Netherland: ಬರ್ಗರ್ ಎಂದರೆ ಎಲ್ಲರ ಬಾಯಲ್ಲಿ ನಿರೂರಿಸುತ್ತದೆ. ಸಾಮಾನ್ಯವಾಗಿ ಒಂದು ಬರ್ಗರ್(Burger) ಬೆಲೆ ಎಷ್ಟಿರಬೇಡ ಹೇಳಿ. 100 ರೂ., 200 ರೂ., ಅಬ್ಬಬ್ಬಾ ಅಂದರೆ 500 ರೂ. ಇರುತ್ತದೆ. ಆದರೆ ಇಲ್ಲೊಂದು ಬರ್ಗರ್ ಬರೋಬ್ಬರಿ 4.42 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ಎಲ್ಲರ ಹುಬ್ಬೇರಿಸಿದೆ. 


COMMERCIAL BREAK
SCROLL TO CONTINUE READING

ಹೌದು, ಇಷ್ಟು ದೊಡ್ಡ ಮೊತ್ತದ ಬರ್ಗರ್ ಬೆಲೆ ಕೇಳಿದರೆ ಗಾಬರಿ ಜೊತೆಗೆ ಆಶ್ಚರ್ಯವಾಗುತ್ತದೆ ಅಲ್ಲವೆ. ನೆದರ್ಲೆಂಡ್ಸ್‌ ನ ವೂರ್ತುಯಿಜೆನ್‌ನಲ್ಲಿರುವ ಡಿ ಡಾಲ್ಟನ್ ರೆಸ್ಟೋರೆಂಟ್‌ನ ಚೆಫ್ ರಾಬರ್ಟ್ ಜಾನ್ ಡಿ ವೀನ್ ವಿಶ್ವದ ಅತ್ಯಂತ ದುಬಾರಿ ಬರ್ಗರ್ ಅನ್ನು ತಯಾರಿಸಿದ್ದರು. ‘ದಿ ಗೋಲ್ಡನ್ ಬಾಯ್’(The Golden Boy) ಹೆಸರಿನ ಈ ಹ್ಯಾಮ್ ಬರ್ಗರ್ ಬರೋಬ್ಬರಿ 4,42,125(5 ಸಾವಿರ ಯುರೋ) ರೂ.ಗೆ ಮಾರಾಟವಾಗಿದೆ. ದೊಡ್ಡ ಮೊತ್ತಕ್ಕೆ ಮಾರಾಟವಾದ ಈ ಬರ್ಗರ್ ನ ಫೋಟೋವನ್ನು ಚೆಫ್ ಡಿ ವೀನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Iraq: ಇರಾಕ್‌ನ ನಾಸಿರಿಯಾದಲ್ಲಿ COVID-19 ಆಸ್ಪತ್ರೆಯಲ್ಲಿ ಅಗ್ನಿ ಅವಘಡ, 44 ಮೃತ, ಹಲವರಿಗೆ ಗಾಯ


ಈ ಡಿನ್ನರ್ ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಬೆಲುಗಾ ಕ್ಯಾವಿಯರ್, ಕಿಂಗ್ ಕ್ರಾಬ್, ವಾಗ್ಯು ಬೀಫ್(ದನದ ಮಾಂಸ), ಸ್ಪ್ಯಾನಿಷ್ ಪ್ಯಾಲೆಟಾ ಐಬೆರಿಕೊ, ವೈಟ್ ಟ್ರಫಲ್ ಮತ್ತು ಇಂಗ್ಲಿಷ್ ಚೆಡ್ಡಾರ್ ಚೀಸ್ ಬಳಸಿ ಈ ದೊಡ್ಡ ಬರ್ಗರ್(Burger)ಅನ್ನು ತಯಾರಿಸಲಾಗಿದೆ. ಇದಲ್ಲದೆ ವಿಶ್ವದ ಅತ್ಯಂತ ದುಬಾರಿ ಕಾಫಿ ಬೀಜಗಳಲ್ಲಿ ಒಂದಾಗಿರುವ ಕೋಪಿ ಲುವಾಕ್ ನಿಂದ ಮಾಡಲ್ಪಟ್ಟ ಬಾರ್ಬೆಕ್ಯೂ ಸಾಸ್ ಅನ್ನೂ ಕೂಡ ಬಳಸಲಾಗಿದೆ. ಮೂಲಗಳ ಪ್ರಕಾರ ಈ ಬೃಹತ್ ಬರ್ಗರ್ ತಯಾರಿಕೆಯಲ್ಲಿ ಚಿನ್ನದ ಲೇಪನ ಸಿಂಪಡಿಸಲಾಗಿದೆ ಎಂದು ತಿಳಿದುಬಂದಿದೆ.


