Inflation in Pakistan: ಪಾಕಿಸ್ತಾನದಲ್ಲಿ ಒಂದು ಕಪ್ ಚಹಾದ ಬೆಲೆ ಎಷ್ಟೆಂದು ಕೇಳಿದರೆ ಶಾಕ್ ಆಗ್ತೀರಾ...
Inflation in Pakistan: ಪಾಕಿಸ್ತಾನದಲ್ಲಿ ಹಣದುಬ್ಬರವು ಪ್ರತಿದಿನ ದಾಖಲೆಗಳನ್ನು ಮುರಿಯುತ್ತಿದೆ. ರಾವಲ್ಪಿಂಡಿಯಲ್ಲಿ ಒಂದು ಕಪ್ ಚಹಾದ ಬೆಲೆ ಎಷ್ಟು ತಲುಪಿದೆ ಎಂದರೆ ನೀವು ಕೇಳಿದರೆ ಶಾಕ್ ಆಗುತ್ತೀರಿ.
ಇಸ್ಲಾಮಾಬಾದ್: Inflation in Pakistan: ಪಾಕಿಸ್ತಾನದಲ್ಲಿ ಹಣದುಬ್ಬರದ (Inflation in Pakistan) ಹೊಡೆದ ಜನರ ನಿದ್ದೆಗೆಡಿಸಿದೆ. ಪಾಕಿಸ್ತಾನದಲ್ಲಿ ಹಣದುಬ್ಬರವು ಪ್ರತಿದಿನ ದಾಖಲೆಗಳನ್ನು ಮುರಿಯುತ್ತಿದೆ. ಇತ್ತೀಚಿಗೆ ರಾವಲ್ಪಿಂಡಿಯಲ್ಲಿ ಒಂದು ಕಪ್ ಚಹಾದ ಬೆಲೆ ಎಷ್ಟು ತಲುಪಿದೆ ಎಂದರೆ ತಿಳಿದರೆ ಶಾಕ್ ಆಗುತ್ತೀರಿ. ಇಲ್ಲಿನ ಜನರು ಒಂದು ಕಪ್ ಚಹಾಕ್ಕೆ 40 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ಸರ್ಕಾರದ ವೈಫಲ್ಯದಿಂದಾಗಿ ಇಲ್ಲಿನ ನಾಗರೀಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಈ ಕಾರಣದಿಂದಾಗಿ ಬೆಲೆಗಳು ಗಗನಕ್ಕೆ ತಲುಪಿದೆ:
ಪಾಕಿಸ್ತಾನದ ಪತ್ರಿಕೆ 'ಡಾನ್' ಚಾಯ್‌ವಾಲಾವನ್ನು ಉಲ್ಲೇಖಿಸಿ, ಈ ಹಿಂದೆ ಒಂದು ಕಪ್ ಚಹಾದ (Tea Price) ಬೆಲೆ 30 ಇತ್ತು, ಇತ್ತೀಚೆಗೆ, ಚಹಾದ ಬೆಲೆಯು ಮತ್ತೊಮ್ಮೆ ಹೆಚ್ಚಾಗಿದೆ. ಅದು ಈಗ 40 ರೂಪಾಯಿಗೆ ಏರಿಕೆಯಾಗಿದೆ. ವಾಸ್ತವವಾಗಿ, ಸಕ್ಕರೆ, ಚಹಾ ಎಲೆಗಳು, ಚಹಾ ಚೀಲಗಳು, ಹಾಲು ಮತ್ತು ಅನಿಲದ ಬೆಲೆಯ ಹೆಚ್ಚಳದಿಂದಾಗಿ, ಇತ್ತೀಚಿನ ದಿನಗಳಲ್ಲಿ ಚಹಾದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ- Double Hike In LPG Price! ಇಲ್ಲಿ ಸಿಲಿಂಡರ್ ಮೌಲ್ಯ 2657 ರೂ., 1 ಲೀ. ಹಾಲಿನ ಬೆಲೆ 1195ರೂ.
