ವ್ಯಾಟಿಕನ್ ಸಿಟಿ:  ಈ ಪವಿತ್ರ ಭೂಮಿಯಲ್ಲಿ ಎಲ್ಲ ಜನರ ಹಕ್ಕುಗಳನ್ನು ಗುರುತಿಸುವುದು ಅತ್ಯಂತ ಮಹತ್ವವಾದದ್ದು ಎಂದು ಇಲ್ಲಿ ಪ್ಯಾಲೆಸ್ತೀನ್ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಅಭಿಪ್ರಾಯಪಟ್ಟರು. 


COMMERCIAL BREAK
SCROLL TO CONTINUE READING

ಜೆರುಸೇಲಂನ ವಿಚಾರವಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರದಂದು ಅಂತಿಮ ತೀರ್ಮಾನಗೊಳ್ಳುವ ಮೊದಲು ಮಾತನಾಡಿದ ಪೋಪ್ ಈ ಪವಿತ್ರ ಭೂಮಿಯಲ್ಲಿ ಎಲ್ಲ ಜನರ ಹಕ್ಕುಗಳನ್ನು ಗುರುತಿಸುವುದು ಪ್ರಮುಖ ಸಂಗತಿ ಎಂದರು. ಅದನ್ನು  ನಾವು ಪರಸ್ಪರ ಸಂವಾದ ಮೂಲಕ ಅದನ್ನು ಕಂಡುಕೊಳ್ಳಬಹುದು ಎಂದು ಪೋಪ್ ಫ್ರಾನ್ಸಿಸ್ ತಿಳಿಸಿದರು.


ಮಂಗಳವಾರ ಪ್ಯಾಲೆಸ್ಟಿನ್ ಅಧ್ಯಕ್ಷ  ಮೊಹಮ್ಮದ್ ಅಬ್ಬಾಸ್ ರವರ ಜೊತೆಯಾಗಿ ಬಂದಿದ್ದ ಅಂತರಧರ್ಮೀಯ ಸದಸ್ಯರ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಪೋಪ್, ಪ್ರತಿಯೊಬ್ಬರ ಹಕ್ಕುಗಳ ಮಹತ್ವದ ಕುರಿತಾಗಿ ಪ್ರಸ್ತಾಪಿಸಿದರು. ಎಲ್ಲರ ಹಕ್ಕುಗಳನ್ನು ಗೌರವಿಸುವ  ಪೋಪ್ ರ ಹೇಳಿಕೆಯನ್ನು ಪ್ಯಾಲೆಸ್ತೀನ್ ಜನರು ಸ್ವಾಗತಿಸಿದ್ದಾರೆ.