ಸಂಯುಕ್ತ ರಾಷ್ಟ್ರ: 2027 ರ ಹೊತ್ತಿಗೆ ಚೀನಾವನ್ನು ಹಿಂದಿಕ್ಕಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. ಭಾರತದ ಜನಸಂಖ್ಯೆಯು 2050 ರ ವೇಳೆಗೆ 27.3 ಕೋಟಿ ಹೆಚ್ಚಾಗುವ ಸಾಧ್ಯತೆ ಇದೇ ಎಂದು ಯುಎನ್ ವರದಿ ತಿಳಿಸಿದೆ. ಇದರೊಂದಿಗೆ, ಶತಮಾನದ ಅಂತ್ಯದ ವೇಳೆಗೆ ಭಾರತವು ವಿಶ್ವದಲ್ಲೇ ಅತ್ಯಂತ ದೊಡ್ಡ ಜನಸಂಖ್ಯಾ ದೇಶವಾಗಿ ಉಳಿಯಲಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ 'ಜನಸಂಖ್ಯಾ ವಿಭಾಗ' "ವಿಶ್ವ ಜನಸಂಖ್ಯಾ ಪ್ರಾಸ್ಪೆಕ್ಟ್ 2019 ಮುಖ್ಯಾಂಶಗಳು (ವಿಶ್ವ ಜನಸಂಖ್ಯಾ ಸಮಸ್ಯೆಗಳು)" ಅನ್ನು ಪ್ರಕಟಿಸಿದೆ. ಮುಂದಿನ 30 ವರ್ಷಗಳಲ್ಲಿ ವಿಶ್ವ ಜನಸಂಖ್ಯೆಯು ಎರಡು ಬಿಲಿಯನ್‌ಗೆ ಬೆಳೆಯುವ ನಿರೀಕ್ಷೆಯಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. 2050 ರ ವೇಳೆಗೆ ಜನಸಂಖ್ಯೆ 7.7 ಬಿಲಿಯನ್‌ನಿಂದ 9.7 ಬಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.


ಈ ಅಧ್ಯಯನದ ಪ್ರಕಾರ, ವಿಶ್ವದ ಜನಸಂಖ್ಯೆಯು ಈ ಶತಮಾನದ ಅಂತ್ಯದ ವೇಳೆಗೆ 11 ಶತಕೋಟಿ ತಲುಪಲಿದೆ. 2050 ರೊಳಗೆ ಜಾಗತಿಕ ಜನಸಂಖ್ಯೆಯ ಅರ್ಧದಷ್ಟು ಭಾಗ ಭಾರತ, ನೈಜೀರಿಯಾ, ಪಾಕಿಸ್ತಾನ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಇಥಿಯೋಪಿಯಾ, ತಾಂಜಾನಿಯ, ಇಂಡೋನೇಷ್ಯಾ, ಈಜಿಪ್ಟ್ ಮತ್ತು ಅಮೆರಿಕದಲ್ಲಿವೆ ಎಂದು ಇಲ್ಲಿ ಬಿಡುಗಡೆ ಮಾಡಲಾದ ಹೊಸ ವರದಿಯಲ್ಲಿ ತಿಳಿಸಲಾಗಿದೆ.