ಒರೆಗಾನ್ ನಿಂದ ಕ್ಯಾಲಿಫೋರ್ನಿಯಾಗೆ ಪ್ರಯಾಣಿಸುವ ಸಂದರ್ಭದಲ್ಲಿ ಭಾರತೀಯ ಕುಟುಂಬದ ನಾಲ್ವರು ಕಳೆದ ವಾರ ಅಮೆರಿಕದಲ್ಲಿ ನಾಪತ್ತೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ವಾಷಿಂಗ್ಟನ್ ಪೋಸ್ಟ್ ಪ್ರಕಾರ, ತೀವ್ರ ಹುಡುಕಾಟದ ನಂತರ, ಈಲ್ ನದಿಯಲ್ಲಿ ಕಾರಿನೊಂದಿಗೆ ಮುಳುಗಿದ್ದ ಕುಟುಂಬದ ಇಬ್ಬರ ಶವ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ದೇಹಗಳನ್ನು ಹೊರತೆಗೆದ ನಂತರ ಸಂದೀಪ್ ತೋಟಪಲ್ಲಿ ಮತ್ತು ಅವರ 9 ವರ್ಷದ ಮಗಳು ಸಾಚಿ ಎಂದು ಗುರುತಿಸಲಾಗಿದೆ. ಸಂದೀಪ್‌ ಮತ್ತು ಪುತ್ರಿಯ ಶವ ಪತ್ತೆಯಾಗುವ ಎರಡು ದಿನಗಳ ಮೊದಲು, ತನಿಖಾಧಿಕಾರಿಗಳು ಸಂದೀಪ್ ಅವರ ಪತ್ನಿ ಸೌಮ್ಯ ಶವ ಪತ್ತೆಯಾಗಿತ್ತು ಎಂದು ದಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಆದಾಗ್ಯೂ, ಅವರ ಮಗ ಸಿದ್ಧಾಂತ್ ಬಗ್ಗೆ ಇದುವರೆಗೂ ಯಾವುದೇ ಸುಳಿವು ದೊರೆತಿಲ್ಲ.



"ಸರಿಸುಮಾರಾಗಿ ಬೆಳ್ಳಿಗ್ಗೆ 11:30 ರಲ್ಲಿ ಬೋಟಿಂಗ್ ತಂಡದ ಸದಸ್ಯರು ವರದಿ ಮಾಡಿದ ಕ್ರ್ಯಾಶ್ ಸೈಟ್ (ಡೌನ್ಸ್ಟ್ರೀಮ್) ನ ಉತ್ತರದಲ್ಲಿ ಸುಮಾರು 1/2 ಮೈಲುಗಳಷ್ಟು ನೀರು ಹೊರಸೂಸುವ ಗ್ಯಾಸೋಲಿನ್ ವಾಸನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೋಧಕರು ನದಿಯಲ್ಲಿ ತನಿಖೆ ಮಾಡಲು ಪ್ರಾರಂಭಿಸಿದಾಗ ನೀರಿನ ಕೆಳಗೆ ಸುಮಾರು 4-6 ಅಡಿಗಳಷ್ಟು ಮುಳುಗಿಹೋದ ವಾಹನವನ್ನು ಪತ್ತೆಯಾಗಿದೆ"ಎಂದು ಕ್ಯಾಲಿಫೋರ್ನಿಯಾದ ಮೆಂಡೋಸಿನೊ ಕೌಂಟಿ ಶೆರಿಫ್ಸ್ ಆಫೀಸ್ ಹೇಳಿಕೆಯಲ್ಲಿ ತಿಳಿಸಿದೆ.


ಇದಾದ ನಂತರ ಹಲವು ಗಂಟೆಗಳ ಕಾರ್ಯಾಚರಣೆ ನಂತರ ಸರಿಸುಮಾರು ಸಂಜೆ 06:30ರ ವೇಳೆಗೆ ಈವ್ ನದಿಯಿಂದ ವಾಹನವನ್ನು ಹೊರತೆಗೆಯಲಾಯಿತು. ಈಲ್ ನದಿಯಲ್ಲಿ ಕಾರಿನೊಂದಿಗೆ ಮುಳುಗಿದ್ದ ಸಂದೀಪ್ ತೋಟಪಲ್ಲಿ ಮತ್ತು ಅವರ 9 ವರ್ಷದ ಮಗಳು ಸಾಚಿ ದೇಹಗಳನ್ನು ಹೊರತೆಗೆಯಲಾಯಿತು ಎಂದು ತಿಳಿದುಬಂದಿದೆ. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.


ಸ್ಯಾನ್ ಜೋಸ್ ಆರಕ್ಷಕ ಇಲಾಖೆಯ ಪ್ರಕಾರ, ಏಪ್ರಿಲ್ 6 ರಂದು ಸ್ಯಾನ್ ಜೋಸ್ ಪ್ರದೇಶದಲ್ಲಿ ಸ್ನೇಹಿತರನ್ನು ಭೇಟಿ ಮಾಡಲು ತೋಟಪಲ್ಲಿ ಕುಟುಂಬವು ಆಗಮಿಸಬೇಕಾಗಿತ್ತು ಆದರೆ ಅದು ನಿಗದಿತವಾಗಿರಲಿಲ್ಲ ಎಂದು ತಿಳಿದುಬಂದಿದೆ.


ಗುಜರಾತಿನ ಸೂರತ್ ಮೂಲದವರಾದ ಸಂದೀಪ್ 15 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ.