ಐಸಿಜೆಯಲ್ಲಿ ಆಕ್ಷೇಪಾರ್ಹ ಭಾಷೆ ಬಳಸಿದ ಪಾಕ್ ಗೆ ಛೀಮಾರಿ ಹಾಕಿದ ಭಾರತ
ಕುಲಭೂಷಣ ಜಾಧವ್ ಪ್ರಕರಣದ ವಿಚಾರದಲ್ಲಿ ಹೇಗ್ ನಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಪಾಕ್ ಬಳಸಿದ ಭಾಷೆಗೆ ಭಾರತ ಛೀಮಾರಿ ಹಾಕಿದೆ.
ನವದೆಹಲಿ: ಕುಲಭೂಷಣ ಜಾಧವ್ ಪ್ರಕರಣದ ವಿಚಾರದಲ್ಲಿ ಹೇಗ್ ನಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಪಾಕ್ ಬಳಸಿದ ಭಾಷೆಗೆ ಭಾರತ ಛೀಮಾರಿ ಹಾಕಿದೆ.
ಬುಧವಾರದಂದು ಐಸಿಜೆ ಕೋರ್ಟ್ ನಲ್ಲಿ ಜಾಧವ್ ಪ್ರಕರಣದಲ್ಲಿ ಎರಡನೇ ಸುತ್ತಿನ ಸಾರ್ವಜನಿಕ ವಿಚಾರಣೆ ಪ್ರಾರಂಭವಾಯಿತು. ನಿವೃತ್ತ ಭಾರತೀಯ ನೌಕಾ ಅಧಿಕಾರಿಯಾದ ಜಾಧವ್ ಅವರನ್ನು ಏಪ್ರಿಲ್ 2017 ರಲ್ಲಿ "ಬೇಹುಗಾರಿಕೆ ಮತ್ತು ಭಯೋತ್ಪಾದನೆ" ಎಂಬ ಆರೋಪದ ಮೇಲೆ ಪಾಕಿಸ್ತಾನಿ ಮಿಲಿಟರಿ ನ್ಯಾಯಾಲಯವು ಮರಣದಂಡನೆಗೆ ನೀಡಿತು. ಆದರೆ ಭಾರತ ಈ ತೀರ್ಪಿಗೆ ತೀವ್ರ ವಿರೋಧ ವ್ಯಕ್ತಪಡಿಸಿತು.ಈ ಹಿನ್ನಲೆಯಲ್ಲಿ ಈ ಪ್ರಕರಣ ಹೇಗ್ ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದೆ.
ಈಗ ಈ ಪ್ರಕರಣದ ವಿಚಾರವಾಗಿ ಭಾರತದ ಮಾಜಿ ಸೊಲೈಸಿಟರ್ ಜನರಲ್ ಹರೀಶ್ ಸಾಲ್ವೆ ಅವರು ಹೇಗ್ ನಲ್ಲಿರುವ ಐಸಿಜೆ ಕೋರ್ಟ್ ನಲ್ಲಿ ಜಾಧವ್ ಪ್ರಕರಣ ಪರವಾಗಿ ಭಾರತದ ವಾದಿಸುತ್ತಿದ್ದಾರೆ. ವಿಚಾರಣೆಯ ಎರಡನೇ ದಿನದಲ್ಲಿ ಪಾಕಿಸ್ತಾನದ ಸಲಹೆಗಾರ ಖವರೆ ಖುರೇಷಿ ವಿಚಾರಣೆ ವೇಳೆ ಬಳಸಿದ ಭಾಷೆಯನ್ನು ಭಾರತ ಖಂಡಿಸಿದೆ.
ಪಾಕಿಸ್ತಾನದ ಈ ಭಾಷೆಯನ್ನು ಭಾರತವು 'ನಾಚಿಕೆಯಿಲ್ಲದ, ಅಸಂಬದ್ಧ, ನಾಚಿಕೆಗೇಡಿತನದ ಪದಗಳಿಂದ ತುಂಬಿದೆ'...ಆದ್ದರಿಂದ ಇಂತಹ ಭಾಷೆ ಬಳಕೆಯನ್ನು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಬಳಸುತ್ತಿರುವುದರ ಬಗ್ಗೆ ಐಸಿಜೆ ಗಮನ ಹರಿಸಬೇಕು ಎಂದು ಹರೀಶ್ ಸಾಳ್ವೆ ತಿಳಿಸಿದರು.