ಭಾರತ, ಶ್ರೀಲಂಕಾಗೆ ಐಸಿಸ್ ನಿಂದ ಬೆದರಿಕೆ ಸಾಧ್ಯತೆ - ಗುಪ್ತಚರ ವರದಿ ಎಚ್ಚರಿಕೆ
ಸಿರಿಯಾ ಮತ್ತು ಇರಾಕ್‌ನಾದ್ಯಂತ ನಷ್ಟದ ಹಿನ್ನೆಲೆಯಲ್ಲಿ ಭಾರತ ಮತ್ತು ಶ್ರೀಲಂಕಾ ಭಯೋತ್ಪಾದಕ ಗುಂಪು ಐಸಿಸ್‌ಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಗುಪ್ತಚರ ವರದಿಗಳು ಎಚ್ಚರಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ನವದೆಹಲಿ: ಸಿರಿಯಾ ಮತ್ತು ಇರಾಕ್‌ನಾದ್ಯಂತ ನಷ್ಟದ ಹಿನ್ನೆಲೆಯಲ್ಲಿ ಭಾರತ ಮತ್ತು ಶ್ರೀಲಂಕಾ ಭಯೋತ್ಪಾದಕ ಗುಂಪು ಐಸಿಸ್‌ಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ ಎಂದು ಗುಪ್ತಚರ ವರದಿಗಳು ಎಚ್ಚರಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ವರದಿಗಳ ಪ್ರಕಾರ, ಕೇರಳದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಗುಪ್ತಚರರು ಮೂರು ಪತ್ರಗಳನ್ನು ಕಳುಹಿಸಿದ್ದು, ಅಂತಹ ಬೆಳವಣಿಗೆಯ ಸಾಧ್ಯತೆಯ ಬಗ್ಗೆ ಸುಳಿವು ನೀಡಲಾಗಿದೆ.ಎನ್‌ಡಿಟಿವಿಗೆ ಲಭ್ಯವಾಗಿರುವ ಪತ್ರದಲ್ಲಿ “ಇರಾಕ್ ಮತ್ತು ಸಿರಿಯಾದಲ್ಲಿ ಭೂಪ್ರದೇಶವನ್ನು ಕಳೆದುಕೊಂಡ ನಂತರ, ತಮ್ಮ ತಮ್ಮ ದೇಶಗಳಲ್ಲಿ ಉಳಿದುಕೊಂಡು ಹಿಂಸಾತ್ಮಕ ಸ್ವರೂಪದ ಜಿಹಾದ್‌ಗಳನ್ನು ತೆಗೆದುಕೊಳ್ಳುವಂತೆ ಐಎಸ್ ಕಾರ್ಯಕರ್ತರನ್ನು ಒತ್ತಾಯಿಸುತ್ತಿದೆ.” ಎಂದು ಉಲ್ಲೇಖಿಸಲಾಗಿದೆ.
ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕಾಶ್ಮೀರ ದೇಶದಲ್ಲಿ ಐಸಿಸ್ ಪ್ರಭಾವಕ್ಕೆ ಹೆಚ್ಚು ಗುರಿಯಾಗುವ ರಾಜ್ಯಗಳಾಗಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಕಳೆದ ವರ್ಷಗಳಲ್ಲಿ ಕನಿಷ್ಠ 100 ಜನರು ಕೇರಳದಿಂದ ಐಸಿಸ್ ಸೇರಿದ್ದಾರೆಂದು ಹೇಳಲಾಗುತ್ತಿದೆ. ಈಗ ಆಂತರಿಕ ಭದ್ರತೆಯನ್ನು ಬಲಪಡಿಸಲು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಹೇಳಲಾಗಿದೆ.
ಮೇ ತಿಂಗಳ ಕೊನೆಯಂದು ದ್ವೀಪ ರಾಷ್ಟ್ರದಿಂದ ಐಸಿಸ್ ಭಯೋತ್ಪಾದಕರು ಪ್ರವೇಶಿಸುವುದನ್ನು ತಡೆಯಲು ಕೇರಳ ಕರಾವಳಿ ಎಚ್ಚರಿಕೆ ವಹಿಸಿದೆ ಎನ್ನಲಾಗಿದೆ.