ನವದೆಹಲಿ: ಯುಎಸ್ ನ ಕಠಿಣ ನಿರ್ಬಂಧಗಳ ಬೆದರಿಕೆಯ ನಡುವೆಯೂ ಭಾರತವು ರಷ್ಯಾದ ಎಸ್ -400 ಟ್ರಯಂಫ್ನ್ನು ಕ್ಷಿಪಣಿಗಾಗಿ ಸಹಿ ಹಾಕಿದೆ. ರಷ್ಯಾ ಅಧ್ಯಕ್ಷ  ಪುಟಿನ್ ಅವರು ಎರಡು ದಿನಗಳ ಭೇಟಿಗಾಗಿ ಗುರುವಾರದಂದು ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.


COMMERCIAL BREAK
SCROLL TO CONTINUE READING

ರಷ್ಯಾದಿಂದ ಮುಂದುವರಿದ ಮಿಲಿಟರಿ ಯಂತ್ರಗಳನ್ನು ಖರೀದಿಸುವ ಯಾವುದೇ ರಾಷ್ಟ್ರದ ವಿರುದ್ಧ ಯು.ಎಸ್. ಕಠಿಣ ನಿರ್ಬಂಧ ವಿಧಿಸಲಿದೆ ಎಂದು ಎಚ್ಚರಿಕೆ ನೀಡಿತ್ತು. ಆದರೆ ಈ ಬೆದರಿಕೆ ನಡುವೆಯೂ ಸಹಿತ ಈಗ ಭಾರತದ ಅಮೆರಿಕಾದ ಕಠಿಣ ನಿರ್ಭಂದದ ಬೆದರಿಕೆಯನ್ನು ಬದಿಗೊತ್ತಿ ಒಪ್ಪಂದಕ್ಕೆ ಸಹಿ ಹಾಕಿದೆ.


ಈ ಒಪ್ಪಂದದ ಕುರಿತಾಗಿ ಮಾತನಾಡಿದ ಪ್ರಧಾನಿ ಮೋದಿ" ಭಾರತದ ಬೆಳವಣಿಗೆಗೆ ರಷ್ಯಾ ಯಾವಾಗಲು ಸಹ ಭಾರತದ ಪರವಾಗಿ ನಿಂತಿದೆ" ಎಂದು ತಿಳಿಸಿದರು. ಸುಮಾರು ಐದು ಬಿಲಿಯನ್ ಡಾಲರ್ ಮೊತ್ತದ ಈ ಒಪ್ಪಂದದ ಮೂಲಕ ಎಸ್-400 ಕ್ಷಿಪಣಿಗಳನ್ನು ರಷ್ಯಾದ ಮೂಲಕ ಭಾರತ ಖರೀಧಿ ಮಾಡಲಿದೆ.ಅಲ್ಲದೆ  ರಷ್ಯಾದ ಸೈಬೇರಿಯಾದಲ್ಲಿರುವ ನೋವೊಸಿಬಿರ್ಸ್ಕ್ ನಲ್ಲಿ ಬಾಹ್ಯಾಕಾಶ ವಿಚಾರವಾಗಿ ಅದನ್ನು ನಿಯಂತ್ರಿಸುವ ಸ್ಟೇಶನ್ ನ್ನು ಅಲ್ಲಿ ನಿರ್ಮಿಸಲಿದೆ. 


ಪುಟಿನ್ ಭೇಟಿ ಕೇವಲ ರಕ್ಷಣಾ ಒಪ್ಪಂದಗಳ ಬಗ್ಗೆ ಮಾತ್ರ ಅಲ್ಲ. ಅವರು  ರಷ್ಯಾದ ನಿರ್ಮಿತ ಪರಮಾಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಸಾಧ್ಯತೆಯ ಬಗ್ಗೆಯೂ ಕೂಡ ಮೋದಿ ಜೊತೆ ಚರ್ಚಿಸಲಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೊಂದಿಗೆದಿಗೆ ಭಾರತೀಯ ಗಗನಯಾತ್ರಿಗಳನ್ನು 2022 ರಲ್ಲಿ ಗಗನಯಾತ್ರೆಗೆ ಕಳುಹಿಸಲು ರಷ್ಯಾದ ತರಬೇತಿ ವಿಚಾರವಾಗಿಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.