ಚಿಕ್ಕವಯಸ್ಸಿನಿಂದಲೂ ಅತ್ಯಂತ ದುಬಾರಿ ಬೆಲೆಯ ಬರ್ಗರ್ ತಯಾರಿಸಿ ವಿಶ್ವ ದಾಖಲೆ ಮುರಿಯಬೇಕೆಂಬುದು ನನ್ನ ಕನಸಾಗಿತ್ತು. ವಿಶ್ವದ ಅತ್ಯಂತ ದುಬಾರಿ ಬೆಲೆಯ ಬರ್ಗರ್ ತಯಾರಿಸಿರುವುದು ನನಗೆ ಅತ್ಯಂತ ಖುಷಿ ನೀಡಿದೆ ಎಂದು ಡಿ ವೀನ್ ಹೇಳಿದ್ದಾರೆ.  2011ರಲ್ಲಿ ಅಮೆರಿಕದ ಒರೆಗಾನ್ ನಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ವಿಶ್ವದ ಅತ್ಯಂತ ದುಬಾರಿ ಬೆಲೆಯ ಬರ್ಗರ್(Expensive Burger) ತಯಾರಿಸಲಾಗಿತ್ತು. ಬರೋಬ್ಬರಿ 352.44 ಕೆಜಿ ತೂಕವಿದ್ದ ಆ ಬರ್ಗರ್ 5 ಸಾವಿರ ಅಮೆರಿನ್ ಡಾಲರ್ ಗೆ ಮಾರಾಟವಾಗಿತ್ತು.


ಇದನ್ನೂ ಓದಿ: "ಹಲವಾರು ದೇಶಗಳಲ್ಲಿ ಉಚಿತ ಮತ್ತು ಮುಕ್ತ ಇಂಟರ್ನೆಟ್ ಮೇಲೆ ದಾಳಿ ನಡೆಯುತ್ತಿದೆ"


ಡಿ ವೀನ್ ತಯಾರಿಸಿದ್ದ ಬರ್ಗರ್ ಅನ್ನು ನೆದರ್ಲ್ಯಾಂಡ್(Netherland) ಮೂಲದ ವ್ಯಾಪಾರಿ   ಸಂಘಟನೆಯಾದ ರೆಮಿಯಾ ಇಂಟರ್‌ನ್ಯಾಷನಲ್‌ಗೆ ಮಾರಾಟ ಮಾಡಲಾಗಿದೆ. ನಂತರ ಇದನ್ನು ರಾಯಲ್ ಡಚ್ ಫುಡ್ ಮತ್ತು ಬೆವರೇಜಸ್ ಸಂಘದ ಅಧ್ಯಕ್ಷ ರಾಬರ್ ವಿಲ್ಲೆಮ್ಸೆ ಸೇವಿಸಿದ್ದಾರೆ. ಇದರ ಮಾರಾಟದಿಂದ ಸಂಗ್ರಹಿಸಿದ ಹಣವನ್ನು ಡಿ ವೀನ್ ಎಂಬ ಎನ್‌ಜಿಒಗೆ ದಾನ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.