Indonesia Earthquake 2021 - ಜಕಾರ್ತಾ: ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದ್ದು, ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ, ಭೂಕಂಪದ ತೀವ್ರತೆಯು ರಿಕ್ಟರ್ ಪ್ರಮಾಣದಲ್ಲಿ 6.2ರಷ್ಟಿತ್ತು ಎಂದು ಹೇಳಿದೆ. ಭೂಕಂಪದ ಕೇಂದ್ರಬಿಂದು ಭೂಮಿಯಿಂದ 10 ಕಿಲೋಮೀಟರ್ ಆಳದಲ್ಲಿತ್ತು ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಸುನಾಮಿಯ ಮುನ್ಸೂಚನೆ ಇಲ್ಲ
ಭೂಕಂಪದ ಕೇಂದ್ರಬಿಂದು ಮಜಾನೆ ನಗರದ ಈಶಾನ್ಯಕ್ಕೆ 6 ಕಿ.ಮೀ.  ದೂರದಲ್ಲಿತ್ತು ಎನ್ನಲಾಗಿದೆ. ಸುಮಾರು 7 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಆದರೆ ,ಭೂಕಂಪದ ನಂತರ ಯಾವುದೇ ಸುನಾಮಿ(Tsunami) ಎಚ್ಚರಿಕೆ ನೀಡಲಾಗಿಲ್ಲ. ಇದಕ್ಕೂ ಮುನ್ನ ಗುರುವಾರ ದೇಶದ ಕೆಲವು ಭಾಗಗಳಲ್ಲಿ ಭೂಕಂಪನ ಸಂಭವಿಸಿದೆ.


ಇದನ್ನು ಓದಿ-VIDEO: 'ಪಾಪ್ ಬ್ಯಾಂಡ್'ನ ನೇರಪ್ರಸಾರದ ವೇಳೆ ಹಠಾತ್ ಅಪ್ಪಳಿಸಿದ 'ಸುನಾಮಿ'


2004ರಲ್ಲಿ ಸಂಭವಿಸಿತ್ತು ಭೀಕರ ಭೂಕಂಪ
ಇದಕ್ಕೂ ಮುನ್ನ ಇಂಡೋನೇಷ್ಯಾದಲ್ಲಿ 2004 ಮತ್ತು 2018 ರಲ್ಲಿ ತೀವ್ರ ಭೂಕಂಪಗಳು ಸಂಭವಿಸಿದವು. 2018 ರಲ್ಲಿ ಸುಲಾವೆಸಿ ದ್ವೀಪದ ಬಳಿ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರಲ್ಲಿ 4300 ಜನರು ಮೃತಪಟ್ಟಿದ್ದರು. ಇದೇ ವೇಳೆ, 2004 ರ ಡಿಸೆಂಬರ್ 26 ರಂದು ಇಂಡೋನೇಷ್ಯಾದಲ್ಲಿ ಸಂಭವಿಸಿದ್ದ ಭೂಕಂಪದ ತೀವ್ರತೆ 9.1 ರಷ್ಟಾಗಿದ್ದು. ಆ ಸಮಯದಲ್ಲಿ 2.22 ಲಕ್ಷ ಜನರು ಮೃತಪಟ್ಟಿದ್ದರು.


ಇದನ್ನು ಓದಿ-ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಸುನಾಮಿ; 43 ಮಂದಿ ಸಾವು


ಭೂಕಂಪಗಳು ಏಕೆ ಸೃಷ್ಟಿಸುತ್ತವೆ
ಭೂಮಿಯ ಗರ್ಭದೊಳಗೆ ಒಟ್ಟು 7 ಪದರುಗಳಿವೆ. ಈ ಪದರುಗಳು ಒಂದಕ್ಕೊಂದು ಸ್ಪರ್ಶಿಸುವ ಜಾಗವನ್ನು ಜೋನ್ ಫಾಲ್ಟ್ ಲೈನ್ ಎಂದು ಕರೆಯಲಾಗುತ್ತದೆ. ಈ ಪದರುಗಳು ಪದೇ ಪದೇ ಡಿಕ್ಕಿ ಹೊಡೆಯುವ ಕಾರಣ ಪದರುಗಳ ಮೂಲೆಗಳು ಸುತ್ತಿಕೊಳ್ಳಲಾರಂಭಿಸುತ್ತವೆ. ಒತ್ತಡ ಹೆಚ್ಚಾದಾಗ ಈ ಪ್ಲೇಟ್ ಗಳು ಮುರಿದುಕೊಳ್ಳುತ್ತವೆ ಹಾಗೂ ಅವುಗಳ ಕೆಳಗಿರುವ ಶಕ್ತಿ ಹೊರಬರಲು ಪ್ರಯತ್ನಿಸುತ್ತದೆ. ಉಂಟಾಗುವ ಈ ಅಡೆತಡೆಯ ಬಳಿಕ ಭೂಕಂಪ ಸೃಷ್ಟಿಯಾಗುತ್ತದೆ.


ಇದನ್ನು ಓದಿ-ಇಂಡೋನೇಷ್ಯಾದಲ್ಲಿ ರಿಕ್ಟರ್ ಮಾಪಕ 7.5 ರಷ್ಟು ಭೂಕಂಪ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.