ಹಾಲಿನ ದರ ಕೂಡ ದುಬಾರಿ:
ಪಾಕಿಸ್ತಾನದಲ್ಲಿ (Pakistan) ಹಾಲಿನ ದರದಲ್ಲೂ ಭಾರೀ ಏರಿಕೆ ಆಗಿದ್ದು, ಹಾಲಿನ ದರ ಪ್ರತಿ ಲೀಟರ್‌ಗೆ ರೂ. 105 ರಿಂದ ರೂ. 120 ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಲ್ಲದೇ, ಚಹಾ ಎಲೆಗಳು ಮತ್ತು ಗ್ಯಾಸ್ ಸಿಲಿಂಡರ್‌ಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಚಾಯ್‌ವಾಲಾ ಹಣದುಬ್ಬರ ಏರಿಕೆಯಿಂದ ತಮ್ಮ ಆದಾಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಮತ್ತು ಚಹಾದ ಬೆಲೆಯನ್ನು ಹೆಚ್ಚಿಸದೇ ಬೇರೆ ದಾರಿಯೇ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಸಣ್ಣ ಅಂಗಡಿಯವರಿಗೆ ಭಾರೀ ಹೊಡೆತ:
ಅದೇ ಸಮಯದಲ್ಲಿ, ಅಬ್ದುಲ್ ಅಜೀಜ್ ಎಂಬ ಇನ್ನೊಬ್ಬ ಚಾಯ್ ವಾಲಾ ತನ್ನ ಒಂದು ದಿನದ ಒಟ್ಟು ಗಳಿಕೆ 2,600 ರೂ. ಆದರೆ ಇತ್ತೀಚೆಗೆ ನಾನು ನನ್ನ ಸಂಪೂರ್ಣ ಲಾಭವನ್ನು ಸೇರಿಸಿದಾಗ, ನಾನು ಕೇವಲ 15 ರೂಪಾಯಿಗಳ ಲಾಭವನ್ನು ಪಡೆಯುತ್ತಿದ್ದೇನೆ. ಹಾಗಾಗಿ ಬೇರೆ ದಾರಿಯೇ ಇಲ್ಲದೆ ನಾನು ಚಹಾದ ಬೆಲೆಯನ್ನು ಹೆಚ್ಚಿಸಬೇಕಾಯಿತು. ಚಹಾದ ಬೆಲೆಯ ಹೆಚ್ಚಳದಿಂದ ಸಣ್ಣ ಅಂಗಡಿ ಮಾಲೀಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಏಕೆಂದರೆ ಚಹಾ ಬೆಲೆ ಹೆಚ್ಚಾಗಿರುವ ಕಾರಣ ದಿನಕ್ಕೆ ಮೂರು-ನಾಲ್ಕು ಕಪ್ ಚಹಾ ಕುಡಿಯುವವರು ಕೇವಲ ಒಂದು ಕಪ್‌ಗೆ ಸೀಮಿತಗೊಳಿಸಿಕೊಂಡಿದ್ದಾರೆ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಕೆಲವು ಸಮಯದ ಹಿಂದೆ ಪಾಕಿಸ್ತಾನದ ಟ್ರೇಡಿಂಗ್ ಕಾರ್ಪೊರೇಶನ್ ಆಮದು ಮಾಡಿಕೊಂಡ 28,760 ಮೆಟ್ರಿಕ್ ಟನ್ ಸಕ್ಕರೆಯ (Sugar) ಸರಕು ಪಾಕಿಸ್ತಾನವನ್ನು ತಲುಪಿತು. ಈ ಸಕ್ಕರೆಗೆ ಪಾಕಿಸ್ತಾನ ಪ್ರತಿ ಕೆಜಿಗೆ 110 ರೂ. ಪಾವತಿಸಿತ್ತು. ಅದೇ ಸಮಯದಲ್ಲಿ, ಕಳೆದ ವರ್ಷ, TCP ಒಂದು ಲಕ್ಷ ಟನ್ ಸಕ್ಕರೆಯನ್ನು ಆಮದು ಮಾಡಿದಾಗ, ಬೆಲೆ ಪ್ರತಿ ಕೆಜಿಗೆ 90 ರೂ. ಭಾರತೀಯ ಅಧಿಕಾರಿಗಳ ಪ್ರಕಾರ, ಪಾಕಿಸ್ತಾನ ಬಯಸಿದರೆ, ಭಾರತದಿಂದ ಸಕ್ಕರೆಯನ್ನು ಕಡಿಮೆ ಬೆಲೆಗೆ ಪಡೆಯಬಹುದಿತ್ತು.
ಇಮ್ರಾನ್ ವೈಫಲ್ಯ:
ಪಾಕಿಸ್ತಾನವು ಈ ವರ್ಷ ಏಪ್ರಿಲ್‌ನಲ್ಲಿ ಭಾರತದಿಂದ ಸಕ್ಕರೆಯನ್ನು ಆಮದು ಮಾಡಿಕೊಳ್ಳಲು ನಿರಾಕರಿಸಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತವು 370 ನೇ ವಿಧಿಯನ್ನು ಮರುಸ್ಥಾಪಿಸದ ಹೊರತು, ಪಾಕಿಸ್ತಾನವು ಭಾರತಕ್ಕೆ ಸಕ್ಕರೆ ಮತ್ತು ಗೋಧಿಯಂತಹ ಅಗತ್ಯ ಸರಕುಗಳನ್ನು ಆಮದು ಮಾಡಲು ಅನುಮತಿಸುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಇದಲ್ಲದೇ, ಇಮ್ರಾನ್ ಖಾನ್ ಸರ್ಕಾರದ ವೈಫಲ್ಯದಿಂದಾಗಿ, ಅಗತ್ಯ ವಸ್ತುಗಳ ಬೆಲೆಗಳು ಪಾಕಿಸ್ತಾನದಲ್ಲಿ ಆಕಾಶವನ್ನು ತಲುಪಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