ನವದೆಹಲಿ: ಶ್ರೀಲಂಕಾದ ಕೊಲೊಂಬೋದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಿಂದಾಗಿ ಸಾವಿನ ಹಾಗೂ ಗಾಯಗೊಂಡಿರುವ ಸಂಖ್ಯೆ ಅಧಿಕಗೊಂಡಿದೆ.ಈಗ ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಕನಿಷ್ಠ 207 ಜನರು ಮೃತಪಟ್ಟು 400ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈಗ ಬಾಂಬ್ ದಾಳಿಯನ್ನು ಇತ್ತೀಚಿಗಿನ ವರ್ಷಗಳಲ್ಲಿ ಕಂಡಂತಹ ಭೀಕರ ದಾಳಿ ಎಂದು ಹೇಳಲಾಗುತ್ತದೆ. ಒಟ್ಟು ಎಂಟು ಕಡೆ ಆತ್ಮಹತ್ಯೆ ದಾಳಿ ಮೂಲಕ ಈ ಸರಣಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.ಈಗ ಈ ಘಟನೆ ಕುರಿತಾಗಿ ಪ್ರತಿಕ್ರಿಯಿಸಿರುವ ಶ್ರೀಲಂಕಾದ ರಕ್ಷಣಾ ಸಚಿವ ರುವಾನ್ ವಿಜಯವರ್ಧನೆ "ಈಗ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದ ಏಳು ಜನರನ್ನು ಬಂಧಿಸಲಾಗಿದೆ.ಇವರಲ್ಲಿ ಬಹುತೇಕರು ಆತ್ಮಹತ್ಯಾ ದಾಳಿಕೋರರು "ಎಂದು ತಿಳಿಸಿದ್ದಾರೆ.


ಮೊದಲ ಸ್ಫೋಟವು ಕೊಲೊಂಬೋದ ಹೋಟೆಲ್ ಹಾಗೂ ಚರ್ಚ್ ನಲ್ಲಿ ಸಂಭವಿಸಿದೆ.ನಗರದ ಹೊರಗಡೆ ಇರುವ ಎರಡು ಚರ್ಚ್ ಗಳ ಮೇಲೆಯೂ ಕೂಡ ದಾಳಿಯನ್ನು ಮಾಡಲಾಗಿತ್ತು. ಸ್ಥಳೀಯ ಸಮಯ 8.45 ಗೆ ಸಂಭವಿಸಿದ ಬಾಂಬ್ ಸ್ಫೋಟದ ಸ್ವರೂಪ ತಕ್ಷಣ ತಿಳಿದುಬಂದಿರಲಿಲ್ಲ.


ಈ ದಾಳಿಯನ್ನು ಖಂಡಿಸಿರುವ ಶ್ರೀಲಂಕಾದ ಪ್ರಧಾನಿ " ನಮ್ಮ ಜನರ ಮೇಲೆ ಮಾಡಿರುವ ಈ ದಾಳಿಯನ್ನು ನಾನು ಖಂಡಿಸುತ್ತೇನೆ.ಇಂತಹ ಕಠಿಣ ಸಂದರ್ಭದಲ್ಲಿ ಎಲ್ಲ ಶ್ರೀಲಂಕಾದ ಜನರು ಒಗ್ಗಟ್ಟಿನಿಂದಿರಲು ಬಯಸುತ್ತೇನೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೋಡಬೇಡಿ. ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಎಲ್ಲ ರೀತಿಯ ಕ್ರಮವನ್ನು ತೆಗೆದುಕೊಳ್ಳುತ್ತದೆ" ಎಂದು ಹೇಳಿದರು.