ನವದೆಹಲಿ: Interesting Fact of Beer - ಬಿಯರ್  (Beer) ಕುಡಿಯುವ ಅಭ್ಯಾಸವು ಸಾವಿರಾರು ವರ್ಷಗಳಿಂದಲೂ ಇದೆ. ಬಿಯರ್ ತಯಾರಿಸುವ ಪ್ರಕ್ರಿಯೆಯಲ್ಲಿ ಇದುವರೆಗೆ ಅನೇಕ ಪ್ರಯೋಗಗಳು ನಡೆದಿವೆ, ಅದನ್ನು ತಯಾರಿಸಲು ಬಳಸುವ ವಸ್ತುಗಳು. ಅನೇಕ ಬ್ರಾಂಡ್‌ಗಳು ಬಂದು ಹೋಗಿವೆ ಆದರೆ ಎಂದಿಗೂ ಬದಲಾಗದ ಒಂದು ವಿಷಯವೆಂದರೆ ಬಿಯರ್ ಬಾಟಲಿಯ ಬಣ್ಣ (Beer Bottle Colour). ಬ್ರಾಂಡ್ ಅನ್ನು ಲೆಕ್ಕಿಸದೆ, ಬಿಯರ್ ಬಾಟಲಿಗಳ ಬಣ್ಣ ಯಾವಾಗಲೂ ಹಸಿರು ಅಥವಾ ಕಂದು ಬಣ್ಣದ್ದಾಗಿರುತ್ತದೆ. ಇದರ ಹಿಂದೆ ಏನು ಕಾರಣ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಬಿಯರ್‌ಗೆ ಸಂಬಂಧಿಸಿದ ಈ ಪ್ರಮುಖ ವಿಷಯವನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಸಾವಿರಾರು ವರ್ಷಗಳ ಹಿಂದೆ ತೆರೆದುಕೊಂಡಿತ್ತು ಮೊದಲ ಬಿಯರ್ ಫ್ಯಾಕ್ಟರಿ
ಇತಿಹಾಸದ ಪುಟಗಳಲ್ಲಿ ದಾಖಲಾದ ಮಾಹಿತಿಯ ಪ್ರಕಾರ, ಬಿಯರ್ ಅನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಇದೇ ವೇಳೆ , ವಿಶ್ವದ ಮೊದಲ ಬಿಯರ್ (Beer) ಕಂಪನಿಯು  (First Beer Company) ಪ್ರಾಚೀನ ಈಜಿಪ್ಟ್‌ನಲ್ಲಿ ತೆರೆಯಲ್ಪಟ್ಟಿತ್ತು. ಆ ಸಮಯದಲ್ಲಿ ಬಿಯರ್ ಅನ್ನು ಪಾರದರ್ಶಕ ಬಾಟಲಿಗಳಲ್ಲಿ (Transparent Bottle) ಮಾರಾಟ ಮಾಡಲಾಗುತ್ತಿತ್ತು, ಆದರೆ ಸೂರ್ಯನ ಕಿರಣಗಳು ಪಾರದರ್ಶಕ ಬಾಟಲಿಗಳನ್ನು ಭೇದಿಸುವ ಕಾರಣ ಬಿಯರ್ ಹಾಳಾಗುತ್ತಿತ್ತು. ಬಲವಾದ ನೇರಳಾತೀತ (Ultra-violet Rays) ಕಿರಣಗಳಿಂದಾಗಿ, ಬಿಯರ್ ಗೆ ವಾಸನೆ ಬರಲಾರಂಭಿಸುತ್ತಿತ್ತು. ಇದರಿಂದ ವ್ಯಾಪಾರಸ್ಥರಿಗೆ ಬಹಳ ಹಾನಿಯಾಗಲಾರಂಭಿಸಿತು. ನಂತರ ಈ ಸಮಸ್ಯೆಯಿಂದ ಹೊರಬರಲು ಪರಿಹಾರದ ಕುರಿತು ಯೋಚಿಸಲಾಯಿತು.


ಇದನ್ನೂ ಓದಿ-OMG: 10 ಬಾಟಲ್ Beer ಕುಡಿದು ಮತ್ತಿನಲ್ಲಿ 18 ಗಂಟೆ ಮಲಗಿದವನ ಗತಿ ಏನಾಗಿದೆ ಗೊತ್ತಾ?


ನಂತರ ಈ ಐಡಿಯಾ ಜಾರಿಗೆ ಬಂತು
ಸೂರ್ಯನ ಬೆಳಕಿನಿಂದಾಗಿ ದೊಡ್ಡ ಪ್ರಮಾಣದ ಬಿಯರ್ ಹಾಳಾಗುವುದನ್ನು ನೋಡಿ, ಬಿಯರ್ ತಯಾರಕರು ಒಂದು ಉಪಾಯ ಮಾಡಿದರು. ಸೂರ್ಯನ ನೇರಳಾತೀತ ಕಿರಣಗಳಿಂದ ಪ್ರಭಾವ ಬೀರದ ಬಾಟಲಿಯಲ್ಲಿ ಬಿಯರ್ ತುಂಬಲು ಉತ್ಪಾದಕರು ನಿರ್ಧರಿಸಿದರು.  ಇದಕ್ಕಾಗಿ ಕಂದು ಬಾಟಲಿಗಳು ಉತ್ತಮವೆಂದು ಸಾಬೀತಾದವು. ಅವರ ಈ ಟ್ರಿಕ್ ಕೆಲಸ ಕೂಡ ಮಾಡಿತು.


ಇದನ್ನೂ ಓದಿ-ದೇಶಾದ್ಯಂತ ಷರತ್ತಿನೊಂದಿಗೆ Liquor shops ಕೂಡ ತೆರೆಯಲಿದೆಯೇ? ಅದರ ಸತ್ಯಾಸತ್ಯತೆ ಇಲ್ಲಿದೆ


ಕಂಡು ಬಾಟಲಿಗಳು ಜಾರಿಯಾದ ಹಲವಾರು ವರ್ಷಗಳ ಬಳಿಕ ಬಿಯರ್ ಅನ್ನು ಹಸಿರು ಬಾಟಲಿಗಳಲ್ಲಿ ಪ್ಯಾಕ್ ಮಾಡುವ ಕೆಲಸ ಆರಂಭವಾಯಿತು. ಇದಕ್ಕೆ ಕಾರಣ ಎಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಕಂದು ಬಾಟಲಿಗಳ ಕೊರತೆ ಎದುರಾದ ಕಾರಣ ಬಿಯರ್ ಕಂಪನಿಗಳು ಬಿಯರ್ ಪ್ಯಾಕ್ ಮಾಡಲು ಹಸಿರು ಬಣ್ಣದ ಬಾಟಲಿಗಳನ್ನು (Green Colour Bottle) ಆಯ್ಕೆ ಮಾಡಿಕೊಂಡವು. ಏಕೆಂದರೆ ಇವುಗಳ ಮೇಲೂ ಕೂಡ ಸೂರ್ಯನ ಬಲವಾದ ಕಿರಣಗಳು ತಟಸ್ಥಗೊಂಡಿರುವುದನ್ನು ಅವರು ಮನಗಂಡರು.


ಇದನ್ನೂ ಓದಿ-ಗುಂಡು ಮಾಡುವ ಈ ಗಮ್ಮತ್ತಿಗೆ ಸೈ ಎಂದ ಸಂಶೋಧನೆ