ಜೋಹಾನ್ಸ್ ಬರ್ಗ್:  ಭಯೋತ್ಪಾಧನೆಯ ನಿಯಂತ್ರಣಕ್ಕೆ ಬ್ರಿಕ್ಸ್ ರಾಷ್ಟ್ರಗಳು ಒತ್ತು ನೀಡಬೇಕೆಂದು ಭಾರತ ಕರೆ ನೀಡಿದೆ.


COMMERCIAL BREAK
SCROLL TO CONTINUE READING

ಇಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಯಂತ್ರಣ ವೇದಿಕೆ ಅಡಿ ಬ್ರಿಕ್ಸ್ ನ ರಾಷ್ಟ್ರಗಳು ಭಯೋತ್ಪಾದನೆಯನ್ನು ಮಟ್ಟ ಹಾಕಲು ಯೋಜನೆ ರೂಪಿಸಬೇಕು ಎಂದು ತಿಳಿಸಿದರು.ಇದೇ ವೇಳೆ ಈ ಹಿಂದಿನ ಸಮ್ಮೇಳನದಲ್ಲಿ  ಪ್ರಧಾನಿ ಮೋದಿಯವರು ಪ್ರಸ್ತಾಪಿಸಿದ ಸೈಬರ್ ವಲಯ, ಭಯೋತ್ಪಾದನೆಗೆ ಮಾಡುತ್ತಿರುವ ಧನಸಹಾಯಗಳ ವಿಷಯವನ್ನು ಅವರು ಮತ್ತೆ ಪ್ರಸ್ತಾಪಿಸಿದರು. 


ಸಧ್ಯ ನಡೆಯುತ್ತಿರುವ ಈ ಬ್ರಿಕ್ಸ್ ಸಮ್ಮೇಳನವು ವರ್ಣಬೇದ ನೀತಿ ವಿರುದ್ದದ ಹೋರಾಟಗಾರ ನೆಲ್ಸನ್ ಮಂಡೇಲಾ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರನ್ನು ಸ್ಮರಿಸಿದ ಸುಷ್ಮಾ ಸ್ವರಾಜ್ "ಮಹಾತ್ಮಾ ಗಾಂಧಿ, ನೆಲ್ಸನ್ ಮಂಡೇಲಾ,ಮಾರ್ಟಿನ್ ಲೂಥರ್ ಕಿಂಗ್ ಅವರ ದೃಷ್ಟಿಕೋನವು ನಮ್ಮ ಸಾಮಾನ್ಯ ಗುರಿ ಹಿತಾಸಕ್ತಿಗಳನ್ನು ತಲುಪುವಲ್ಲಿ ಮಾರ್ಗದರ್ಶನ ನೀಡುತ್ತವೆ" ಎಂದು ತಿಳಿಸಿದರು.