ಪಾಕ್ ಪ್ರಧಾನಿ ಇಮ್ರಾನ್ ಖಾನ್ ರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ ಭಾರತೀಯ ಹೈಕಮಿಷನ್
ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ, ಪ್ರಧಾನಮಂತ್ರಿ ಇಮ್ರಾನ್ ಖಾನ್ ಹಾಗೂ ಇತರ ಪಾಕ್ ಗಣ್ಯರಿಗೆ ಜೂನ್ 1 ರಂದು ಹಮ್ಮಿಕೊಂಡಿರುವ ಇಫ್ತಾರ್ ಕೂಟಕ್ಕೆ ಆಹ್ವಾನಿಸಿದೆ.ಸಾಮಾನ್ಯವಾಗಿ ಈ ಕೂಟದಲ್ಲಿ ಪಾಕ್ ಅಧಿಕಾರಗಳು ಭಾಗವಹಿಸುತ್ತಾರೆ ಆದರೆ ಪ್ರಧಾನಿಯವರು ಹಾಜರಿರುವುದಿಲ್ಲ ಎನ್ನಲಾಗಿದೆ.
ನವದೆಹಲಿ: ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ, ಪ್ರಧಾನಮಂತ್ರಿ ಇಮ್ರಾನ್ ಖಾನ್ ಹಾಗೂ ಇತರ ಪಾಕ್ ಗಣ್ಯರಿಗೆ ಜೂನ್ 1 ರಂದು ಹಮ್ಮಿಕೊಂಡಿರುವ ಇಫ್ತಾರ್ ಕೂಟಕ್ಕೆ ಆಹ್ವಾನಿಸಿದೆ.ಸಾಮಾನ್ಯವಾಗಿ ಈ ಕೂಟದಲ್ಲಿ ಪಾಕ್ ಅಧಿಕಾರಗಳು ಭಾಗವಹಿಸುತ್ತಾರೆ ಆದರೆ ಪ್ರಧಾನಿಯವರು ಹಾಜರಿರುವುದಿಲ್ಲ ಎನ್ನಲಾಗಿದೆ.
ಫೆಬ್ರವರಿ 14 ರಂದು ಪುಲ್ವಾಮಾ ಭಯೋತ್ಪಾದನಾ ದಾಳಿ ಮತ್ತು ಫೆಬ್ರವರಿ 26 ರಂದು ಜೈಶ್-ಇ-ಮೊಹಮ್ಮದ್ (ಜೆಎಂ) ಭಯೋತ್ಪಾದನಾ ಶಿಬಿರಗಳಲ್ಲಿ ಭಾರತೀಯ ವಾಯುಪಡೆಯ ವಾಯುದಾಳಿಯು ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿತ್ತು.ಇದಾದ ನಂತರ ಭಾನುವಾರದಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಧಾನಿ ಮೋದಿಗೆ ಲೋಕಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಕರೆ ಮಾಡಿ ಅಭಿನಂದಿಸಿದ್ದರು.ಅಷ್ಟೇ ಅಲ್ಲದೆ ಭಯೋತ್ಪಾದನೆ ಮುಕ್ತ ಪರಿಸರ ಸೃಷ್ಟಿಸುವ ಮತ್ತು ಉಭಯದೇಶಗಳ ನಡುವೆ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಸಹಕಾರವನ್ನು ಬೆಳೆಸುವುದು ಅತ್ಯಗತ್ಯ ಎಂದು ಹೇಳಿದ್ದರು ಎನ್ನಲಾಗಿದೆ.
ಭಾನುವಾರದಂದು ನಡೆದ ದೂರವಾಣಿ ಸಂಭಾಷಣೆಯು ಪುಲ್ವಾಮಾ ದಾಳಿಯ ನಡೆದ ಮೊದಲ ಸಂಭಾಷಣೆ ಎಂದು ತಿಳಿದುಬಂದಿದೆ.ಮೇ 30 ರಂದು ನರೇಂದ್ರ ಮೋದಿ ಅವರ ಪ್ರಮಾಣ ವಚನ ಸಮಾರಂಭಕ್ಕೆ ಬಿಮಸ್ಟೆಕ್ ರಾಷ್ಟ್ರಗಳ ನಾಯಕರಿಗೆ ಆಹ್ವಾನ ನೀಡಿರುವ ಭಾರತ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಗೆ ಯಾವುದೇ ಆಹ್ವಾನವನ್ನು ನೀಡಲಾಗಿಲ್ಲ ಎನ್ನಲಾಗಿದೆ.ಉಭಯ ದೇಶಗಳ ಪ್ರಧಾನ ಮಂತ್ರಿಗಳು ಜೂನ್ ತಿಂಗಳಲ್ಲಿ ನಡೆಯಲಿರುವ ಶಾಂಘಾಯ್ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭೇಟಿಯಾಗಿ ದ್ವೀಪಕ್ಷಿಯ ಸಂಬಂಧಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.