ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಟ್ರಂಪ್ ಹೇಳಿಕೆಗೆ ಭಾರತ ಗರಂ
ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಪ್ರಸ್ತಾಪವನ್ನು ಸರ್ಕಾರ ಬುಧವಾರ ತಳ್ಳಿ ಹಾಕಿದ್ದು, ಈ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಗೆ ಪಾತ್ರವಿಲ್ಲ` ಎಂದು ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ನವದೆಹಲಿ: ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಪ್ರಸ್ತಾಪವನ್ನು ಸರ್ಕಾರ ಬುಧವಾರ ತಳ್ಳಿಹಾಕಿದ್ದು, ಈ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಗೆ ಪಾತ್ರವಿಲ್ಲ" ಎಂದು ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಈ ಹಿಂದೆ ಕಾಶ್ಮೀರ ಸಮಸ್ಯೆಯನ್ನು ನಿಭಾಯಿಸಲು ಮಧ್ಯಸ್ಥಿಕೆ ವಹಿಸಲು ಟ್ರಂಪ್ ನೀಡಿದ ಪ್ರಸ್ತಾಪಗಳ ಭಾರತ ತಿರಸ್ಕರಿದಾಗ್ಯೂ ಕೂಡ ಅಮೆರಿಕದ ಅಧ್ಯಕ್ಷರು ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭೇಟಿಗೆ ಮುಂಚಿತವಾಗಿ ಈ ವಿಷಯವನ್ನು ಎತ್ತುವ ಮತ್ತೊಂದು ಪ್ರಯತ್ನ ಮಾಡಿದರು.
'ಕಾಶ್ಮೀರ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ.ಈ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಗೆ ಯಾವುದೇ ಪಾತ್ರವಿಲ್ಲ ”ಎಂದು ಹೆಸರಿಸಲು ನಿರಾಕರಿಸಿದ ವ್ಯಕ್ತಿಯೊಬ್ಬರು ಹೇಳಿದರು.ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಟ್ರಂಪ್ ಕೆಲವು ಮಾರ್ಪಾಡುಗಳ ಸಹಾಯವನ್ನು ಭಾರತ ಕಳೆದ ಜುಲೈನಿಂದ ಏಳನೇ ಬಾರಿಗೆ ತಿರಸ್ಕರಿಸಿದೆ.
ಮಂಗಳವಾರ ಇಮ್ರಾನ್ ಖಾನ್ ಅವರ ಭೇಟಿಗೂ ಮುನ್ನ ಟ್ರಂಪ್ ಅವರು 'ಪಾಕಿಸ್ತಾನ ಮತ್ತು ಭಾರತದೊಂದಿಗೆ ಏನು ನಡೆಯುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ಕಾಶ್ಮೀರದ ಬಗ್ಗೆ ಮಾತನಾಡುವುದಾಗಿ ಹೇಳಿದರು. 'ನಾವು ಈ ವಿಚಾರವಾಗಿ ಸಹಾಯ ಮಾಡಬಹುದಾದರೆ, ಖಂಡಿತವಾಗಿಯೂ ಮಾಡುತ್ತೇವೆ' ಎಂದರು.