ದುಬೈ: ಗಲ್ಫ್ ದೇಶ ದುಬೈನಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರ ಅದೃಷ್ಟದ ಬಾಗಿಲು ತೆರೆದಿದೆ. ಆತ ಖರೀದಿಸಿದ ಲಾಟರಿಗೆ ಸಿಕ್ಕ ಬಹುಮಾನ ಎಷ್ಟು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗದೇ ಇರದು. ಹೌದು, ಆತನಿಗೆ ಬರೋಬ್ಬರಿ ಹತ್ತು ಲಕ್ಷ ಅಮೇರಿಕನ್ ಡಾಲರ್ (ಸುಮಾರು 7.3 ಮಿಲಿಯನ್ ರೂಪಾಯಿ) ಲಾಟರಿ ಹೊಡೆದಿದೆ.


COMMERCIAL BREAK
SCROLL TO CONTINUE READING

ಕಳೆದ ಆರು ವರ್ಷದಿಂದ ದುಬೈನಲ್ಲಿ ವಾಸ:
ಕಳೆದ ಆರು ವರ್ಷದಿಂದ ದುಬೈನಲ್ಲಿ ವಾಸಿಸುತ್ತಿದ್ದ 45 ವರ್ಷ ವಯಸ್ಸಿನ ಸೌರವ್ ಡೇ ಎಂಬುವವರಿಗೆ ಈ ಲಾಟರಿ ಬಹುಮಾನ ಸಿಕ್ಕಿದೆ ಎಂದು ಆತನ ಅದೃಷ್ಟದ ಬಗ್ಗೆ ಖಲೀಜ್ ಟೈಮ್ಸ್ ವರದಿ ಮಾಡಿದೆ. ಒಂದು ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸೌರವ್ ಡೇ ತನ್ನ ಕೊಲ್ಕತ್ತಾದಲ್ಲಿ ರಜಾ ದಿನಗಳನ್ನು ಕಳೆಯಲು  ಸೆಪ್ಟೆಂಬರ್ 26 ರಂದು ಮೊದಲ ಬಾರಿಗೆ ದುಬೈ ಡ್ಯೂಟಿ ಫ್ರೀ ಟಿಕೆಟ್ ಖರೀದಿಸಿದರು ಎಂದು ತಿಳಿಸಿದೆ.


ಇನ್ನಿಬ್ಬರ ಅದೃಷ್ಟ:
ಇದಲ್ಲದೆ, ಮತ್ತಿಬ್ಬರ ಅದೃಷ್ಟವೂ ಚೆನ್ನಾಗಿದ್ದು, ಲಾಟರಿಯಲ್ಲಿ ಭಾರತದ 44 ವರ್ಷದ ಬಾಬು ಅಜಿತ್ ಬಾಬು ಅವರು BMW ಕಂಪನಿಯ ಮೊಟರ್ ಬೈಕ್ ಪಡೆದಿದ್ದರೆ. ಶ್ರೀಲಂಕಾದ ಸಜೀ ನಿರಂಜನ್  ರೇಂಜ್ ರೋವರ್ ಕಾರನ್ನು ಬಹುಮಾನವಾಗಿ  ಪಡೆದಿದ್ದಾರೆ.