ಕಾಶ್ಮೀರದ ಬಗ್ಗೆ ತೀರ್ಮಾನ ಕೈಗೊಳ್ಳುವ ಸಮಯ ಬಂದಿದೆ, ನಾವು ಯಾವುದೇ ಹಂತಕ್ಕೆ ಹೋಗಲು ಸಿದ್ದ: ಇಮ್ರಾನ್ ಖಾನ್
ಜಿ -7 ಶೃಂಗಸಭೆಯ ಹೊರತಾಗಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜಮ್ಮು ಕಾಶ್ಮೀರ ವಿಷಯದ ಬಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಇಸ್ಲಾಮಾಬಾದ್: ಜಿ -7 ಶೃಂಗಸಭೆಯ ಹೊರತಾಗಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ, ಭಾರತ ನಮ್ಮನ್ನು ದಿವಾಳಿಯಾಗಿಸಲು ಪ್ರಯತ್ನಿಸಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆರೋಪ ಮಾಡಿದ್ದರೆ. ಇದಲ್ಲದೆ ಮತ್ತೊಮ್ಮೆ ಕಾಶ್ಮೀರದ ಬಗ್ಗೆ ರಾಗ ಎಳೆದಿರುವ ಇಮ್ರಾನ್ ಖಾನ್, ಕಾಶ್ಮೀರ ವಿಚಾರವಾಗಿ ನಿರ್ಧರಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಕಾಶ್ಮೀರ ವಿಚಾರವಾಗಿ ಭಾರತದೊಂದಿಗೆ ಮಾತುಕತೆ ನಡೆಸಿದಾಗ ಭಯೋತ್ಪಾದನೆ ಬಗ್ಗೆ ಆರೋಪ ಮಾಡಿತು. ಭಯೋತ್ಪಾದನೆ ಹರಡಿದೆ ಎಂದು ನಮ್ಮ ಮೇಲೆ ಆರೋಪ ಹೊರಿಸಲು ಭಾರತವು ಅವಕಾಶವನ್ನು ಹುಡುಕುತ್ತಲೇ ಇದೆ. ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಭಾರತ ದೊಡ್ಡ ತಪ್ಪು ಮಾಡಿದೆ ಎಂದು ಇಮ್ರಾನ್ ಕಿಡಿಕಾರಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರದಿಂದ ವಿಚಲಿತವಾಗಿರುವ ಪಾಕಿಸ್ತಾನವು ವಿಶ್ವದಾದ್ಯಂತ ಕೋಲಾಹಲ ಮೂಡಿಸಲು ಪ್ರಯತ್ನಿಸುತ್ತಿದೆ. ಆದರೆ, ಕಾಶ್ಮೀರ ವಿಚಾರವಾಗಿ ವಿಶ್ವದ ಹಲವು ರಾಷ್ಟ್ರಗಳು ಪಾಕಿಸ್ತಾನಕ್ಕೆ ತಮ್ಮ ಬೆಂಬಲ ನೀಡಿಲ್ಲ. ಇತ್ತೀಚೆಗೆ ವಿಶ್ವಸಂಸ್ಥೆಯಲ್ಲೂ ಪಾಕಿಸ್ತಾನವು ಕಾಶ್ಮೀರದ ವಿಚಾರವಾಗಿ ದೊಡ್ಡ ಹಿನ್ನಡೆ ಅನುಭವಿಸಿತು. ಅದೇ ಸಮಯದಲ್ಲಿ, ಸೋಮವಾರ ನಡೆದ ಜಿ -7 ಶೃಂಗಸಭೆಯ ಹೊರತಾಗಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಕಾಶ್ಮೀರ ವಿಚಾರವಾಗಿ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. 'ನಾವು ಯಾವುದೇ ದೇಶದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಆದ್ದರಿಂದ ನಮ್ಮ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಮೂರನೇ ದೇಶಕ್ಕೆ ಅವಕಾಶ ನೀಡುವುದಿಲ್ಲ' ಎಂದು ಪಿಎಂ ಮೋದಿ ಹೇಳಿದರು.
ಕಾಶ್ಮೀರ ಸಮಸ್ಯೆಯನ್ನು ಚರ್ಚೆಗೆ ತರಲು ಪಾಕಿಸ್ತಾನ ಎಲ್ಲಾ ರೀತಿಯ ತಂತ್ರಗಳನ್ನು ಬಳಸುತ್ತಿದೆ. ಅದೇ ಸಮಯದಲ್ಲಿ, 'ರೋಜ್ನಾಮಾ ಪಾಕಿಸ್ತಾನ'ದ ವರದಿಯ ಪ್ರಕಾರ, ಇಮ್ರಾನ್ ಖಾನ್ ಆಗಸ್ಟ್ 31 ರಂದು ಸಿಂಧ್‌ನ ಹಿಂದೂಗಳ ಉತ್ತಮ ಜನಸಂಖ್ಯೆಯ ಪ್ರದೇಶವಾದ ಉಮರ್ಕೋಟ್‌ಗೆ ಭೇಟಿ ನೀಡಿ ಅಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇಮ್ರಾನ್ ಖಾನ್ ಪಾಕಿಸ್ತಾನದ ಹಿಂದೂ ಸಮುದಾಯ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಕಾಶ್ಮೀರದ ಬಗ್ಗೆ ತಮ್ಮ ನಿಲುವಿನ ಬಗ್ಗೆ ತಿಳಿಸಲಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳೊಂದಿಗೆ ಒಗ್ಗಟ್ಟಿನ್ನು ಪ್ರದರ್ಶಿಸಲಾಗುತ್ತಿದೆ.
ಅಮೆರಿಕ, ರಷ್ಯಾ, ಚೀನಾದಂತಹ ದೇಶಗಳು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಯಾವುದೇ ಹೇಳಿಕೆಯನ್ನು ಕೇಳಲು ನಿರಾಕರಿಸಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ಸಮಸ್ಯೆಯಾಗಿದೆ ಎಂಬ ಸಂದೇಶವನ್ನು ಎಲ್ಲಾ ದೇಶಗಳು ನೀಡಿವೆ.