ನವದೆಹಲಿ: ಪಾಕಿಸ್ತಾನ ಗುರುವಾರ ಕುಲಭೂಷಣ್ ಜಾಧವ್ ಅವರಿಗೆ ಎರಡನೇ ಬಾರಿಗೆ ಕಾನ್ಸುಲರ್ ಅಕ್ಸಸ್ ನೀಡಿದೆ. ಇಬ್ಬರು ಅಧಿಕಾರಿಗಳಿಗೆ ಭೇಟಿಯಾಗಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಭಾರತೀಯ ಅಧಿಕಾರಿಗಳು ಈಗಾಗಲೇ ಪಾಕಿಸ್ತಾನದ  ವಿದೇಶಾಂಗ ಕಚೇರಿಯನ್ನು ತಲುಪಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಭಾರತ, ಪಾಕಿಸ್ತಾನಕ್ಕೆ ಕುಲಭೂಶಣ್ ಜಾಧವ್ ಅವರನ್ನು ಭೇಟಿಯಾಗಲು ಬೇಷರತ್ತು ಅನುಮತಿ ಕೋರಿತ್ತು. ಇದರಿಂದ ಸುಗ್ರೀವಾಜ್ಞೆ ಅಡಿಯಲ್ಲಿ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ನೀಡಿದ್ದ ಶಿಕ್ಷೆಯ ಬಗ್ಗೆ ಹೈ ಕೋರ್ಟ್ ನಲ್ಲಿ ಪರಿಶೀಲನಾ ಚರ್ಚೆಯಲ್ಲಿ ಸಹಕಾರಿಯಾಗಲಿದೆ ಎನ್ನಲಾಗಿತ್ತು.



ಇದಕ್ಕೂ ಮೊದಲು ಭಾರತೀಯ ನೌಕಾ ಸೇನೆಯ ಅಧಿಕಾರಿ ಕುಲಭೂಷಣ್  ಜಾಧವ್ ತಮಗೆ ನೀಡಲಾಗಿರುವ ಶಿಕ್ಷೆಗೆ ಮರುಪರಿಶೀಲನಾ ಅರ್ಜಿ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿತ್ತು. ಇದಾದ ಬಳಿಕ ಕಳೆದ ಗುರುವಾರ ಹೇಳಿಕೆ ನೀಡಿದ್ದ ಭಾರತ ಕುಲಭೂಷಣ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಎಲ್ಲ ಕಾನೂನು ವಿಕಲ್ಪಗಳನ್ನು ಅನುಸರಿಸುವುದಾಗಿ ಹೇಳಿತ್ತು. 2017 ರಲ್ಲಿ ಪಾಕ್ ಮಿಲಿಟರಿ ನ್ಯಾಯಾಲಯ ಕುಲಭೂಷಣ್ ಜಾಧವ್ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.


ಮಾರ್ಚ್ 3, 2016 ರಲ್ಲಿ ಗೂಢಚಾರಿಕೆಯ ಆರೋಪದ ಮೇಲೆ ಪಾಕ್ ಭದ್ರತಾಪಡೆಗಳು ಬಲೂಚಿಸ್ತಾನದಿಂದ ಬಂಧಿಸಿದ್ದರು. ಪಾಕ್ ಹೇಳುವಂತೆ ಇರಾನ್ ನಿಂದ ಅಕ್ರಮವಾಗಿ ಪಾಕ್ ಪ್ರವೇಶಿಸಿದ ಆರೋಪ ಅವರ ಮೇಲೆ ಹೊರಿಸಲಾಗಿದೆ. ಗೂಢಚಾರಿಕೆ ಹಾಗೂ ಇತರೆ ಚಟುವಟಿಕೆಗಳಲ್ಲಿ ಕುಲಭೂಷಣ್ ಜಾಧವ್ ಪಾಲ್ಗೊಂಡಿರುವ ಕುರಿತು ಪಾಕ್ ಮಾಡಿರುವ ಎಲ್ಲ ಆರೋಪಗಳನ್ನು ಭಾರತ ತಳ್ಳಿಹಾಕಿದೆ. ಅಷ್ಟೇ ಅಲ್ಲ ಕುಲಭೂಷಣ್ ಅವರನ್ನು ಚಾಬಹಾರ್ ನ ಇರಾನಿ ಪೋರ್ಟ್ ಬಂದರಿನಿಂದ ಅಪಹರಿಸಲಾಗಿದ್ದು, ಕುಲಭೂಷಣ್ ಅಲ್ಲಿ ವ್ಯವಸಾಯವೊಂದರಲ್ಲಿ ನಿರತರಾಗಿದ್ದರು ಎಂದು ಸ್ಪಷ್ಟಪಡಿಸಿತ್ತು.