ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) 74 ನೇ ಅಧಿವೇಶನದಲ್ಲಿ ಭಾಗವಹಿಸಿದ ನಂತರ ಪ್ರಧಾನಮಂತ್ರಿ ಇಮ್ರಾನ್ ಖಾನ್ ಶುಕ್ರವಾರ ಪಾಕಿಸ್ತಾನಕ್ಕೆ ಹಿಂದಿರುಗುವಾಗ ಮಾರ್ಗ ಮಧ್ಯೆ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಬಳಿಕ ವಿಮಾನವು ತಕ್ಷಣವೇ ನ್ಯೂಯಾರ್ಕ್‌ಗೆ ಹಿಂದಿರುಗಿ ಅಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ. ಈ ವಿಮಾನದಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರೊಂದಿಗೆ ನಿಯೋಗವೂ ಇತ್ತು ಎಂದು ಸುದ್ದಿ ಸಂಸ್ಥೆ ಜಿಯೋ ಟಿವಿ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಜಿಯೋ ಟಿವಿಯ ವರದಿಯ ಪ್ರಕಾರ ಟೊರೊಂಟೊ ಬಳಿ ಇಮ್ರಾನ್ ಖಾನ್ ಅವರ ವಿಮಾನದಲ್ಲಿ ತಾಂತ್ರಿಕ ಕಂಡುಬಂದಿದೆ. ಸಣ್ಣ ಪ್ರಮಾಣದ ತಾಂತ್ರಿಕ ದೋಷವಾಗಿದ್ದರಿಂದ ಅದನ್ನು ಬೇಗ ಸರಿಪಡಿಸಲಾಗಿದೆ. ಸೌದಿ ಅರೇಬಿಯಾ ಪ್ರವಾಸದ ವೇಳೆ ಇಮ್ರಾನ್ ಖಾನ್ ಅವರಿಗೆ ಈ ವಿಮಾನವನ್ನು ಉಡುಗೊರೆಯಾಗಿ ನೀಡಲಾಯಿತು.


ತಾಂತ್ರಿಕ ದೋಷದಿಂದಾಗಿ, ಪಿಎಂ ಇಮ್ರಾನ್ ಖಾನ್ (ಸ್ಥಳೀಯ ಸಮಯ) ಇಡೀ ರಾತ್ರಿ ನ್ಯೂಯಾರ್ಕ್‌ನಲ್ಲಿ ಕಳೆಯಬೇಕಾಯಿತು.


ಪಾಕ್ ಪ್ರಧಾನಿ ನ್ಯೂಯಾರ್ಕ್‌ನ ವಿಮಾನ ನಿಲ್ದಾಣದಿಂದ ಹೋಟೆಲ್ಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ ಎಂದು ಮೂಲಗಳು ದೃಢಪಡಿಸಿದವು. ಆದಾಗ್ಯೂ ಇಮ್ರಾನ್ ಖಾನ್ ವಿಮಾನದಲ್ಲಿ ಕಂಡುಬಂದಿದ್ದ ತಾಂತ್ರಿಕ ದೋಷವನ್ನು ಶೀಘ್ರದಲ್ಲೇ ಸರಿಪಡಿಸಲಾಯಿತು ಎನ್ನಲಾಗಿದೆ.