ಇತ್ತೀಚೆಗಷ್ಟೇ ಟ್ವಿಟರ್'ನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ದೇಶದ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 41 ಮಿಲಿಯನ್ ಅನುಯಾಯಿಗಳನ್ನು ಹೊಂದುವ ಮೂಲಕ 'most followed leader' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೀಗ ಟ್ವಿಟರ್ ಆಘಾತಕಾರಿ ಸತ್ಯವೊಂದನ್ನು ಬಹಿರಂಗಪಡಿಸಿದೆ. 


COMMERCIAL BREAK
SCROLL TO CONTINUE READING

ವಿಶ್ವದ ಪ್ರಮುಖ ನಾಯಕರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಫಾಲೋವರ್ಸ್'ನಲ್ಲಿ ಅರ್ಧದಷ್ಟು ಜನ ನಕಲಿ ಎಂದು ಟ್ವಿಟರ್ ಹೇಳಿದೆ. ಮೋದಿ ಅವರ 41 ಮಿಲಿಯನ್ ಫಾಲೋವರ್ಸ್'ನಲ್ಲಿ ಶೇ.60 ನಕಲಿ ಫಾಲೋವರ್'ಗಳನ್ನೂ ಹೊಂದಿದ್ದಾರೆ ಎಂದು ಟ್ವಿಟರ್ ಬಹಿರಂಗಪಡಿಸಿದೆ. 



ಅಲ್ಲದೆ, ನಕಲಿ ಫಾಲೋವರ್'ಗಳನ್ನೂ ಹೊಂದಿರುವ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪೋಪ್ ಫ್ರಾನ್ಸಿಸ್, ಕಿಂಗ್ ಸಲ್ಮಾನ್, ಪೆನಾ ನಿಟೋ ಮತ್ತಿತರರು ಸ್ಥಾನ ಪಡೆದಿದ್ದಾರೆ. ಈ ಮಾಹಿತಿಯನ್ನು twitteraudit.com ಬಹಿರಂಗಪಡಿಸಿದೆ.