ಭಾರತವು ಹಿಂದೆಂದಿಗಿಂತಲೂ ವೇಗವಾಗಿ ಬಡತನ ನಿರ್ಮೂಲನೆ ಮಾಡುತ್ತಿದೆ- ಪ್ರಧಾನಿ ಮೋದಿ
ಎರಡು ದಿನಗಳ ಭೂತಾನ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು ಹಿಂದೆಂದಿಗಿಂತಲೂ ವೇಗವಾಗಿ ಬಡತನ ನಿರ್ಮೂಲನೆ ಮಾಡುತ್ತಿದೆ. ಇದುವರೆಗೆ ದೇಶವು ಹಲವು ಶ್ರೇಣಿಯ ಕ್ಷೇತ್ರಗಳಲ್ಲಿ ಐತಿಹಾಸಿಕ ಪರಿವರ್ತನೆಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ನವದೆಹಲಿ: ಎರಡು ದಿನಗಳ ಭೂತಾನ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು ಹಿಂದೆಂದಿಗಿಂತಲೂ ವೇಗವಾಗಿ ಬಡತನ ನಿರ್ಮೂಲನೆ ಮಾಡುತ್ತಿದೆ. ಇದುವರೆಗೆ ದೇಶವು ಹಲವು ಶ್ರೇಣಿಯ ಕ್ಷೇತ್ರಗಳಲ್ಲಿ ಐತಿಹಾಸಿಕ ಪರಿವರ್ತನೆಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಭೂತಾನ್‌ನ ರಾಯಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಭಾರತದ ಯುವಕರ ಕನಸುಗಳು ಮತ್ತು ಆಕಾಂಕ್ಷೆಗಳು ತಮ್ಮ ಸರ್ಕಾರವು ಪ್ರಾರಂಭಿಸಿರುವ ವಿವಿಧ ಪರಿವರ್ತನೆಗಳು ಮತ್ತು ಸುಧಾರಣೆಗಳ ಹೃದಯಭಾಗವಾಗಿದೆ ಎಂದು ಹೇಳಿದರು.
"ಭಾರತವು ಹಿಂದೆಂದಿಗಿಂತಲೂ ವೇಗವಾಗಿ ಬಡತನವನ್ನು ನಿರ್ಮೂಲನೆ ಮಾಡುತ್ತಿದೆ...ಕಳೆದ ಐದು ವರ್ಷಗಳಲ್ಲಿ ಮೂಲಸೌಕರ್ಯ ನಿರ್ಮಾಣದ ವೇಗವು ದ್ವಿಗುಣಗೊಂಡಿದೆ ಎಂದು ಪ್ರಧಾನಿ ಹೇಳಿದರು, ಯುವ ಮನಸ್ಸುಗಳು ಎಲ್ಲ ಸವಾಲುಗಳನ್ನು ನವೀನ ಪರಿಹಾರಗಳೊಂದಿಗೆ ಜಯಿಸಬಲ್ಲವು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವದ ಅತಿದೊಡ್ಡ ಆರೋಗ್ಯ ಕಾರ್ಯಕ್ರಮವಾದ ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ ಭಾರತವು 500 ಮಿಲಿಯನ್ ಭಾರತೀಯರಿಗೆ ಆರೋಗ್ಯ ಭರವಸೆ ನೀಡುತ್ತದೆ ... ಭಾರತವು ವಿಶ್ವದ ಅಗ್ಗದ ಡೇಟಾ ಸಂಪರ್ಕವನ್ನು ಹೊಂದಿದೆ, ಇದು ಲಕ್ಷಾಂತರ ಜನರನ್ನು ನೇರವಾಗಿ ಮತ್ತು ಪರೋಕ್ಷವಾಗಿ ಸಬಲೀಕರಣಗೊಳಿಸುತ್ತಿದೆ. ಇನ್ನು ವಿಶ್ವದ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗಳಲ್ಲಿ ಭಾರತವೂ ನೆಲೆಯಾಗಿದೆ. ಭಾರತದಲ್ಲಿ ಹೊಸತನವನ್ನು ಕಂಡುಕೊಳ್ಳಲು ಇದು ನಿಜಕ್ಕೂ ಉತ್ತಮ ಸಮಯ!' ಎಂದು ಪ್ರಧಾನಿ ಮೋದಿ ಹೇಳಿದರು.
ಇದೆ ವೇಳೆ ಉಭಯ ದೇಶಗಳ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ ಪ್ರಧಾನಿ, “ಭೂತಾನ್ ಮತ್ತು ಭಾರತದ ಜನರು ಪರಸ್ಪರ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ನಾವು ನಮ್ಮ ಭೌಗೋಳಿಕತೆಯಿಂದಾಗಿ ಮಾತ್ರವಲ್ಲ. ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳು ನಮ್ಮ ಜನರು ಮತ್ತು ರಾಷ್ಟ್ರಗಳ ನಡುವೆ ವಿಶಿಷ್ಟ ಮತ್ತು ಆಳವಾದ ಬಂಧಗಳನ್ನು ಸೃಷ್ಟಿಸಿವೆ ಎಂದು ತಿಳಿಸಿದರು.