕುರಿತು ಚಿಂತನೆ ನಡೆಸಿದ್ದೆ ಆದಲ್ಲಿ ನಾವು ಆ ಕುರಿತು ಯೋಚಿಸುವುದಿಲ್ಲ, ಬದಲಾಗಿ ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಇಮ್ರಾನ್ ಖಾನ್ ತಿಳಿಸಿದರು.


COMMERCIAL BREAK
SCROLL TO CONTINUE READING

"ನಾನು ಪುಲ್ವಾಮಾ ದಾಳಿಯ ಕುರಿತಾಗಿ ಮಾತನಾಡಿರಲಿಲ್ಲ. ಏಕೆಂದರೆ ಇಲ್ಲಿ ಆಗ  ಸೌದಿ ಅರೇಬಿಯಾದ ದೊರೆಯಿದ್ದರು. ನಮಗೆ ಈ ಭೇಟಿ ಬಹಳ ಮಹತ್ವದ್ದಾಗಿದ್ದರಿಂದ ನಾವು ಅದರಲ್ಲಿ ಬ್ಯುಸಿ ಇದ್ದೆವು. ಆದ್ದರಿಂದ ಇಂತಹ ದಾಳಿಗೆ ಬೆಂಬಲ ನೀಡುವ ಮೂಲಕ ಈ ಭೇಟಿಯನ್ನು ಹಾಳು ಮಾಡುವ ಉದ್ದೇಶ ನಮಗಿರಲಿಲ್ಲ. ಒಂದು ವೇಳೆ ಈ ಭೇಟಿ ಸಂಭವಿಸದಿದ್ದರೂ ಕೂಡ ಅಂತಹ ದಾಳಿಯಿಂದ ನಾವು ಪಡೆಯಬೇಕಾಗಿರುವುದು ಏನೂ ಇಲ್ಲ ಎಂದು ಇಮ್ರಾನ್ ಖಾನ್ ತಿಳಿಸಿದರು.


ಇದೇ ಭಾರತ ಈ ದಾಳಿಯ ವಿಚಾರವಾಗಿ ಪಾಕಿಸ್ತಾನವನ್ನು ದೂರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್ "ಕಾಶ್ಮೀರದಲ್ಲಿ ಏನಾಗುತ್ತೋ ಅದಕ್ಕೆಲ್ಲ ಪಾಕಿಸ್ತಾನವನ್ನು ದೂರುವುದು ಒಂದು ರೀತಿಯಲ್ಲಿ ಗುಲಾಮ ಹುಡುಗನನ್ನಾಗಿ ಮಾಡುತ್ತಿದೆ. ಒಂದು ವೇಳೆ ಭಾರತ ಸರ್ಕಾರ ಪಾಕ್ ಮೇಲೆ ದಾಳಿ ಮಾಡುವ ಕುರಿತಾಗಿ ಯೋಚಿಸುತ್ತಿದ್ದಲ್ಲಿ ನಾವು ಯೋಚಿಸುತ್ತಾ ಕುಳಿತುಕೊಳ್ಳುವುದಿಲ್ಲ.ಬದಲಾಗಿ ಪ್ರತಿಕಾರ ತಿಳಿಸುತ್ತೇವೆ ಎಂದು ಇಮ್ರಾನ್ ಖಾನ್ ತಿಳಿಸಿದರು.